ಇತ್ತೀಚಿನ ಸುದ್ದಿ
ಕಡೂರು ಸಮೀಪ ಕುರಿ ಮಂದೆ ಮೇಲೆ ಚಿರತೆ ದಾಳಿ: ಸುಮಾರು 4 ಲಕ್ಷ ರೂ. ಮೌಲ್ಯದ 31 ಕುರಿ- ಮೇಕೆ ಸಾವು
15/12/2023, 22:56
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಲ್ಲೇಶ್ವರ ಗ್ರಾಮದಲ್ಲಿ ಕುರಿ ಮಂದೆ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ 31 ಕುರಿಗಳ ಸಾವನ್ನಪ್ಪಿವೆ.
ಚಿರತೆ ದಾಳಿಗೆ 17 ಕುರಿ, 14 ಮೇಕೆಗಳು ಸ್ಥಳದಲ್ಲೇ ಸಾವು ಕಂಡಿವೆ. ತೋಟದ ಮನೆಯಲ್ಲಿದ್ದ ಕುರಿಗಳ ಮೇಲೆ ಚಿರತೆ ದಾಳಿ ಮಾಡಿದೆ.
ಚಂದ್ರು, ಬಸವರಾಜು, ಮಂಜು, ಲಕ್ಷ್ಮಣ್ ಎಂಬುವರಿಗೆ ಸೇರಿದ ಕುರಿಗಳು ಇವು ಆಗಿವೆ. ಸುಶೀಲಮ್ಮ ಎಂಬುವರ ತೋಟದ ಮನೆಯಲ್ಲಿ ಕುರಿಗಳನ್ನು ಕಟ್ಟಲಾಗಿತ್ತು.
ಸುಮಾರು 4 ಲಕ್ಷ ಮೌಲ್ಯದ ಕುರಿಗಳ ಸಾವನ್ನಪ್ಪಿವೆ.
ಕುರಿಗಳ ಮರಣೋತ್ತರ ಪರೀಕ್ಷೆಯನ್ನು ಪಶು ವೈದ್ಯ ಉಮೇಶ್ ಅವರು ನಡೆಸಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.