ಇತ್ತೀಚಿನ ಸುದ್ದಿ
ವೃತ್ತಿಯಿಂದ ನಿವೃತ್ತರಾದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಚಾಲಕ ಪೂವಪ್ಪರಿಗೆ ಬೀಳ್ಕೊಡುಗೆ
01/07/2023, 13:29

ಮಂಗಳೂರು(reporterkarnataka.com): ಕಳೆದ 31 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಕೆ. ಪೂವಪ್ಪ ಅವರು ಶುಕ್ರವಾರ ವಯೋನಿವೃತ್ತಿ ಹೊಂದಿದ್ದು, ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಪೂವಪ್ಪ ಹಾಗೂ ಅವರ ಧರ್ಮ ಪುಣ್ಯವತಿ ಅವರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ., ಪ್ರಥಮ ದರ್ಜೆ ಸಹಾಯಕ ರಾಜು ಬೋವಿ, ಸಿಬ್ಬಂದಿಗಳಾದ ವೇಣುಗೋಪಾಲ್, ವಿಶ್ವನಾಥ ಜೋಗಿ, ದಿವ್ಯ, ಕಲಾವಿದರಾದ ಗಿರೀಶ್ ನಾವುಡ, ನಿವೃತ್ತ ನೌಕರರಾದ ಸಾವಂತರು, ಟ್ರೈನಿಗಳಾದ ಪೂರ್ಣಿಮಾ, ಅಶ್ವಿತಾ ಹಾಗೂ ಇತರರು ಉಪಸ್ಥಿತರಿದ್ದರು.