7:45 PM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಕಾರ್ಕಳ ಉತ್ಸವಕ್ಕೆ ಹಣದ ಹೊಳೆ: ತುಳು ಶಿಕ್ಷಕರ ಸೇವೆಗಿಲ್ಲ ಬೆಲೆ: 2 ವರ್ಷದಿಂದ ಗೌರವ ಧನ ಕೊಡದಿದ್ದರೂ ತುಟಿ ಬಿಚ್ಚದ ಸಂಸ್ಕೃತಿ ಸಚಿವರು!!

18/03/2022, 17:06

ಮಂಗಳೂರು(reporterkarnataka.com): ನಮ್ಮ ರಾಜಕಾರಣಿಗಳಲ್ಲಿ, ಅಧಿಕಾರಸ್ಥರಲ್ಲಿ ಸೋಗಲಾಡಿತನ ಯಾವ ಮಟ್ಟದಲ್ಲಿ ಬೆಳೆದಿದೆ ಎನ್ನುವುದಕ್ಕೆ ಇದೊಂದು ತಾಜಾ ನಿದರ್ಶನ. ನಿಮಗೊತ್ತಿರುವಾಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಅವರ ತವರು ಕ್ಷೇತ್ರದಲ್ಲಿ ಕಾರ್ಕಳ ಉತ್ಸವ ನಡೆಯುತ್ತಿದೆ. ಇದರ ಭಾಗವಾಗಿ ಕಾರ್ಕಳದ ಪೌರ ಕಾರ್ಮಿಕರಿಗೆ ಹೆಲಿಕಾಪ್ಟರ್ ನಲ್ಲಿ ತಿರುಗಾಟ ನಡೆಸಲಾಗಿದೆ. ಇನ್ನೊಂದು ಕಡೆ ನಮ್ಮ ಕರಾವಳಿಯ ಮಾತೃ ಭಾಷೆಯಾದ ತುಳು ಭಾಷೆಯನ್ನು ಕಲಿಸುವ ಬಡ ಶಿಕ್ಷಕರಿಗೆ 2 ವರ್ಷದಿಂದ ಸಂಬಳ ನೀಡದೆ ದುಡಿಸಿ ಸತಾಯಿಸಲಾಗುತ್ತಿದೆ.

ಕಾರ್ಕಳದ ಪೌರ ಕಾರ್ಮಿಕರನ್ನು ಹೆಲಿಕಾಪ್ಟರ್ ಸುತ್ತಿಸಿದ ಬಗ್ಗೆ ಯಾರು ತಕರಾರು ಎತ್ತುವುದಿಲ್ಲ. ಆದರೆ ಹೊಟ್ಟೆಗೆ ಹಿಟ್ಟಿಲ್ಲದವನ ಜುಟ್ಟಿಗೆ ಮಲ್ಲಿಗೆ ಬೇಕೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಪೌರ ಕಾರ್ಮಿಕರಿಗೆ ಸಾಕಷ್ಟು ಸೌಲಭ್ಯಗಳ ಕೊರತೆ ಕಾಡುತ್ತಿದೆ. ಅವರಿಗೆ ಶೂ ಕೊಡುವುದಿಲ್ಲ, ಕೈಗೆ ಗ್ಲೌಸ್ ಇಲ್ಲ. ಆರೋಗ್ಯ ಸಮಸ್ಯೆ ಬಂದ್ರೆ ಸರಿಯಾದ ಹೆಲ್ತ್ ಇನ್ಸೂರೆನ್ಸ್ ಇಲ್ಲ. ಈ ಎಲ್ಲ ಇಲ್ಲಗಳ ನಡುವೆ, ಒಬ್ಬರಿಗೆ ತಲಾ 2 ಸಾವಿರ ರೂ. ಖರ್ಚು ಮಾಡಿ ಹೆಲಿಕಾಪ್ಟರ್ ನಲ್ಲಿ ಸುತ್ತಾಡಿಸುವ ಅಗತ್ಯವಿತ್ತೇ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಾರೆ. ಈ ನಡುವೆ ತುಳು ಭಾಷೆ ಕಲಿಸುವ ಸುಮಾರು 43 ಮಂದಿ ಶಿಕ್ಷಕರಿಗೆ ಕಳೆದ 30 ತಿಂಗಳಿನಿಂದ ಗೌರವ ಧನ ನೀಡಿಲ್ಲ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 42 ಶಾಲೆಗಳಲ್ಲಿ ತುಳು ಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಸಲಾಗುತ್ತಿದೆ. ಇದಕ್ಕೆ 43 ತುಳು ಶಿಕ್ಷಕರನ್ನು ನೇಮಿಸಲಾಗಿತ್ತು. ಇವರಿಗೆ ತಿಂಗಳಿಗೆ ಜುಜುಬಿ 3 ಸಾವಿರ ರೂ. ಗೌರವ ಧನ ನಿಗದಿಪಡಿಸಲಾಗಿತ್ರು. ಆದರೆ ಈ ಶಿಕ್ಷಕರಿಗೆ 30 ತಿಂಗಳಿನಿಂದ ಆ  ಗೌರವ ಧನವನ್ನು ಕೂಡ ನೀಡಿಲ್ಲ. 

ತುಳು ಶಿಕ್ಷಕರಲ್ಲಿ ಹೆಚ್ಚಿನವರು ತೀರಾ ಬಡವರು, ವಿಕಲಚೇತನರೂ ಕೂಡ ಇದ್ದಾರೆ. ಜುಜುಬಿ 3 ಸಾವಿರಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ತುಳುವಿಗಾಗಿ ಮೀಸಲಿಟ್ಟಿದ್ದಾರೆ. ಆದರೆ ಸರಕಾರ ಇವರಿಗೆ ಗೌರವ ಧನ ಕೊಡುತ್ತಿಲ್ಲ. ಉಸ್ತವಾರಿ ಸಚಿವ ಸುನಿಲ್ ಕುಮಾರ್ ಅವರು ತನಗೆ ಆ ವಿಷಯವೇ ಗೊತ್ತಿಲ್ಲದಂತೆ ವರ್ತಿಸುತ್ತಾರೆ. ತುಳು ಶಿಕ್ಷಕರ ಗೌರವ ಧನದ ಜವಾಬ್ದಾರಿಯನ್ನು ತುಳು ಸಾಹಿತ್ಯ ಅಕಾಡೆಮಿಗೆ ವಹಿಸಲಾಗಿತ್ತು. ಆದರೆ ಅಕಾಡೆಮಿಗೆ ಸರಕಾರ ಅನುದಾನ ನೀಡಿದರೆ ತಾನೆ ಸಂಬಳ ನೀಡಲು ಸಾಧ್ಯ. ಅದಲ್ಲದೆ ಈ ಎಲ್ಲ ಭಾಷಾ ಅಕಾಡೆಮಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುತ್ತದೆ. ಸುನಿಲ್ ಕುಮಾರ್ ಇದರ ಸಚಿವರು.

……

ಇತ್ತೀಚಿನ ಸುದ್ದಿ

ಜಾಹೀರಾತು