11:38 AM Wednesday15 - January 2025
ಬ್ರೇಕಿಂಗ್ ನ್ಯೂಸ್
ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ… ಹಸುಗಳ ಕೆಚ್ಚಲು ಕೊಯ್ದ ‘ವ್ಯಾಘ್ರ’ನ ಬಂಧನ: ಬಿಹಾರ ಮೂಲದ ದುಷ್ಟನಿಗೆ ನ್ಯಾಯಾಂಗ ಬಂಧನ ನಂಜನಗೂಡು: ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ ನಿರ್ವಿಘ್ನವಾಗಿ ಮುಕ್ತಾಯ ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ ಸಚಿವ… ಹಸುಗಳ ಕೆಚ್ಚಲು ಕೊಯ್ದು ಆರೋಪಿಗಳ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ ನೈಸ್ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಎಲ್ಲಿ?: ರಾಜ್ಯ ಸರ್ಕಾರದ ವಿರುದ್ಧ…

ಇತ್ತೀಚಿನ ಸುದ್ದಿ

ನಾರಾಯಣ ಶೆಟ್ಟಿ, ಸಿ.ಜೆ.ಕಾಮತ್ ಮುಂತಾದ ಹಿರಿಯರ ಶ್ರಮದ ಫಲವಾಗಿ ಬಿಜೆಪಿ ಜಿಲ್ಲೆಯಲ್ಲಿ ಭದ್ರವಾಗಿ ಬೆಳೆದಿದೆ: ವಿಜಯೇಂದ್ರ ಶ್ಲಾಘನೆ

22/11/2023, 21:50

ಮಂಗಳೂರು(reporterkarnataka.com): ಕರ್ನಾಟಕದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಂಗಳೂರಿನಲ್ಲಿ ಇಂದು ಮೆಚ್ಚುಗೆ ಸೂಚಿಸಿದರು.
ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಮಂಗಳೂರಿಗೆ ಮೊದಲ ಬಾರಿ ಭೇಟಿ ನೀಡಿದ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ವಿ.ಎಸ್.ಆಚಾರ್ಯ, ನಾರಾಯಣ ಶೆಟ್ಟಿ, ಸಿ.ಜೆ.ಕಾಮತ್ ಮತ್ತಿತರ ಅನೇಕ ಹಿರಿಯರ ಶ್ರಮದ ಪ್ರತಿಫಲವಾಗಿ ಬಿಜೆಪಿ ಈ ಜಿಲ್ಲೆಯಲ್ಲಿ ಭದ್ರವಾಗಿ ಬೆಳೆದಿದೆ. ಇದಕ್ಕೆ ಕಾರ್ಯಕರ್ತರ ಶ್ರಮವೂ ಅನನ್ಯ ಎಂದು ಮೆಚ್ಚುಗೆ ಸೂಚಿಸಿದರು.
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಹೆಮ್ಮೆಯ ಪ್ರಧಾನಿ ಮೋದಿ, ಹಿರಿಯರಾದ ಅಮಿತ್ ಶಾ, ಸಂತೋಷ್ ಅವರು ಸೇರಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರ ಮಗ ಎಂದು ಈ ಸ್ಥಾನ ಕೊಟ್ಟಿಲ್ಲ. ನಗರಕ್ಕೆ ಸೀಮಿತವಾಗಿದ್ದ ನಮ್ಮ ಪಕ್ಷವನ್ನು ಹಳ್ಳಿಹಳ್ಳಿಗೆ ಒಯ್ದವರು ಯಡಿಯೂರಪ್ಪ, ಅನಂತಕುಮಾರ್, ಈಶ್ವರಪ್ಪ, ಸದಾನಂದ ಗೌಡ, ನಳಿನ್‍ಕುಮಾರ್ ಕಟೀಲ್ ಮತ್ತಿತರ ಅನೇಕ ಹಿರಿಯರಿದ್ದಾರೆ ಎಂದು ತಿಳಿಸಿದರು.
ಹಿರಿಯರ ಪರಿಶ್ರಮದಿಂದ ಬಿಜೆಪಿ ಈ ಎತ್ತರಕ್ಕೆ ಬೆಳೆದು ನಿಂತಿದೆ ಎಂದರು.
ಕಾಂಗ್ರೆಸ್ ಪಕ್ಷ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅಪಪ್ರಚಾರ ಮಾಡುವ ಮೂಲಕ ರಾಜ್ಯದ ಮತದಾರರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿತು. ಶೇ 40 ಭ್ರಷ್ಟಾಚಾರದ ಆರೋಪ ಮಾಡಿದ್ದರು. ಜನರು ಒಂದು ಕ್ಷಣ ಮೈಮರೆತಿದ್ದರಿಂದ ಕಾಂಗ್ರೆಸ್ ಪಕ್ಷವು ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿದೆ ಎಂದು ವಿವರಿಸಿದರು.
ದೇಶದ ಅಭಿವೃದ್ಧಿ ಕುಂಠಿತವಾದರೂ ಪರವಾಗಿಲ್ಲ; ಇಂಡಿಯ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಅವರು ಟೀಕಿಸಿದರು.
ಮೋದಿ ಅವರು ಕ್ರೀಡಾ ಮನೋಭಾವದಿಂದ ವಿಶ್ವಕಪ್ ಕ್ರಿಕೆಟ್ ನೋಡಲು ಬಂದರೆ ಅದು ಅಪಶಕುನ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ. ಸ್ವಾತಂತ್ರ್ಯ ಬಂದು 50-55 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಇತಿಶ್ರೀ ಹಾಡಿದ ನಾಯಕ ರಾಹುಲ್ ಗಾಂಧಿ ಎಂದು ವಿಶ್ಲೇಷಣೆ ಮಾಡಿದರು. ರಾಹು ಕಾಲದಲ್ಲಿ ನಾವು ಶುಭಕಾರ್ಯ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ. ರಾಹು ಕಾಲಕ್ಕೂ ರಾಹುಲ್ ಗಾಂಧಿಗೂ ಏನೂ ವ್ಯತ್ಯಾಸ ಇಲ್ಲ. ಅವರು ಅಧ್ಯಕ್ಷರಾದ ಬಳಿಕ ಆ ಪಕ್ಷಕ್ಕೆ ರಾಹು ಕಾಲ ಶುರುವಾಗಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿಜೀ ಅವರು ಮತ್ತೊಮ್ಮೆ ಪ್ರಧಾನಿ ಆಗುವುದನ್ನು ತಡೆಯಲು ಯಾವ ದುಷ್ಟ ಶಕ್ತಿಗಳಿಂದಲೂ ಅಸಾಧ್ಯ ಎಂದು ಅವರು ಸವಾಲೆಸೆದರು.
ಹೊಸ ಸರಕಾರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ರೈತರು, ಬಡವರ ಪರವಾಗಿ ಇರಬೇಕಿದ್ದ ಸರಕಾರದ ಬಗೆಗಿನ ನಿರೀಕ್ಷೆಗಳು ಹುಸಿಯಾಗಿದೆ. ಮೋದಿ ಅವರ ನೇತೃತ್ವದ ಸರಕಾರವು ಕಳೆದ ಸುಮಾರು 10 ವರ್ಷಗಳಲ್ಲಿ ಬಡವರು, ರೈತರು ಸೇರಿ ಎಲ್ಲ ಜನರ ಪರವಾಗಿ ಮಾಡಿದೆ. ಭಾರತವನ್ನು ಎಲ್ಲ ಕ್ಷೇತ್ರಗಳಲ್ಲಿ ಮುಂದಕ್ಕೆ ಒಯ್ಯಲು ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರ ಅಧಿಕಾರದ ದರ್ಪದಲ್ಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ 28ಕ್ಕೆ 28 ಸಂಸದರನ್ನು ಕಳಿಸುವ ಮೂಲಕ ಮೋದಿ ಅವರ ಕೈಯನ್ನು ಬಲಪಡಿಸುತ್ತೇವೆ. ಈ ವಿಷಯದಲ್ಲಿ ಕಾರ್ಯಕರ್ತರಿಗೆ ಕಿಂಚಿತ್ತೂ ಅನುಮಾನ ಬೇಡ ಎಂದು ವಿಶ್ವಾಸದಿಂದ ನುಡಿದರು.
ಜಗತ್ತು ಇವತ್ತು ಮೋದಿ ಅವರ ನಾಯಕತ್ವವನ್ನು ಮೆಚ್ಚಿಕೊಂಡಿದೆ. ಒಂದೆಡೆ ಮೋದಿ ಮತ್ತೊಂದೆಡೆ ರಾಹುಲ್ ಗಾಂಧಿ. ರಾಜ್ಯದ ಪ್ರಜ್ಞಾವಂತ ಮತದಾರರು ಮತ್ತೊಮ್ಮೆ ಮೋದಿ ಅವರಿಗೆ ಬೆಂಬಲ ಕೊಡಲಿದ್ದಾರೆ ಎಂದು ನುಡಿದರು.
ದೇಶ, ರಾಜ್ಯದ ಇತಿಹಾಸದಲ್ಲಿ ಕೇವಲ ಆರು ತಿಂಗಳಲ್ಲೇ ಜನಪ್ರಿಯತೆಯನ್ನು ಕಳಕೊಂಡ ಸರಕಾರ ಇದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರಕಾರ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕುಂತಲ್ಲಿ, ನಿಂತಲ್ಲಿ ಕೇಂದ್ರವನ್ನು ಟೀಕಿಸುತ್ತಾರೆ. ಬರಗಾಲ ಇದೆ; 136 ಶಾಸಕರಿದ್ದರೂ ರಾಜ್ಯದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ಟೀಕಿಸಿದರು.
ಬಿಜೆಪಿ ರೈತರಿಗೆ ನ್ಯಾಯ ಕೊಡಲು ಮುಂದಾಗಿದೆ. ಆದರೆ, ಕಾಂಗ್ರೆಸ್ಸಿಗರು ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕಕ್ಕೆ ಮುಂದಾಗಿದೆ. ನಿಮ್ಮ ಬೋರ್ಡ್ ಚಯರ್‍ಮ್ಯಾನ್ ತೆಗೆದುಕೊಂಡು ರೈತರಿಗೆ ಏನು ಆಗಬೇಕಿದೆ ಎಂದು ಕಟುವಾಗಿ ಟೀಕಿಸಿದರು. ಸಿಎಂ ಮನೆಯನ್ನು ಹತ್ತಾರು ಕೋಟಿ ವೆಚ್ಚದಲ್ಲಿ ನವೀಕರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ 6 ಸಾವಿರದ ಜೊತೆ ಯಡಿಯೂರಪ್ಪ ಅವರು 4 ಸಾವಿರ ಕೊಡುತ್ತಿದ್ದರು. ಸಿದ್ದರಾಮಯ್ಯನವರು ಅದನ್ನು ನಿಲ್ಲಿಸಿದ್ದಾರೆ. ಇವರದು ರೈತಪರ ಸರಕಾರವೇ ಎಂದು ಪ್ರಶ್ನಿಸಿದರು. ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಅಲ್ಪಸಂಖ್ಯಾತರು ಬೆಂಕಿ ಹಚ್ಚಿದರೂ ಆ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರರು ಅವರನ್ನು ಸಮಾಧಾನಿಸಲಿಲ್ಲ. ಅಲ್ಪಸಂಖ್ಯಾತರ ಮತಕ್ಕಾಗಿ ದಲಿತ ಶಾಸಕರನ್ನು ಬಲಿ ಕೊಡಲು ಮುಂದಾದರು ಎಂದರು.
ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಅಲ್ಲ. ಆದರೆ, ಈ ದೇಶ, ರಾಜ್ಯದಲ್ಲಿ ಹುಟ್ಟಿ ದೇಶದ್ರೋಹಿ ಕೆಲಸ ಮಾಡುವವರನ್ನು ಕ್ಷಮಿಸುವ ಪ್ರಶ್ನೆ ಇಲ್ಲ ಎಂದು ಎಚ್ಚರಿಸಿದರು. ಜಮೀರ್ ಅಹ್ಮದ್ ದುರಹಂಕಾರದ ಮಾತನಾಡಿದ್ದಾರೆ. ಸಭಾಧ್ಯಕ್ಷರ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ. ಸಂವಿಧಾನ ವಿರೋಧಿ ಹೇಳಿಕೆ ಕೊಟ್ಟ ಜಮೀರ್ ಅಹ್ಮದ್ ಅವರು ಬೆಳಗಾವಿ ಅಧಿವೇಶನಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಸವಾಲು ಹಾಕಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ರಾಜ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುವ ವೇಳೆ ಯಡಿಯೂರಪ್ಪ ಮತ್ತಿತರ ಹಿರಿಯ ನಾಯಕರು 4 ವರ್ಷ 3 ತಿಂಗಳು ನೀಡಿದ ಸಹಕಾರವನ್ನು ಸ್ಮರಿಸಿದರು. ವಿಜಯೇಂದ್ರ ಅವರಿಗೂ ಪಕ್ಷವು ಒಗ್ಗಟ್ಟಿನಿಂದ ಸಹಕಾರ ಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗೂಡಿ, ವಿಜಯೇಂದ್ರರ ನೇತೃತ್ವದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಸಂಕಲ್ಪ ಮಾಡಿದ್ದೇವೆ ಎಂದು ಅವರು ತಿಳಿಸಿದರು. ವಿಜಯೇಂದ್ರರ ಪ್ರವಾಸಕ್ಕೆ ಎಲ್ಲ ಕಡೆಗಳಲ್ಲಿ ಅಭೂತಪೂರ್ವ ಸ್ವಾಗತ ಲಭಿಸುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು. ಮತ್ತೆ ಕರ್ನಾಟಕವನ್ನು ಬಿಜೆಪಿಯ ಭದ್ರಕೋಟೆಯಾಗಿ ಮಾಡುವ ಶಕ್ತಿಯನ್ನು ಭಗವಂತನು ವಿಜಯೇಂದ್ರರಿಗೆ ಕೊಡಲಿ ಎಂದು ಹಾರೈಸಿದರು.
ಜಿಲ್ಲಾಧ್ಷಕ್ಷ ಸುದರ್ಶನ್ ಮೂಡಬಿದಿರೆ, ಶಾಸಕರು, ಪಕ್ಷದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ನಳಿನ್ ಕುಮಾರ್ ಕಟೀಲ್ ಮತ್ತು ಇತರ ಜನಪ್ರತಿನಿಧಿಗಳನ್ನು ಗೌರವಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು