ಇತ್ತೀಚಿನ ಸುದ್ದಿ
ಲಸಿಕೆ ಕೊರತೆ: ಕೇಂದ್ರ ಸಚಿವ ಸದಾನಂದ ಗೌಡರ ಭೇಟಿಯಾದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
07/06/2021, 13:02
ಮಂಗಳೂರು(reporterkarnataka news): ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೋವಿಡ್ – 19 ಲಸಿಕೆ ಕೊರತೆ ಹಿನ್ನಲೆಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ. ಸದಾನಂದ ಗೌಡ
ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಬೆಂಗಳೂರಿನಲ್ಲಿ ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಅವಳಿ ಜಿಲ್ಲೆಗಳಿಗೆ ಲಸಿಕೆ ಸರಬರಾಜು ಹೆಚ್ಚಳಕ್ಕೆ ಸಚಿವರು ಸದಾನಂದ ಗೌಡ ಅವರಿಗೆ
ಮನವಿ ಸಲ್ಲಿಸಿದರು. ಸಚಿವರ ಮನವಿಯ ಹಿನ್ನಲೆಯಲ್ಲಿ ರಾಜ್ಯದಲ್ಲಿ ಲಸಿಕೆ ಜವಾಬ್ದಾರಿ ಹೊಂದಿರುವ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಅವರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ 25 ಸಾವಿರದಂತೆ ಲಸಿಕೆ ಬಿಡುಗಡೆ ಮಾಡಲು ಕೇಂದ್ರ ಸಚಿವ ಸದಾನಂದ ಗೌಡರು ಸೂಚಿಸಿದ್ದಾರೆ.