1:12 AM Thursday23 - April 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್… ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದು ನಿಂದನೆ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗ… ಚಾಮರಾಜನಗರ | ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಕಾಡಿನಲ್ಲಿ ಮಾನವನ ಅಸ್ಥಿಪಂಜರ…

ಇತ್ತೀಚಿನ ಸುದ್ದಿ

ಮಂಗಳೂರು ನಗರ ಪೊಲೀಸರಿಗೆ ವೆರಿಕೋಸ್ ವೆನ್ಸ್ ಕುರಿತು ಒಂದು ದಿನದ ಕಾರ್ಯಾಗಾರ; ಉಚಿತ ತಪಾಸಣೆ 

19/01/2022, 20:03

ಮಂಗಳೂರು(reporterkarnataka.com): ಮಂಗಳೂರು ನಗರ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವೆರಿಕೋಸ್ ವೆನ್ಸ್ ನ ಬಗ್ಗೆ ಒಂದು ದಿನದ ಕಾರ್ಯಾಗಾರ ಹಾಗೂ ಉಚಿತ ತಪಾಸಣೆ ಮಂಗಳವಾರ ಜರುಗಿತು.


ಪೊಲೀಸ್ ಉಪ ಆಯುಕ್ತ ಹರಿರಾಮ್ ಶಂಕರ್ ಮಾತನಾಡಿ, ಪೊಲೀಸ್ ಕರ್ತವ್ಯದಲ್ಲಿ ಮಾನಸಿಕ ಸಾಮರ್ಥ್ಯ ಎಷ್ಟು ಅಗತ್ಯವೋ ದೈಹಿಕ ಸಾಮರ್ಥ್ಯವೂ ಅಷ್ಟೇ ಅಗತ್ಯವಾಗಿರುತ್ತದೆ. ಪೋಲೀಸ್ ವೃತ್ತಿಗೆ  ಸೇರುವ ಮೊದಲು ಎಲ್ಲಾ ಮಾನದಂಡಗಳಲ್ಲಿ ಪರೀಕ್ಷಿಸಿ ಪರಿಶೀಲಿಸಿ ಅವರುಗಳನ್ನು ಕರ್ತವ್ಯಕ್ಕೆ ತೆಗೆದುಕೊಳ್ಳುತ್ತಾರೆ. ಆದರೆ ಕಾಲಕ್ರಮೇಣ ವೈಯಕ್ತಿಕ ಜೀವನ ಹಾಗೂ ದೈಹಿಕ ಆರೋಗ್ಯವನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಹಾಗಾಗಿ ಕೆಲವೊಮ್ಮೆ ಇಂಥ ಸೌಲಭ್ಯಗಳನ್ನು ಸರ್ಕಾರದಿಂದ ಅಥವಾ ಇಲಾಖೆಯಲ್ಲಿ ಕಲ್ಪಿಸಿಕೊಟ್ಟರೆ ಇದರ ಸಂಪೂರ್ಣ ಫಲವನ್ನು ಪಡೆಯಬೇಕಾಗಿ ತಿಳಿಸಿದರು.

ಜೊತೆಗೆ ಈಗಾಗಲೇ ಇಲಾಖೆಯಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಹಲವು ರೀತಿಯ ದೈಹಿಕ ಆರೋಗ್ಯದ ಮೇಲೆ ಗಮನ ಹರಿಸುವಂತೆ ಹಲವಾರು ಕಾರ್ಯಕ್ರಮಗಳನ್ನು ನಿಯೋಜಿಸುವುದರ ಬಗ್ಗೆ ಈಗಾಗಲೇ ಪೊಲೀಸ್ ಆಯುಕ್ತರಲ್ಲಿ ಚರ್ಚಿಸಿರುವುದಾಗಿ ತಿಳಿಸಿದರು.

ಇಂದಿನ ಕಾರ್ಯಾಗಾರ ಹಾಗೂ ತಪಾಸಣಾ ಶಿಬಿರದಲ್ಲಿ ಸಂಪೂರ್ಣವಾಗಿ ಆಯುರ್ವೇದ ಮುಖೇನ ಆಗಿರುವುದರಿಂದ ಸ್ವತಹ ನನ್ನ ತಾಯಿ ಕೂಡ ಆಯುರ್ವೇದ ಪಂಡಿತೆಯಾಗಿದ್ದು ಆಯುರ್ವೇದದ ಮೇಲೆ ನನಗೆ ನಂಬಿಕೆ ಇದೆ.ಎಂದರು.
ಕಾರ್ಯಾಗಾರದ ಮತ್ತು ತಪಾಸಣಾ ಸೌಲಭ್ಯ ವನ್ನು ಸಂಪೂರ್ಣ ವಾಗಿ ಸದುಪಯೋಗ ಮಾಡಿಕೊಳ್ಳಿ ಎಂದು ಅವರು ಹೇಳಿದರು.

ಕಾರ್ಯಕ್ರಮದ ಆಯೋಜಕಿ ಸುಶ್ಮಿತಾ ಅವರು ಪೊಲೀಸ್ ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿ, ಆರೋಗ್ಯ ಸಂಬಂಧ ಕಾರ್ಯಕ್ರಮ ಹಾಗೂ ಚಟುವಟಿಕೆ ನಡೆಸಿದರು.

ಅಪರಾಧ ವಿಭಾಗ ಡಿ. ಸಿ.ಪಿ ದಿನೇಶ್ ಕುಮಾರ್ ಉಪಸ್ಥಿತರಿದ್ದರು. ಟ್ರಾಫಿಕ್ ಎಸಿಪಿ ನಟರಾಜ್ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು