ಇತ್ತೀಚಿನ ಸುದ್ದಿ
ಹೆಬ್ರಿ; ಕೀಟನಾಶಕ ಸೇವಿಸಿದ್ದ ವೃದ್ದ ಚಿಕಿತ್ಸೆ ಫಲಕಾರಿಯಾಗದೆ ಸಾವು
06/06/2022, 12:09
ಕಾರ್ಕಳ(reporterkarnataka.com): ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ದರೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ತಾಲೂಕಿನ ಚಾರ ಗ್ರಾಮದಲ್ಲಿ ನಡೆದಿದೆ. ಸದಾಶಿವ ಶೆಟ್ಟಿ (81)ಕೀಟನಾಶಕ ಸೇವಿಸಿದವರು.
ಕಳೆದ ಮೂರು ವರ್ಷಗಳಿಂದ ಅನಾರೋಗ್ಯ ದಿಂದ ಬಳಲುತಿದ್ದ ಸದಾಶಿವ ಶೆಟ್ಟಿ ಗುಣಮುಖರಾಗದೆ ಇದ್ದಾಗ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿದಾಗ ಹೆದರಿ ಜೂನ್5 ರಂದು ಚಾರದ ಸಣ್ಣಮನೆ ಎಂಬಲ್ಲಿ ಮನೆಯ ಹೊರಗಡೆ ಇಟ್ಟಿದ್ದ ಕೀಟನಾಶಕ ಸೇವಿಸಿ ಅಸ್ವಸ್ಥ ಗೊಂಡಿದ್ದು ಮಣಿಪಾಲ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ . ಹೆಬ್ರಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.