4:14 AM Monday31 - August 2026
ಬ್ರೇಕಿಂಗ್ ನ್ಯೂಸ್
*ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ

ಇತ್ತೀಚಿನ ಸುದ್ದಿ

ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ 60ನೇ ಜನ್ಮವರ್ಧಂತಿ: ಸುವರ್ಣಾಭಿಷೇಕ ಸಹಿತ ಗುರುವಂದನೆ; ನೂರಾರು ಭಕ್ತರು ಭಾಗಿ

13/03/2023, 17:38

ಉಡುಪಿ(reporterkarnataka.com):
ತನಗಾಗಿ ಬದುಕದೇ ಪರರ ಹಿತಕ್ಕಾಗಿ ಶ್ರಮಿಸುವುದರಲ್ಲಿ ಜನ್ಮ ಸಾರ್ಥಕ್ಯವಾಗುತ್ತದೆ.

ಹರಿಯುವ ನೀರಿನ ಮೇಲೆ ಒಣ ಎಲೆಯೂ ತೇಲಿ ಬರುತ್ತದೆ. ದೋಣಿಯೂ ತೇಲಿ ಸಾಗುತ್ತದೆ .ಆದರೆ ತರಗೆಲೆಯ ಮೇಲೆ ಹಕ್ಕಿ ಕುಳಿತರೂ ಮುಳುಗಿ ಹೋಗುತ್ತದೆ. ‌ಆದರೆ ದೋಣಿ ತನ್ನ ಮೇಲೆ ಹತ್ತಾರು ಜನರನ್ನು ಹೊತ್ತು ದಡ ಸೇರಿಸುತ್ತದೆ .ಹೀಗೆ ತನ್ನ ಅಸ್ತಿತ್ವಕ್ಕೆ ಸಾರ್ಥಕ್ಯ ತರುತ್ತದೆ. ನಮ್ಮೆಲ್ಲರ ಜೀವನವೂ ದೋಣಿಯಂತಾದಾಗ ಜನ್ಮಕ್ಕೊಂದು ಸಾರ್ಥಕ್ಯ ಬರುತ್ತದೆ. ಅಂಥಹ ದೊಡ್ಡ ಮಾನವ ಜನ್ಮ ದೊಡ್ಡ ಒಳಿತಿಗೆ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕು . ಸೂರ್ಯಾಸ್ತ ನೋಡಿ ಸಂಭ್ರಮಿಸುತ್ತೇವೆ . ಆದರೆ ಅದೇ ಸೂರ್ಯಾಸ್ತ ನಮ್ಮ ಜೀವನದ ಒಂದು ದಿನ ಕಳೆದು ಹೋಯಿತು . ಮಾಡಬೇಕಾದ ಕರ್ತವ್ಯ ಬೇಕಾದಷ್ಟಿದೆ ಎಂದು ಎಚ್ಚರಿಸುವುದನ್ನು ಮರೆಯಬಾರದು ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ತಮ್ಮ 60ನೇ ಜನ್ಮವರ್ಧಂತಿಯ ಪ್ರಯುಕ್ತ ಭಕ್ತಾಭಿಮಾನಿಗಳು ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಸುವರ್ಣಾಭಿಷೇಕ ಪುಷ್ಪಾಭಿಷೇಕ ಸಹಿತ ಅಭಿವಂದನೆಯನ್ನು ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದರು ‌.


ಉಡುಪಿ ಸಮೀಪ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಕಾರ್ಯಕ್ರಮ‌ ನೆರವೇರಿತು. ವೇದಮೂರ್ತಿ ರಾಮಕೃಷ್ಣ ತಂತ್ರಿ ಮತ್ತು ವಿದ್ವಾನ್ ಲಕ್ಷ್ಮೀನಾರಾಯಣ ತಂತ್ರಿಗಳ ನೇತೃತ್ವದಲ್ಲಿ ಋತ್ವಿಜರಿಂದ ಶ್ರೀಗಳಿಗೆ ಶ್ರೇಯಸ್ಸನ್ನು ಪ್ರಾರ್ಥಿಸಿ ಧನ್ವಂತರಿ ಯಾಗ ವಿರಜಾ ಹೋಮಗಳು , ಶ್ರೀ ಸುವ್ರಹ್ಮಣ್ಯ ದೇವರಿಗೆ ವಿಶೇಷ ಅಭಿಷೇಕ ಪೂಜೆ ನಡೆದವು .ಶ್ರೀಗಳು ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡ ಬಳಿಕ ಪಟ್ಟದ ದೇವರಾದ ಶ್ರೀ ರಾಮವಿಠಲ ದೇವರ ಪೂಜೆ ನಡೆಸಿ ಭಿಕ್ಷೆ ಸ್ವೀಕರಿಸಿದರು.ನಂತರ ನಡೆದ ಗುರುವಂದನಾ ಸಭಾ ಕಾರ್ಯಕ್ರಮದಲ್ಲಿ ಆರಂಭದಲ್ಲಿ ವಿದ್ವಾನ್ ರಘೂತ್ತಮಾಚಾರ್ಯ ನಾಗಸಂಪಿಗೆ , ವಿದ್ವಾನ್ ವೇಂಕಟೇಶಾಚಾರ್ಯ ಕುಲಕರ್ಣಿ ಅಭಿನಂದನಾ ಮಾತುಗಳನ್ನಾಡಿದರು . ವಿದ್ವಾನ್ ಷಣ್ಮುಖ ಹೆಬ್ಬಾರ್ ಸ್ವಾಗತಿಸಿದರು . ಮುಚ್ಲುಕೋಡು ಸೀಮೆಯ ವಿಪ್ರಬಂಧುಗಳು ಶ್ರೀಗಳಿಗೆ ಸುವರ್ಣಾಭಿಷೇಕ ಪುಷ್ಪಾಭಿಷೇಕ. ಫಲ ಕಾಣಿಕೆ ಮಂಗಳಾರತಿ ಅರ್ಪಿಸಿದರು .ಅನೇಕ‌ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶ್ರೀಗಳಿಗೆ ಫಲಪುಷ್ಪ ಸಹಿತ ಅಭಿವಂದನೆ ಸಲ್ಲಿಸಿದರು .
ವಾಸುದೇವ ಭಟ್ ಪೆರಂಪಳ್ಳಿ ಪ್ರಸ್ತಾವನೆ ಧನ್ಯವಾದ ಸಹಿತ ಕಾರ್ಯಕ್ರಮ‌ ನಿರೂಪಿಸಿದರು . ದೇವಳದ ಅರ್ಚಕ ವೃಂದ ,ವ್ಯವಸ್ಥಾಪಕ ರಾಜಶೇಖರ್ , ಪೇಜಾವರ ಮಠದ ಸಿ‌ಇ‌ಒ ಸುಬ್ರಹ್ಮಣ್ಯ ಭಟ್ , ಇಂದು ಶೇಖರ ಹೆಗಡೆ ಶ್ರೀಗಳ ಆಪ್ತರಾದ ವಿಷ್ಣು‌ಮೂರ್ತಿ ಆಚಾರ್ಯ ,ಕೃಷ್ಣ ಭಟ್ , ಸುಬ್ರಹ್ಮಣ್ಯ ಆಚಾರ್ಯ , ಮೊದಲಾದವರು ಸಹಕರಿಸಿದರು. ಶಾಸಕ ಕೆ ರಘುಪತಿ ಭಟ್ , ಡಾ ವ್ಯಾಸರಾಜ ತಂತ್ರಿ ಡಾ ಚಂದ್ರ ಶೇಖರ್ , ಯಶ್ಪಾಲ್ ಸುವರ್ಣ , ಭುವನೇಂದ್ರ ಕಿದಿಯೂರು ಮುರಳಿ ಕಡೆಕಾರ್ ,ಪ್ರದೀಪ್ ಕಲ್ಕೂರ ,ಪ್ರೊ ಎಂ ಬಿ ಪುರಾಣಿಕ್ , ಉಮೇಶ ಶೆಟ್ಟಿ , ಜಗದೀಶ್ ಪೈ , ಹರಿದಾಸ ಭಟ್ ಮುಂಬಯಿ , ನಾಗರಾಜ ಪುರಾಣಿಕ್ ಶಾಮಲಾ ಕುಂದರ್ , ಶ್ರೀಶ ನಾಯಕ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದರು. ಚಿತ್ರನಟಿ ಬಿಜೆಪಿ ನಾಯಕಿ ಮಾಳವಿಕಾ ಆಗಮಿಸಿ ಶ್ರೀಗಳಿಗೆ ಗೌರವ ಸಲ್ಲಿಸಿದರು ‌.

ಇತ್ತೀಚಿನ ಸುದ್ದಿ

ಜಾಹೀರಾತು