2:26 PM Saturday27 - July 2024
ಬ್ರೇಕಿಂಗ್ ನ್ಯೂಸ್
ಧಾರಾಕಾರ ಮಳೆ: ತೀರ್ಥಹಳ್ಳಿ ರಥಬೀದಿಯಲ್ಲಿ ಮನೆ ಗೋಡೆ ಕುಸಿತ ಬಿರುಸಿನ ಗಾಳಿ ಮಳೆ: ಚಿಕ್ಕಮಗಳೂರು ಜಿಲ್ಲೆಯ 6 ತಾಲೂಕುಗಳ ಶಾಲೆಗಳಿಗೆ ಇಂದು ರಜೆ ಅವ್ಯಾಹತ ಬಿರುಸಿನ ಗಾಳಿ ಮಳೆ: ತೀರ್ಥಹಳ್ಳಿ ತಾಲೂಕಿನಾದ್ಯಂತ ನಾಳೆ ಶಾಲಾ- ಕಾಲೇಜುಗಳಿಗೆ ರಜೆ ವಾಹನಗಳಲ್ಲಿ ಪ್ರಖರ ಬೆಳಕಿನ ಬಲ್ಬ್ ಅಳವಡಿಕೆ: ಒಟ್ಟು 1170 ಪ್ರಕರಣ ದಾಖಲು; 5.86… ನಾಗಬೇನಾಳ: ಶ್ರೀ ಸಂತ ಸೇವಾಲಾಲ್ ಹಾಗೂ ಶ್ರೀ ಮರಿಯಮ್ಮ ದೇವಿ ಜಾತ್ರಾ ಮಹೋತ್ಸವ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ: ಮರೋಳಿಯ ಡೇಂಜರ್ ಟ್ರೀ ತೆರವಿಗೆ ಮೀನಮೇಷ! ಸ್ಪೆಲ್ ಬೀ ರಾಜ್ಯಮಟ್ಟದ ಗ್ರ್ಯಾಂಡ್ ಫಿನಾಲೆ: ಮೇರಿಹಿಲ್ ಮೌಂಟ್ ಕಾರ್ ಮೆಲ್ ಸೆಂಟ್ರಲ್… 3 ಘಾಟ್ ಗಳಲ್ಲಿ ಸಂಚಾರ ನಿಷೇಧ: ಜಿಲ್ಲಾಧಿಕಾರಿಗಳ ಸಮನ್ವಯತೆ ಕೊರತೆ ಬಗ್ಗೆ ಪಿಡಬ್ಲ್ಯೂಡಿ… ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಭಾರೀ ಹೆಚ್ಚಳ: ತಗ್ಗು ಪ್ರದೇಶ ಮುಳುಗಡೆ;… ಪ್ರವಾಹ: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ನಂಜುಂಡೇಶ್ವರನಿಗೆ ಜಲದಿಗ್ಬಂಧನ

ಇತ್ತೀಚಿನ ಸುದ್ದಿ

ಜೈ ತುಳುನಾಡ್ ಬೆಂಗಳೂರು ಘಟಕದ ವಾರ್ಷಿಕ ಮಹಾಸಭೆ: ಧನಂಜಯ ಆಚಾರ್ಯ ನೂತನ ಅಧ್ಯಕ್ಷ

20/03/2024, 11:30

ಬೆಂಗಳೂರು(reporterkarnataka.com): ಜೈ ತುಳುನಾಡ್ ಬೆಂಗಳೂರು ಘಟಕದ ವಾರ್ಷಿಕ ಮಹಾಸಭೆ ಭಾನುವಾರ ಮೆಜೆಸ್ಟಿಕ್ ನ ಸ್ವಾಗತ್ ಹೋಟೆಲಿನಲ್ಲಿ ನಡೆಯಿತು.


ಸಭೆಯಲ್ಲಿ ಪ್ರಸ್ತುತ ಸಮಿತಿ ಕಳೆದ ವರ್ಷ ಮಾಡಿದ ತುಳು ಪರವಾದ ಕಾರ್ಯಕ್ರಮಗಳ ಬಗ್ಗೆ ವರದಿ ವಾಚನ ಸಲ್ಲಿಸಲಾಯಿತು. ಹಾಗೆಯೇ ಸಂಸ್ಥಾಪಕ ಸಮಿತಿಯ ಮಾರ್ಗದರ್ಶನದಲ್ಲಿ, ಜೈ ತುಳುನಾಡ್ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ವಿಶು ಶ್ರೀಕೇರ ಅವರ ಉಪಸ್ಥಿತಿಯಲ್ಲಿ ಹೊಸ ಸಮಿತಿ ರಚನೆಯಾಯಿತು. ಧನಂಜಯ ಆಚಾರ್ಯ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ನಿಧೀಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಅಕ್ಷಯ್ ಆಚಾರ್ಯ, ಜೊತೆ ಕಾರ್ಯದರ್ಶಿಗಳಾಗಿ ಶಕುಂತಳಾ ಹಾಗೂ ವಿನಯ್, ಖಜಾಂಜಿಯಾಗಿ ಅನುದೀಪ್ ಶೆಟ್ಟಿ , ಜೊತೆ ಖಜಾಂಜಿಯಾಗಿ ಪ್ರಗತಿ ಎಸ್., ಸಂಘಟನಾ ಕಾರ್ಯದರ್ಶಿಗಳಾಗಿ ಶರತ್ ಕೊಡವೂರು, ಕಾಶಿನಾಥ್ ಮತ್ತು ಪ್ರಶಾಂತ್ ಅವರು ಆಯ್ಕೆಯಾದರು.
ಅಧ್ಯಕ್ಷರಾಗಿ ಆಯ್ಕೆಯಾದ, ಧನಂಜಯ ಆಚಾರ್ಯ ಅವರು ಮಾತನಾಡುತ್ತಾ ತುಳು ಭಾಷೆಯ ಬೆಳವಣಿಗೆ ಹಾಗೂ ತುಳು ಭಾಷೆಯ ಉಳಿವಿಗೆ ಶ್ರಮಿಸುವೆ ಮತ್ತು ತುಳುಪರ ಕೆಲಸ ಮಾಡುವವರ ಜೊತೆ ನಾವು ಬೆನ್ನುಲುಬಾಗಿ ನಿಲ್ಲುತ್ತೇವೆ. ಆ ಸಲುವಾಗಿ ಸರ್ವ ತುಳುವರ ಸಹಕಾರವನ್ನು ಕೋರುತ್ತೇವೆ ಎಂದು
ಹೇಳಿದರು.
ವಿಶು ಶ್ರೀಕೇರ ಅವರು ಮಾತನಾಡುತ್ತಾ ಜೈ ತುಳುನಾಡು (ರಿ.) ಸಂಘಟನೆಯ ಸಾಧನೆಯ ಬಗ್ಗೆ, ಸಾಮರ್ಥ್ಯದ ಬಗ್ಗೆ ತಿಳಿಸುತ್ತಾ ಹೊಸ ಘಟಕದ ಅವಧಿಯಲ್ಲಿ ಸಂಘಟನೆ ಇನ್ನಷ್ಟು ಬಲಿಷ್ಠವಾಗಲಿ ಎಂದು ಶುಭ ಹಾರೈಸಿದರು. ಘಟಕದ ಮಾಜಿ ಅಧ್ಯಕ್ಷರಾದ ವಿಶಾಲ್ ಕೊಡಿಯಾಲ್ ಅವರು ತಮ್ಮ ಅವಧಿಯಲ್ಲಿ ಘಟಕದ ವತಿಯಿಂದಾಗಿರುವ ಸಾಧನೆಗಳನ್ನು ವಿವರಿಸಿದರು ಹಾಗೂ ಅವಕಾಶ ಕಲ್ಪಿಸಿದ ಸಂಘಟನೆಗೆ ಕೃತಜ್ಞತೆಯನ್ನು ಸಲ್ಲಿಸಿದರು. ನಿಧೀಶ್ ಶೆಟ್ಟಿ ಯವರು ವರದಿ ವಾಚಿಸಿದರು. ಧನಂಜಯ ಅವರು ಲೆಕ್ಕಪತ್ರ ವಾಚಿಸಿದರು. ಸಭೆಯಲ್ಲಿ ಸ್ಥಾಪಕ ಸಮಿತಿಯ ಸದಸ್ಯರು , ಕೇಂದ್ರ ಸಮಿತಿಯ ಸದಸ್ಯರು ಹಾಗೂ ಘಟಕದ ಸದಸ್ಯರು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು