ಇತ್ತೀಚಿನ ಸುದ್ದಿ
ಕಾಶ್ಮೀರದ ಹಿಮಪರ್ವತದಲ್ಲಿ ಮಸ್ಕಿಯ ಹೆಸರು!!: ಅಭಿಮಾನ ಮೆರೆದ ರಾಯಚೂರು ಯೋಧ
11/01/2022, 10:23
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ
ಅಂತರಗಂಗೆ ರಾಯಚೂರು
info.reporterkarnataka.com
ರಾಯಚೂರಿನ ಮಸ್ಕಿಯಿಂದ ದೇಶ ಸೇವೆ ಮಾಡಲು ಸೈನ್ಯ ಸೇರಿದ ಯೋಧರೊಬ್ಬರು ಕಾಶ್ಮೀರದಲ್ಲಿ ಹಿಮದಿಂದ ಕೂಡ ಪರ್ವತ ಶ್ರೇಣಿಯಲ್ಲಿ ಮಸ್ಕಿಯ ಹೆಸರು ಬರೆದು ನಾಡಿನ ಅಭಿಮಾನವನ್ನು ಮೆರೆದಿದ್ದಾರೆ.
ಮಸ್ಕಿಯ ಯುವಕ ಮನೋಜ್ ಕುಮಾರ್ ಕಳೆದ 10 ವರ್ಷಗಳಿಂದ ದೇಶ ಕಾಯುವ ಕಾಯಕದಲ್ಲಿ ನಿರತರಾಗಿದ್ದಾರೆ. ಕಾಶ್ಮೀರದ ಗಡಿ ಭಾಗದಲ್ಲಿ ಕೊರೆಯುವ ಚಳಿಯಲ್ಲಿ ಕರ್ತವ್ಯ ನಿರತರಾಗಿದ್ದಾರೆ. ಕಾಶ್ಮೀರದ ಹಿಮ ಪರ್ವತದಲ್ಲಿ ತನ್ನ ಹುಟ್ಟೂರಿನ ಅಭಿಮಾನದಿಂದ ಹಿಮಗುಡ್ಡೆಯ ಮೇಲೆ ಮಸ್ಕಿ ಹೆಸರು ಬರೆದು ಅಭಿಮಾನ ಮೆರೆದಿದ್ದಾರೆ.
ಮನೋಜ್ ಕುಮಾರ್ ಮಸ್ಕಿಯ ಜೋಗಿನ ರಾಮಣ್ಣ ಸ್ಮಾರಕ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದರು. ಶಾಲಾ ದಿನಗಳಲ್ಲಿ ದೇಶ ಅಭಿಮಾನ ಹೊಂದಿದ್ದು, ದೇಶಸೇವೆ ಮಾಡುವ ಅಭಿಲಾಷೆಯನ್ನು ತನ್ನ ಸ್ನೇಹಿತರ ಜತೆ ಹಂಚಿಕೊಂಡಿದ್ದರು. ಇದನ್ನು ಮಸ್ಕಿಯಲ್ಲಿರುವ ಅವ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ.
ಮಸ್ಕಿ ಯೋಧ ಮನೋಜ್ ಕುಮಾರ್ ದೇಶಸೇವೆ ಮಾಡಲು ಸೇರಿದಾಗಿನಿಂದ ಆತನಿಗೆ ಹುಟ್ಟೂರಿನ ಅಭಿಮಾನಿಗಳು ಹೆಚ್ಚಾಗಿದ್ದಾರೆ.