1:25 AM Sunday9 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ಮಂಗಳೂರಿನ ಚಾಲಕರು ಪ್ರಜ್ಞಾವಂತರು: ಚಾಲಕರಿಗೆ ಜಾಗೃತಿ ಶಿಬಿರದಲ್ಲಿ ಎಸಿಪಿ ನಟರಾಜ್

15/01/2022, 15:25

ಮಂಗಳೂರು(reporterkarnataka.com
ನಗರ ಟ್ರಾಫಿಕ್ ಪೊಲೀಸ್ ಮತ್ತು ದ. ಕ ಜಿಲ್ಲಾ ಶಾಲಾ ಮಕ್ಕಳ ಮಕ್ಕಳ ವಾಹನ ಚಾಲಕರ ಸಂಘ ಇವರ ಸಹಯೋಗದೊಂದಿಗೆ ಚಾಲಕರಿಗೆ ಜಾಗೃತಿ ಶಿಬಿರವು ಅತ್ತಾವರ ಉಮಾಮಹೇಶ್ವರಿ ದೇವಸ್ಥಾನದ ಹಾಲ್ ನಲ್ಲಿ ಜರುಗಿತು.
ಟ್ರಾಫಿಕ್ ಎಸಿಪಿ ನಟರಾಜ್ ಮಾತನಾಡಿ ಮಂಗಳೂರಿನ ಚಾಲಕರು ಇತರ ಕಡೆಗಳಿಗೆ ಹೋಲಿಸಿದರೆ ಪ್ರಜ್ಞಾವಂತರು. ಬದಲಿ ಚಾಲಕರನ್ನು ನಿಯೋಜನೆ ಮಾಡುವಾಗ ಜಾಗ್ರತೆ ವಹಿಸಿ., ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಮಕ್ಕಳ ಜಾಗ್ರತೆ ನಿಮ್ಮ ಹೊಣೆ. ಹಾಗೂ ಲೈಂಗಿಕತೆ ತೊಂದರೆಗಳಿಂದ ಕಾಪಾಡಿ, ದೌರ್ಜನ್ಯವನ್ನು ಮಾಡುವುದು ಎಷ್ಟು ಅಪರಾಧವೋ. ಅಷ್ಟೇ ಅದನ್ನು ನೋಡಿ ಸುಮ್ಮನಿರುವುದೋ ಅಪರಾಧ, ರಕ್ಷೆ ಸುರಕ್ಷತೆ ನಮ್ಮ ಹೊಣೆ, ಚಾಲನೆ ವೇಳೆ ತಾಳ್ಮೆಯುತ ಚಲಾವಣೆ ಮಾಡಿ ಮಾಡಿ, ಮಕ್ಕಳ ಮೇಲೆ ಸಲಿಗೆಯಿಂದ ವರ್ತಿಸಬೇಡಿ, ನೀವು ಸರಿಯಾಗಿದ್ದರೂ ನೋಡುವವರು ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ ಎಂದು ಚಾಲಕರಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕದ್ರಿ ಟ್ರಾಫಿಕ್ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಭಟ್,ಮಾತನಾಡಿ ಪೊಲೀಸ್ ಸಿಬ್ಬಂದಿ ಕಾನೂನಿನ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಆದ್ದರಿಂದ ನಾವು ಯಾರ ಮೇಲೆಯೂ ಕೂಡ ಅನಗತ್ಯ ದಂಡ ವಿಧಿಸಲು ಇಚ್ಚಿಸುವುದಿಲ್ಲ. ಓವರ್ ಲೋಡ್ ಮಾಡಿಕೊಂಡು ಹೋಗದೆ ಹೊಂದಾಣಿಕೆಯನ್ನು ಮಾಡುವ ನಿಟ್ಟಿನಲ್ಲಿ ಚಾಲಕರು ನಡೆದುಕೊಳ್ಳಬೇಕು. ಅದರ ಬದಲು ಇತರ ಚಾಲಕರಿಗೆ ದುಡಿಯಲು ಅವಕಾಶ ನೀಡಿ ಎಂದು ಅವರು ಮನವಿ ಮಾಡಿದರು.

ಮಂಗಳೂರು ಶಾರದಾ ಶಾಲೆಯ ಪ್ರಾಂಶುಪಾಲ ದಯಾನಂದ ಕಟೀಲ್ ಚಾಲಕರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಪಾಂಡೇಶ್ವರ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಜಯಾನಂದ, ಸಂಘದ ಅಧ್ಯಕ್ಷ ಉಮೇಶ್ ಅತ್ತಾವರ, ಸಂಘಟನಾ ಕಾರ್ಯದರ್ಶಿ ಲೋಕೇಶ್,ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ರೆಹಮಾನ್ ಕುಂಜತಬೈಲ್ ನೆರೆವೇರಿಸಿದರು. ಪ್ರಧಾನ ಕಾರ್ಯದರ್ಶಿ ಕಿರಣ್ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು