4:08 PM Thursday13 - November 2025
ಬ್ರೇಕಿಂಗ್ ನ್ಯೂಸ್
Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್ ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ…

ಇತ್ತೀಚಿನ ಸುದ್ದಿ

ತಲವಾರು ದಾಳಿ ಪ್ರಕರಣ: ಕಾವೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; 3 ಮಂದಿ ಆರೋಪಿಗಳ ಬಂಧನ

22/08/2023, 19:18

ಮಂಗಳೂರು(reporterkarnataka.com): ನಗರದ ಕಾವೂರು ಬಳಿ ಸ್ಕೂಟಿಯಲ್ಲಿ ಬಂದು ತಲವಾರು ದಾಳಿ ನಡೆಸಲು ಯತ್ನಿಸಿದ 3 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು
ಉರುಂದಾಡಿ ಗುಡ್ಡೆಯ ಚರಣ್, ಸುಮಂತ್ ಬರ್ಮನ್ ಹಾಗೂ ಕೋಡಿಕಲ್ ನ ಅವಿನಾಶ್ ಎಂದು ಗುರುತಿಸಲಾಗಿದೆ. ಕಾವೂರು ಪೊಲೀಸ್‌ ಕ್ಷಿಪ್ರ ಕಾರ್ಯಾಚರಣೆಯಿಂದ ಕೇವಲ 24 ಗಂಟೆಗಳಲ್ಲಿ ತಲವಾರು ಸಮೇತ ಮೂವರ ಆರೋಪಿಗಳ ದಸ್ತಗಿರಿ ಮಾಡಲಾಗಿದೆ.
ಆಗಸ್ಟ್ 20ರಂದು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂ.ವಿ.ಶೆಟ್ಟಿ ಕಾಲೇಜು ರೋಡ್ ಬಳಿ ಚಂದ್ರಹಾಸ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಚರಣ್, ಸುಮಂತ್ ಬರ್ಮನ್ ಹಾಗೂ ಕೋಡಿಕಲ್ ನ ಅವಿನಾಶ್ ಎಂಬವರು ಸ್ಕೂಟಿಯಲ್ಲಿ ಬಂದು ಅಡ್ಡಹಾಕಿ ತಡೆದು ತಲವಾರು ಬೀಸಿದ್ದಾರೆ. ಅದೃಷ್ಟವರ ಪಿರ್ಯಾದಿಯು ತಪ್ಪಿಸಿಕೊಂಡಿದ್ದು ಆದರೆ ಮುಖಕ್ಕೆ ಗಾಯವಾಗಿರುತ್ತದೆ. ಅದರಂತೆ ಕಾವೂರು ಪೊಲೀಸ್‌ ಕಾರ್ಯಪೃವತ್ತರಾಗಿ ಕೇವಲ 24 ಗಂಟೆಗಳಲ್ಲಿ ತಲವಾರು ಸಮೇತ ಮೂವರ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್‌, ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಎಸಿಪಿ ಮನೋಜ್ ಕುಮಾರ್ ರವರ ಸಲಹೆಯಂತೆ ಪ್ರಕರಣದ ತನಿಖೆಯನ್ನು ಕೈಗೊಂಡು, ಕೃತ್ಯಕ್ಕೆ ಬಳಸಿದ ತಲವಾರು, ವಾಹನ ಮತ್ತು ಆರೋಪಿತರನ್ನು ಬಂಧಿಸುವಲ್ಲಿ ಕಾವೂರು ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ

ಇತ್ತೀಚಿನ ಸುದ್ದಿ

ಜಾಹೀರಾತು