11:55 PM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಪುತ್ತೂರು ಸಂತ ಫಿಲೋಮಿನಾ ಕಾಲೇಜಿಗೆ ನ್ಯಾಕ್‌ ನಿಂದ ಎ ಗ್ರೇಡ್ ಮಾನ್ಯತೆ

13/01/2023, 11:10

ಮಾಧ್ಯಮ ಪ್ರಕಟಣೆ
ಪುತ್ತೂರು ಸಂತ ಫಿಲೋಮಿನಾ ಕಾಲೇಜಿಗೆ ನ್ಯಾಕ್‌ ನಿಂದ ಎ ಗ್ರೇಡ್ ಮಾನ್ಯತೆ ಪಡೆದಿದೆ.ಮೌಲ್ಯಾಂಕನ ಹಾಗೂ ಶ್ರೇಣೀಕರಣಕ್ಕಾಗಿ ಇಲ್ಲಿನ
ಸಂತ ಫಿಲೋಮಿನಾ ಕಾಲೇಜು ಕಳೆದ ಸಪ್ಟೆಂಬರ್ ತಿಂಗಳಲ್ಲಿ ನ್ಯಾಕ್ ಸಂಸ್ಥೆಗೆ ಸಲ್ಲಿಸಿದ ಸ್ವ ಅಧ್ಯಯನ ವರದಿಯ ಮೌಲ್ಯಮಾಪನಕ್ಕಾಗಿ ನ್ಯಾಕ್ ಸಂಸ್ಥೆಯಿಂದ ನಿಯೋಜಿಸಲ್ಪಟ್ಟ ತ್ರಿ ಸದಸ್ಯ ತಂಡವೊಂದು ಜನವರಿ 4 ಮತ್ತು 5 ರಂದು ಕಾಲೇಜಿಗೆ ಭೇಟಿನೀಡಿತ್ತು. ತಂಡದ ಅಧ್ಯಕ್ಷರಾದ ಉತ್ತರ ಪ್ರದೇಶದ ಮಹರ್ಷಿ ಮಾಹಿತಿ ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿಗಳೂ ಹಾಗೂ ಪ್ರಸ್ತುತ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರೂ ಆದ ಡಾ. ಎಚ್‌.ಕೆ.ಸಿಂಗ್‌, ಸದಸ್ಯ ಸಂಯೋಜಕರಾದ ಹರಿಯಾಣದಲ್ಲಿ ಕುರುಕ್ಷೇತ್ರ ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಪವನ್ ಕುಮಾರ್ ಶರ್ಮ ಸದಸ್ಯರಾದ ಡಾ. ಸಂತೋಶ್ ಕೋಠಿ, ಪ್ರಾಂಶುಪಾಲರು ವಾಲ್‌ಚಂದ್ ಕಲಾ ಮತ್ತು ವಿಜ್ಞಾನ ಸ್ವಾಯತ್ತ ಕಾಲೇಜು ಸೋಲಾಪುರ ಇವರುಗಳನ್ನು ಕಾಲೇಜಿನ ಎನ್ ಸಿಸಿ ಆರ್ಮಿ ಮತ್ತು ನೇವಿಯ ಸದಸ್ಯರ ಗೌರವವಂದನೆಯೊಂದಿಗೆ ಸ್ವಾಗತಿಸಲಾಯಿತು. ತಂಡವು ಕಾಲೇಜಿನ ಪ್ರಾಂಶುಪಾಲರು, ಐಕ್ಯೂಎಸಿ ಸಂಯೋಜಕರು, ಆಡಳಿತ ಮಂಡಳಿಯ ಸದಸ್ಯರು, ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಆಡಳಿತ ಸಿಬ್ಬಂದಿ, ವಿದ್ಯಾರ್ಥಿಗಳು, ಹತ್ತವರು, ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿತು. ಕಾಲೇಜು ಸ್ವ-ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ ಹಲವಾರು ಅಂಶಗಳ ಬಗ್ಗೆ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಕಾಲೇಜಿನ ಯಕ್ಷಕಲಾಕೇಂದ್ರ ಹಾಗೂ ವಿದ್ಯಾರ್ಥಿ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಜನವರಿ 5 ರಂದು ಕಾಲೇಜಿನ ಹಲವಾರು ಕ್ರಿಯಾತ್ಮಕ ಘಟಕಗಳಿಗೆ ಭೇಟಿ ನೀಡಿದ ನಂತರ ಉಪನ್ಯಾಸಕರು, ಆಡಳಿತ ಸಿಬ್ಬಂದಿ, ವಿದ್ಯಾರ್ಥಿ ಸಂಘದ ಸದಸ್ಯರ ಸಮ್ಮುಖದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪಂ| ಡಾ ಆಂಟನಿ ಪ್ರಕಾಶ್ ಮೊಂತೆರೋ ರವರಿಗೆ ತಂಡದ ಅಧ್ಯಕ್ಷರಾದ ಡಾ. ಹೆಚ್. ಕೆ.ಸಿಂಗ್ ರವರು ನಿರ್ಗಮನ ವರದಿಯನ್ನು ಹಸ್ತಾಂತರಿಸಿದರು.
ಜನವರಿ 10 ರಂದು ಈ ಮೌಲ್ಯಾಂಕನ ಪ್ರಕ್ರಿಯೆಯ ಫಲಿತಾಂಶವು ಹೊರಬಂದಿದ್ದು, ಕಾಲೇಜಿಗೆ ಎ ಶ್ರೇಣಿ ದೊರಕಿರುತ್ತದೆ. ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ, ಪ್ರಕಾಶ್‌ ಮೊಂತರೂ ರವರ ನಿರ್ದೇಶನದಲ್ಲಿ ಪ್ರಾರಂಭಗೊಂಡ ಮೌಲ್ಯಾಂಕನಕ್ಕೊಳಪಡುವ ಪ್ರಕ್ರಿಯೆಯಲ್ಲಿ ಕಾಲೇಜಿನ ಕ್ಯಾಂಪ‌ ಸ್ ನಿರ್ದೇಶಕರಾದ ವಂ ಸ್ಟ್ಯಾನಿ ಪಿಂಟೋ, ಐಕ್ಕೂ ವಿಸಿ ಸಂಯೋಜಕರಾದ ಡಾ| ಎ ಪಿ ರಾಧಾಕೃಷ್ಣ, ಉಪಪ್ರಾಂಶುಪಾಲರಾದ ಶೆ ಗಣೇಶ್ ಭಟ್, ಸ್ವಅಧ್ಯಯನ ವರದಿ ತಯಾರಿಕಾ ತಂಡದ ಮುಖ್ಯಸ್ಥರಾದ ಪ್ರೊ. ವಿನಯಚಂದ್ರ ಕಾಲೇಜಿನ ಶಿಕ್ಷಕವೃಂದ, ಆಡಳಿತ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಸಹಕಾರ ನೀಡಿರುತ್ತಾರೆ.


ಫಲಿತಾಂಶ ದೊರಕಿದ ಹಿನ್ನೆಲೆಯಲ್ಲಿ ಆಟೋಲಿಕ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಅತಿ ವಂ|| ಬಿಷಪ್ ಪೀಟರ್ ವಾವ್ ನಲ್ತಾನರವರು ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿರುತ್ತಾರೆ. ಕ್ಯಾಥೊಲಿಕ್- ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾದ ಅತಿ ವಂ. ಆಂಟನಿ ಶೇರ್ರಾ, ಕಾಲೇಜಿನ ನಂಚಾಲಕರಾದ ಅತಿ ವಂ ಜೆರೋಮ್ ಲಾರೆನ್ಸ್ ಮಸ್ಕರೇಸ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು