11:32 PM Wednesday13 - May 2026
ಬ್ರೇಕಿಂಗ್ ನ್ಯೂಸ್
ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ… ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ… ದೇಶದ ಜನತೆಗೆ ಮೋದಿ ಮಿತವ್ಯಯದ ಕರೆ: ವಾಗ್ದಾಳಿ ನಡೆಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು ಶೃಂಗೇರಿ ಕ್ಷೇತ್ರ ಮರು ಎಣಿಕೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ: ಮತ್ತೆ ರಾಜೇಗೌಡ… ಪತಿಯೊಂದಿಗೆ ಜಗಳವಾಡಿ 8ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ: ಸಾಮಾಜಿಕ ಜಾಲತಾಣಗಳಲ್ಲಿ ದೃಶ್ಯ…

ಇತ್ತೀಚಿನ ಸುದ್ದಿ

ಸಂಬಳಗ್ ತುಳುಟ್ಟು ದಾದ ಪನ್ಪೆರ್…?: ಶಾಂತಿನಗರ ಗಣೇಶೋತ್ಸವದಲ್ಲಿ ತುಳು ಪ್ರಶ್ನಾವಳಿ

01/09/2023, 20:57

ಮಂಗಳೂರು(reporterkarnataka.com): ಸಂಬಳಗ್ ತುಳುಟ್ಟು ದಾದ ಪನ್ಪೆರ್…?, ನವೀನ್ ಡಿ.ಪಡೀಲ್ ನಡುಬೈಲ್ ನಾರಾಯಣೆ ಪಾತ್ರ ಮಲ್ತಿನ ನಾಟಕ ಒವು..?, ಅಜಬಿರು ಪಂಡ ಎಂಚಿನ…? ಕ್ಯಾವಂಡೀಸ್ ಪರ್‌ಂದ್‌ನ್ ದಕ್ಷಿಣ ಕನ್ನಡ ಜಿಲ್ಲೆಗ್ ಪರಿಚಯ ಮಲ್ದಿನ ಕೃಷಿಕೆರ್ ಏರ್…?
ಹೀಗೆ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರ, ಭಾಷೆ, ಸಾಧಕರ ಬಗ್ಗೆ ಬೆಳಕು ಚೆಲ್ಲುವ ತುಳು ಪ್ರಶ್ನಾವಳಿ ಮಂಗಳೂರಿನಲ್ಲಿ ಹರಿದಾಡುತ್ತಿದೆ.
ಕಾವೂರಿನ ಶಾಂತಿನಗರದ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ನಡೆಯುವ ಗಣೇಶೋತ್ಸವ ಪ್ರಯುಕ್ತ 100 ಪ್ರಶ್ನೆಗಳ ರಸಪ್ರಶ್ನೆ ತಯಾರಿಸಲಾಗಿದ್ದು, ತುಳುನಾಡಿನ ಸಮಗ್ರ ವಿಷಯದ ಬಗ್ಗೆ ಬೆಳಕು ಚೆಲ್ಲುತ್ತಿದೆ. ಕೃಷಿ, ತುಳುನಾಡಿನ ಸಾಧಕರು, ಒಗಟುಗಳು, ತುಳುನಾಡಿನ ದೇವಸ್ಥಾನ, ದೈವಸ್ಥಾನಗಳು, ನಾಟಕ, ಯಕ್ಷಗಾನ, ಕಂಬಳ, ಸಿನಿಮಾ ಇತ್ಯಾದಿ ಹಲವು ವಿಷಯಗಳ ಬಗ್ಗೆ ಪ್ರಶ್ನೆ ಸಿದ್ಧಪಡಿಸಲಾಗಿದೆ.
ಮಣಿಮೇಖಲೆ, ರತ್ನಕಂಕಣ ಪ್ರಸಂಗ ಬರೆದವರು ಯಾರು?, ರಂಗಾಯಣ ರಘು ಅಭಿನಯಿಸಿದ ತುಳುವಿನ ಸಿನಿಮಾ ಯಾವುದು?, ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಮಲ್ತೊಂದುಪ್ಪುನ ತುಳುನಾಡ್ದ ಸಂಸ್ಥೆ ಒವು…..?ಹೀಗೆ ಮರೆತು ಹೋಗಿರುವ ತುಳು ಭಾಷೆಯ ಶಬ್ದಗಳ ಬಗ್ಗೆಯೂ ಸಾಕಷ್ಟು ಮಾಹಿತಿ ನೀಡುವ ವಿಷಯಗಳನ್ನು ಅಳವಡಿಸಲಾಗಿದೆ. ಭಾನುವಾರದಿಂದ ಪ್ರಶ್ನೆಪತ್ರಿಕೆ ಹಂಚುವ ಕೆಲಸ ಆರಂಭವಾಗಿದ್ದು, ಸುಮಾರು 20 ದಿನಗಳ ಕಾಲಾವಧಿ ಸಿಗಲಿದೆ. ಉತ್ತರ ಬರೆಯುವ ಆಸಕ್ತರು ಪುಸ್ತಕಗಳನ್ನು ನೋಡಿಯೂ, ತುಳು ವಿದ್ವಾಂಸರಲ್ಲಿ ಕೇಳಿಯೂ ಉತ್ತರ ಬರೆಯಬಹುದು. ತುಳುನಾಡಿನ ಬಗ್ಗೆ ಹೆಚ್ಚು ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ ಇದನ್ನು ತಯಾರಿಸಿದ್ದು ಸೆ.26ರ ಒಳಗೆ ಉತ್ತರ ಬರೆದು ಶಾಂತಿನಗರ ಗಣೇಶೋತ್ಸವ ಸಮಿತಿಗೆ ನೀಡಬಹುದು.
ನಾಲ್ಕು ವರ್ಷಗಳಿಂದ ಬೇರೆ ಬೇರೆ ವಿಷಯಗಳ ಬಗ್ಗೆ ಹೀಗೆ ಪ್ರಶ್ನಾವಳಿ ತಯಾರಿಸುತ್ತಿದ್ದು ಜನರಿಂದ ಉತ್ತಮ ಸ್ಪಂದನೆ ಲಭಿಸಿದೆ. ಪ್ರತಿವರ್ಷವೂ ಹೀಗೆ ಪ್ರಶ್ನಾವಳಿ ನೀಡಿದರೆ ಜನರಲ್ಲಿ ಸಾಮಾನ್ಯ ಜ್ಞಾನ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಜನರೇ ತಿಳಿಸುತ್ತಾರೆ. ಮೊದಲ ವರ್ಷ 2667 ಜನ ಉತ್ತರ ಬರೆದಿದ್ದು ಕಳೆದ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಮಾಡಿದ್ದ ಪ್ರಶ್ನಾವಳಿಗೆ 1640 ಜನ ಉತ್ತರ ಬರೆದಿದ್ದರು. ವರ್ಷವರ್ಷವೂ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಪತ್ರಕರ್ತ ಮೋಹನ್‌ದಾಸ್ ಮರಕಡ ಈ ಪ್ರಶ್ನೆ ಸಿದ್ಧಪಡಿಸುತ್ತಿದ್ದಾರೆ ಎಂದು ಶಾಂತಿನಗರ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿನಯಕುಮಾರ್ ತಿಳಿಸಿದ್ದಾರೆ.
ಅತಿ ಹೆಚ್ಚು ಸರಿ ಉತ್ತರ ಬರೆದವರಿಗೆ ಪ್ರಥಮ ಬಹುಮಾನ 8,000 ರೂ., ದ್ವಿತೀಯ 4,000 ರೂ., ತೃತೀಯ 3,000 ರೂ. ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿ ಹಾಗೂ ಪ್ರಶ್ನೆಪತ್ರಿಕೆಗೆ 9741505155 ಅಥವಾ 9901319694 ನಂಬರ್‌ಗೆ ಸಂಪರ್ಕಿಸಬಹುದು.

ಇತ್ತೀಚಿನ ಸುದ್ದಿ

ಜಾಹೀರಾತು