8:09 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಹಾಡುಗಳು ಮಧುರ ಲಯ ಸಾಹಿತ್ಯ ಸಂಯೋಜನೆ: ವಿದ್ವಾನ್ ಯಶವಂತ ಎಂ.ಜಿ.

05/09/2023, 14:55

ಉಡುಪಿ(reporterkarnataka.com): ಹಾಡುಗಳು ಮಧುರ, ಲಯ, ಸಾಹಿತ್ಯ, ಜೊತೆಗೆ ಸಂಗೀತ ವಾದ್ಯಗಳನ್ನು ಹೊಂದಿರುವ ಸಂಗೀತ ಸಂಯೋಜನೆಯಾಗಿದೆ. ಅಬಾಲವೃದ್ದರಾಗಿ ಸಂಗೀತವನ್ನು ಕೇಳುತ್ತಾರೆ ಎಂದು ಶಿಕ್ಷಕ  ವಿದ್ವಾನ್ ಯಶವಂತ ಹೇಳಿದರು.
ಅವರು ಭಾನುವಾರ  ಮಣಿಪಾಲದ ಪರ್ಣಕುಟೀರ ಸಭಾಂಗಣದಲ್ಲಿ ನಡೆದ ಸ್ವರಾಮೃತ ತಂಡದ ಲೋಗೋ ಬಿಡುಗಡೆ ಗೊಳಿಸಿ ಮಾತನಾಡಿದರು.
ಹಾಡುಗಳನ್ನು ಸಂಗೀತ ಕೃತಿಗಳೆಂದು ಪರಿಗಣಿಸಲಾಗುತ್ತದೆ . ಸ್ಫೂರ್ತಿ, ಸಂವೇದನೆ ಮೂಲಕ ಮನಸ್ಸಿಗೆ ಅಪ್ತವಾಗುತ್ತವೆ ಎಂದರು.
ಕೆಎಂಸಿ ಅಸ್ಪತ್ರೆಯ  ಇಲೆಕ್ಟ್ರಿಕಲ್ ಇಂಜಿನಿಯರ್  ರವೀಂದ್ರ ಮಾತನಾಡಿ, ಸಾಹಿತ್ಯಕ್ಕೆ ರಾಗವನ್ನು ಕೊಟ್ಟು ಹಾಡುಗಳನ್ನು ಹಾಡುತ್ತಾ ಮನಸ್ಸನ್ನು  ಮುದಗೊಳಿಸಲು ಸಾಧ್ಯ ಎಂದರು.
ಗಾಯಕಿ ರಶ್ಮಿಅರ್. ಪ್ರಭು  ಮಾತನಾಡಿ, ಸ್ವರಕ್ಕೆ ಅಮೃತವನ್ನು ನೀಡುವ ಸ್ವರಾಮೃತ ಪರಿಕಲ್ಪನೆ ಅದ್ಭುತವಾಗಿದೆ. ಹಾಡುಗಾರರಿಗೆ ಈ ತಂಡ ಆಶ್ರಯ ನೀಡಲಿದೆ ಎಂದರು
ಖ್ಯಾತ ಗಾಯಕಿ ವೈಷ್ಣವಿ ರವೀಂದ್ರ ಮಾತನಾಡಿ, ಹಾಡುಗಾರಿಕೆ ಕೇವಲ ಮನರಂಜನೆ ಯಾಗಿಸದೆ ,ಸ್ಪರ್ಧಾತ್ಮಕವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಉದ್ಯಮಿ ರಾಧಾಕೃಷ್ಣ ಮಣಿಪಾಲ್ ಮಾತನಾಡಿದರು.
ಶಾಶ್ವತ್ ತೆಳ್ಳಾರು, ಡಾ.ಗುರುಪ್ರಸಾದ್  ಶುಭ ಹಾರೈಸಿದರು.

ಸಭೆಯಲ್ಲಿ ಪತ್ರಕರ್ತ ಹರಿಪ್ರಸಾದ್ ನಂದಳಿಕೆ, ರಾಂ ಅಜೆಕಾರು , ಚಿತ್ತಾರ ಸೇವಾ ರೂವಾರಿ ಸುಜಿತ್ ನಂದಳಿಕೆ,  ಮಲಬಾರ್ ಗೋಲ್ಡ್ ಮಾರ್ಕೆಟಿಂಗ್ ವ್ಯವಸ್ಥಾಪಕ ರಾಘವೇಂದ್ರ ನಾಯಕ್, ಲೇಖಕಿ ಸುಮ ಕಿರಣ್ , ಲೆಕ್ಕ ಪರಿಶೋಧಕ ಸುರೇಶ್, ಗೀತಾಂಜಲಿ , ಖ್ಯಾತ ಛಾಯಾಗ್ರಾಹಕ ಶರತ್ ಕಾನಂಗಿ, ಡಾ. ಸ್ನೇಹ ಗುರುಪ್ರಸಾದ್, ಉದ್ಯಮಿ ಗಳಾದ ಹರೀಶ್ ಶೆಟ್ಟಿ, ಶಶಿಕಾಂತ್ ಪ್ರಭು ,ಜಯಾನಂದ ಕುಲಾಲ್ ,ಪ್ರಸಾದ್‌ಅಚಾರ್ಯ, ರೂಪೇಶ್ , ಸುಭಾಸ್
ಕಿರಣ್   ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು