10:58 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಹಳೆಯಂಗಡಿ ಗ್ರಾಪಂನಲ್ಲಿ ಭ್ರಷ್ಟಾಚಾರದ ವಾಸನೆ: 9/11 ನೀಡಲು ಪಿಡಿಒ ಹಿಂದೇಟು; 3 ತಿಂಗಳಿನಿಂದ ಕಚೇರಿ ಅಲೆಯುತ್ತಿರುವ ಹಿರಿಯ ನಾಗರಿಕ

19/12/2021, 16:21

ಮಂಗಳೂರು(reporterkarnataka.com): ಜಾಗದ 9/11 ವರ್ಗಾವಣೆ ಕುರಿತು ಹಿರಿಯ ನಾಗರಿಕರೊಬ್ಬರನ್ನು ಗ್ರಾಮ ಪಂಚಾಯಿತಿ ಅಧಿಕಾರಿಯೊಬ್ಬರು ಸತಾಯಿಸುತ್ತಿರುವ ಘಟನೆ ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಇದರ ಹಿಂದೆ ಭ್ರಷ್ಟಾಚಾರ ವಾಸನೆ ಮೂಗಿಗೆ ಬಡಿಯಲಾರಂಭಿಸಿದೆ.
68ರ ಹರೆಯದ ಹಿರಿಯ ನಾಗರಿಕ ಪದ್ಮನಾಭ ಸುವರ್ಣ ಅವರು ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾಗ ಖರೀದಿಸಿದ್ದರು. ಜಾಗದ 9/11 ದಾಖಲೆಯನ್ನು ಅವರ ಹೆಸರಿಗೆ ವರ್ಗಾವಣೆ ಮಾಡಬೇಕಿತ್ತು. ಈ ಕುರಿತು ಪದ್ಮನಾಭ ಸುವರ್ಣ ಅವರು ಸೆಪ್ಟೆಂಬರ್ 2, 2021ರಂದು ಎಲ್ಲ ದಾಖಲೆಯನ್ನು ಹಳೆಯಂಗಡಿ ಗ್ರಾಮ ಪಂಚಾಯಿತಿಗೆ ಸಲ್ಲಿಸಿದ್ದರು. ಹಾಗೆ 9/11 ವರ್ಗಾವಣೆ ಮಾಡಿಕೊಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಹಲವು ಬಾರಿ ವಿನಂತಿಸಿದ್ದರು. ಆದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಿರಿಯ ನಾಗರಿಕ ಮನವಿಗೆ ಕ್ಯಾರೇ ಮಾಡುತ್ತಿಲ್ಲ.

ಪದ್ಮನಾಭ ಸುವರ್ಣ ಅವರಿಗೆ ಅಗತ್ಯವಿರುವ 9/11 ವರ್ಗಾವಣೆ ಮಾಡಿಕೊಡಲು ಹಲವು ಸಮಯದಿಂದ ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಡಿಸೆಂಬರ್ 13ರಂದು ಪದ್ಮನಾಭ ಸುವರ್ಣ ಅವರು ಹಳೆಯಂಗಡಿ ಗ್ರಾಮ ಪಂಚಾಯಿತಿಗೆ ತೆರಳಿ ಮತ್ತೆ ವಿನಂತಿ ಮಾಡಿಕೊಂಡಾಗಲೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇನ್ನೂ ಒಂದು ತಿಂಗಳ ಕಾಲಾವಕಾಶ ಬೇಕು ಎಂದು ಹೇಳಿದ್ದರು.  ಪದ್ಮನಾಭರ ಆತ್ಮೀಯರೊಬ್ಬರು ಅಭಿವೃದ್ಧಿ ಅಧಿಕಾರಿಗೆ ಕರೆ ಮಾಡಿ ವಿನಂತಿಸಿದಾಗಲೂ ಒಂದು ತಿಂಗಳ ಸಮಯ ಬೇಕು ಎಂದು ಹೇಳಿದ್ದರು. ಆಗ ಅವರು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ವಿಳಂಬದ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದಾಗ, ಪಿಡಿಒ ಅವರು ದರ್ಪದಿಂದ ಅವರ ಬಳಿಯೇ ಪಡೆದುಕೊಳ್ಳಿ, ಇಲ್ಲಿಗೆ ಯಾಕೆ ಬರುತ್ತೀರಿ ಎಂದು ಉಡಾಫೆಯಿಂದ ಉತ್ತರಿಸಿದ್ದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾವ ಕಾರಣಕ್ಕಾಗಿ ವಿಳಂಬ ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಇಂತಹ ಭ್ರಷ್ಟ ಅಧಿಕಾರಿ ವಿರುದ್ಧ ಜಿಪಂ ಸಿಇಒ ಕಾನೂನು ಕ್ರಮ ಕೈಗೊಂಡು ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕ ಪದ್ಮನಾಭ ಸುವರ್ಣ ಅವರಿಗೆ ನ್ಯಾಯ ಒದಗಿಸುವುದು ಇಂದಿನ ಅಗತ್ಯವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು