4:51 PM Friday4 - October 2024
ಬ್ರೇಕಿಂಗ್ ನ್ಯೂಸ್
ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಕೊಟ್ಟಿಗೆಹಾರ ಭೇಟಿ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ… ಕೊಟ್ಟಿಗೆಹಾರ: ಗಾಂಧಿ ಜಯಂತಿಯಂದು ಮಾಂಸ ಮಾರಾಟ; ನಿಯಮ ಉಲ್ಲಂಘಿಸಿದ ಮಾರಾಟಗಾರರು ಗಾಂಧೀಜಿ ಚಿಂತನೆಗಳು ಎಲ್ಲಾ ಪತ್ರಕರ್ತರಿಗೆ ಎಂದೆಂದಿಗೂ ಮಾರ್ಗದರ್ಶಿ: ಮಂಗಳೂರು ಬಿಷಪ್ ಡಾ. ಪೀಟರ್… ಸಾಲ ಕೇಳ್ತಾ ಇಲ್ಲ, ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಿ: ಪ್ರತಿಭಟನಾ ಸಭೆಯಲ್ಲಿ ರಾಜ್ಯ… ಈಚರ್ ಲಾರಿ – ಬೈಕ್ ಮಧ್ಯೆ ಭೀಕರ ಅಪಘಾತ: ಮೂವರು ಮಕ್ಕಳು ಸಹಿತ… ಬೈಕ್ ಗೆ ಗುದ್ದಿದ ಕಾಡುಕೋಣ: ರಸ್ತೆಗೆ ಬಿದ್ದು ಸವಾರನಿಗೆ ಗಾಯ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಪೋಕ್ಸೋ ನ್ಯಾಯಾಲಯದಲ್ಲಿ ಆರೋಪಿಯ ಖುಲಾಸೆ ಶ್ರೀನಿವಾಸಪುರ ವಿದ್ಯಾರ್ಥಿಗಳ ವಸತಿ ನಿಲಯ ದುರವಸ್ಥೆ: ಉಪ ಲೋಕಾಯುಕ್ತರು ಗರಂ; ಸರಕಾರಿ ಆಸ್ಪತ್ರೆಗೂ… ಬೆಂಗಳೂರಿನ ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಮೊದಲ ಪದವಿ ಪ್ರದಾನ; 23 ಮಂದಿ ವಿದ್ಯಾರ್ಥಿಗಳಿಗೆ… ಖಾಯಂ ಪಿಡಿಒ ನೇಮಕಕ್ಕೆ ಆಗ್ರಹಿಸಿ ತರುವೆ ಗ್ರಾ‌ಮ ಪಂಚಾಯಿತಿ ಎದುರು ಏಕಾಂಗಿ ಹೋರಾಟ

ಇತ್ತೀಚಿನ ಸುದ್ದಿ

ನಂದಳಿಕೆ: ‘ಸತ್ಯಮಾಲೋಕಂದ ಸಿರಿ’ ತುಳು ಕೃತಿ ಲೋಕಾರ್ಪಣೆ

03/07/2023, 11:31

ನಂದಳಿಕೆ(reporterkarnataka.com): ಕೃತಿ ಬರೆಯಲು ಇಚ್ಚಾಶಕ್ತಿ, ಶ್ರದ್ಧೆ ಪ್ರಮುಖ ಪಾತ್ರವಹಿಸುತ್ತದೆ ಎಂದು ತುಳುಕೂಟ ಉಡುಪಿ ಇದರ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಹೇಳಿದರು ಅವರು ನಂದಳಿಕೆ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಚಾವಡಿ ಅರಮನೆಯ ಸರಳಾ ಎಸ್. ಎಸ್. ಹೆಗ್ಡೆ ಬರೆದ “ಸತ್ಯಮಾಲೋಕಂದ ಸಿರಿ” ಕೃತಿ ಲೋಕಾರ್ಪಣೆ ಗೊಳಿಸಿ ಮಾತನಾಡಿದರು.
ತುಳುನಾಡು ದೈವಗಳನಾಡಗಿದೆ. ಇಲ್ಲಿನ ಸಿರಿಗಳ ಕಾರ್ಣಿಕ ಮೂಲಕ ಸಂಸ್ಕೃತಿಯ ಶ್ರೀಮಂತಿಕೆ ತೋರಿಸುತ್ತದೆ. ಸಿರಿಗಳ ಜನಪದವನ್ನು ಕೃತಿಯನ್ನಾಗಿಸಿ ಉಳಿಸುವ ಕಾರ್ಯ ಮಹತ್ವದ್ದಾಗಿದೆ ಎಂದರು.

ವಿಜಯಾ ಬ್ಯಾಂಕ್ ವಿಶ್ರಾಂತ ಪ್ರಬಂಧಕ ಭುವನ ಪ್ರಸಾದ್ ಹೆಗ್ಡೆ ಮಾತನಾಡಿ, ನಂದಳಿಕೆ ಸಿರಿ ಜಾತ್ರೆಗೆ ಪ್ರಸಿದ್ಧವಾಗಿದೆ. ಇಲ್ಲಿಯ ಸಿರಿಗಳ ಕಥೆಗಳನ್ನು ಪುಸ್ತಕ ರೂಪದಲ್ಲಿ ಬರೆದಿರುವುದು ಅಭಿನಂದನಾರ್ಹವಾಗಿದೆ. ಮುಂದಿನ ಜನಾಂಗಕ್ಕೆ ಸ್ಥಳದ ಮಹತ್ವದ ಹಾಗೂ ಇತಿಹಾಸ ಗುರುತಿಸಲು ಸಾಧ್ಯವಾಗುತ್ತದೆ. ಕವಿ ಮುದ್ದಣ ಸೇರಿದಂತೆ ಅನೇಕ ಸಾಹಿತಿಗಳ ನಂದಳಿಕೆಯೆ ಮೂಲವಾಗಿದೆ ಎಂದರು.
ಜನಪದ ವಿದ್ವಾಂಸ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಅರುಣ ಕುಮಾರ್ ಎಸ್. ಆರ್. ಮಾತನಾಡಿ ಸತ್ಯಮಾಲೋಕಂದ ಸಿರಿ ಈ ಪುಸ್ತಕದಲ್ಲಿ ಶ್ರೀಮಂತ ತುಳುನಾಡ ಸಂಸ್ಕೃತಿಯನ್ನು ತೆರೆದಿಡಲಾಗಿದೆ. ಕುಂದಾಪುರದಿಂದ ಹಿಡಿದು ಉಜಿರೆ ವರೆಗಿನ ಶ್ರೀಮಂತ ತುಳುನಾಡು ಸಿರಿಗಳ ಆರಾಧನೆಯ ಕಥೆಗಳು ಯುವಜನಾಂಗಕ್ಕೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ. ಪುಸ್ತಕ ಅನಾವರಣ ಮಾಡುವ ಮೂಲಕ ತುಳುನಾಡಿನ ಇತಿಹಾಸವನ್ನು ಮರುಕಳಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಲೇಖಕಿ ಸರಳಾ ಎಸ್. ಹೆಗ್ಡೆ, ಮಾತನಾಡಿ ಪಾರ್ದನಗಳು ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ. ಅದನ್ನು ಕ್ರೋಢೀಕರಿಸಿ ಪುಸ್ತಕ ಬರೆಯಲಾಗಿದೆ ಎಂದರು.
ಕವತ್ತಾರು ವಿಷ್ಣುರಾಜ ಭಟ್, ದೇವಸ್ಥಾನದ ತಂತ್ರಿ ಹರೀಶ್ ತಂತ್ರಿ ಮಾತನಾಡಿ ಶುಭಹಾರೈಸಿದರು.
ಸಭೆಯಲ್ಲಿ ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೆಸರ ಚಾವಡಿ ಅರಮನೆಯ ಸುಂದರರಾಮ ಹೆಗ್ಡೆ ಉಪಸ್ಥಿತರಿದ್ದರು, ಜಯಂತಿ ಶೆಟ್ಟಿ ಪ್ರಾರ್ಥಿಸಿದರು. ನಂದಳಿಕೆ ಸುಹಾಸ್ ಹೆಗ್ಡೆ ಸ್ವಾಗತಿಸಿದರು. ಸೀತಾರಾಂ ಭಟ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ಧನ್ಯವಾದವಿತ್ತರು.

ಇತ್ತೀಚಿನ ಸುದ್ದಿ

ಜಾಹೀರಾತು