2:20 AM Saturday2 - May 2026
ಬ್ರೇಕಿಂಗ್ ನ್ಯೂಸ್
ಅಂಜನಾದ್ರಿ ದರ್ಶನಕ್ಕೆ ಹೊರಟಿದ್ದ ಭಕ್ತರ ವಾಹನದ ಟಯರ್ ಬ್ಲಾಸ್ಟ್: ಓರ್ವ ಸಾವು, 7… ಶೃಂಗೇರಿ ವಿಧಾನಸಭಾ ಕ್ಷೇತ್ರ: ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡಗೆ… ರಾಜ್ಯದಲ್ಲಿರುವ ಹೊರ ರಾಜ್ಯ ನೋಂದಣಿ ವಾಹನಗಳಿಗೆ ಹೊಸ ತೆರಿಗೆ: ಸುಗ್ರೀವಾಜ್ಞೆ ಜಾರಿ ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ… ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ,… Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ… ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ… ಹೇಮಾವತಿ ನಾಲೆಗೆ ಉರುಳಿ ಬಿದ್ದ ಕಾರು: ತಾಯಿ- ಮಗು ಸಾವು; ಧರ್ಮಸ್ಥಳದಿಂದ ದೇವನಹಳ್ಳಿಗೆ… ಧಾರವಾಡದಲ್ಲಿ ಟಿಬೇಟಿಯನ್ ಬಿಕ್ಕು ಹತ್ಯೆ: ಬೇರೆ ಕಡೆ ಕೊಲೆ ಮಾಡಿ ಎಸೆದಿರುವ ಶಂಕೆ ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ…

ಇತ್ತೀಚಿನ ಸುದ್ದಿ

ಮಂಗಳೂರು: ಏಷ್ಯಾದ ಅತಿ ದೊಡ್ಡ ಹೈಪರ್ಮಾರ್ಕೆಟ್ ಲುಲು ಸಮೂಹದಿಂದ ರಿಟೈಲ್ ಉದ್ಯಮದ ಉದ್ಯೋಗಗಳಿಗಾಗಿ ಸಂದರ್ಶನ

20/06/2023, 15:08

ಮಂಗಳೂರು(reporterkarnataka.com): ಏಷ್ಯಾದ ಅತಿ ದೊಡ್ಡ ಹೈಪರ್ಮಾರ್ಕೆಟ್ ಲುಲು ಸಮೂಹವು ಮಂಗಳೂರಿನಲ್ಲಿ ತಮ್ಮ ಮೊದಲ ನೇಮಕಾತಿ ಸಂದರ್ಶನವನ್ನು ಏರ್ಪಡಿಸಿದೆ. ಯುಎಇ, ಖತಾರ್, ಬಹ್ರೇನ್, ಮಸ್ಕತ್, ಸೌದಿ ಅರೇಬಿಯಾ, ಮಲೇಷ್ಯಾ ಮತ್ತು ಇಂಡೋನೇಷ್ಯಾದಂತಹ ದೇಶಗಳನ್ನು ಒಳಗೊಂಡಂತೆ ಏಷ್ಯಾದಾದ್ಯಂತ ವ್ಯಾಪಕವಾಗಿ ನಡೆಸುತ್ತಿರುವ ಲುಲು ಸಂಸ್ಥೆ, ಈ ಪ್ರಮುಖ ರಿಟೈಲ್ ಉದ್ಯಮದ ವಿವಿಧ ಹುದ್ದೆಗಳಿಗೆ ಯುವ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ.
ಉದ್ಯೋಗವು ಮಾರಾಟ, ಕೌಂಟರ್ ಮಾರಾಟ ಮತ್ತು ಕ್ಯಾಷಿಯರ್ ಹುದ್ದೆಗಳನ್ನು ಒಳಗೊಂಡಿರುತ್ತವೆ. ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ನೌಕರರಾಗಿ ಅನುಭವವಿರುವ ವೃತ್ತಿಪರರು ಮತ್ತು ಪೂರ್ವ ಅನುಭವವಿಲ್ಲದವರು ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ಕನಿಷ್ಠ ವಿದ್ಯಾರ್ಹತೆ ಪಿಯುಸಿಯಾಗಿದ್ದು (ಪ್ರಿ-ಯೂನಿವರ್ಸಿಟಿ ಕೋರ್ಸ್), ಅರ್ಜಿದಾರರು ೨೧ ರಿಂದ ೨೮ ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು. ಇಂಗ್ಲಿಷ್‌ನಲ್ಲ್ಲಿ ಸಂವಹನ ಮಾಡುವುದು ಅಭ್ಯರ್ಥಿಗಳಿಗೆ ಕಡ್ಡಾಯವಾಗಿದೆ.
ಹುದ್ದೆಗಳಿಗೆ ವೇತನ ಶ್ರೇಣಿಯು ೧೨೦೦ ಯುಎಇ ಧಿರಾಮ್‌ಗಳಿಂದ ೧೪೦೦ ಧಿರಾಮ್ ತನಕ ಮತ್ತು ೨೦೦ ಧಿರಾಮ್ ಆಹಾರ ಭತ್ಯೆ ದೊರೆಯಲಿದೆ. ವಸತಿ, ವೀಸಾ ಮತ್ತು ವಿಮಾನ ಟಿಕೆಟ್ ವ್ಯವಸ್ಥೆಗಳನ್ನು ಸಂಸ್ಥೆಯು ನೋಡಿಕೊಳ್ಳುತ್ತದೆ.
ಸುಮಾರು ೪೦೦ ಉದ್ಯೋಗ ಅವಕಾಶಗಳಿದ್ದು, ೨೦೨೩ ರ ಜೂನ್ ೨೨ ಮತ್ತು ೨೩ ರಂದು ಮಂಗಳೂರಿನ ಫೆರ್ನಾಂಡಿಸ್ ಗ್ರೂಪ್ ಕಛೇರಿಯಲ್ಲಿ ಬೆಳಿಗ್ಗೆ ೯.೦೦ರಿಂದ ಸಂಜೆ ೬.೦೦ರವರೆಗೆ ಸಂದರ್ಶನವನ್ನು ನಡೆಸಲಾಗುವುದು ಎಂದು ಫೆರ್ನಾಂಡಿಸ್ ಗ್ರೂಪ್ ಸಂಸ್ಥೆಯ ಪ್ರವರ್ತಕರಾದ ವಿಲ್ಸನ್ ಫೆರ್ನಾಂಡಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂದರ್ಶನ ಆಫೀಸಿನ ವಿಳಾಸ: ಫೆರ್ನಾಂಡಿಸ್ ಗ್ರೂಪ್, ಮೆಟ್ರೋ ಪ್ಲಾಜಾ, ೩ನೇ ಮಹಡಿ, ಆಕ್ಸಿಸ್ ಬ್ಯಾಂಕಿನ ಮೇಲಿನ ಮಹಡಿ, ಮೋರ್ ಸೂಪರ್ ಮಾರ್ಕೆಟಿನ ಎದುರುಗಡೆ, ವೆಲೆನ್ಸಿಯಾ, ಮಂಗಳೂರು ೫೭೫ ೦೦೨. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: +೯೧ ೯೬೮೬೬೭೫೪೬೩ / ೯೮೧೯೦೪೪೩೭೬

ಇತ್ತೀಚಿನ ಸುದ್ದಿ

ಜಾಹೀರಾತು