ಇತ್ತೀಚಿನ ಸುದ್ದಿ
ಮುಕ್ಕೋಟಿ ದ್ವಾದಶಿ: ಬಂಟ್ವಾಳದಲ್ಲಿ ಶ್ರೀ ದೇವರ ಸಹಿತ ಕಾಶೀ ಮಠಾಧೀಶರ ತೀರ್ಥ ಸ್ನಾನ
15/12/2021, 18:49
ಚಿತ್ರ : ಮಂಜು ನೀರೇಶ್ವಾಲ್ಯ ಮಂಗಳೂರು(reporterkarnataka.com) :
ಕರಾವಳಿಯ ಪುಣ್ಯಕ್ಷೇತ್ರಗಳಲ್ಲೊಂದಾದ ಬಂಟ್ವಾಳದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ‘ಮುಕ್ಕೋಟಿ ದ್ವಾದಶಿ’ ಉತ್ಸವ ಗಮನಸೆಳೆಯಿತು. ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ದೇವರ ನೇತ್ರಾವತಿ ನದಿಯಲ್ಲಿ ತೀರ್ಥ ಸ್ನಾನ ನಡೆಯಿತು.
ಬುಧವಾರ ವೈಕುಂಠ ಏಕಾದಶಿ ವೈಭವ ಇಂದು ಪ್ರಾತಃಕಾಲ ಶ್ರೀನಿವಾಸ ದೇವರ ಪಲ್ಲಕಿ ಉತ್ಸವವು ಭಕ್ತಸಮೂಹದ ಕಣ್ಮನ ಸೆಳೆಯಿತು. ಬಳಿಕ ಶ್ರೀ ದೇವರ ಸ್ವಯಂಸೇವಕರ ಭುಜ ಸೇವೆಯೊಂದಿಗೆ ಹಗಲು ಪೇಟೆ ಉತ್ಸವ ಬಳಿಕ ರಥೋತ್ಸವ ಜರಗಿತು.
ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ. ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯೆ ಮುಕ್ಕೋಟಿ ಏಕಾದಶಿ ಬರುತ್ತದೆ.
ಆ ದಿನದಂದು ವೈಕುಂಠದ ಉತ್ತರ ದ್ವಾರ ತೆರೆಯುತ್ತದೆ. ದೇವತೆಗಳೆಲ್ಲ ಮಹಾವಿಷ್ಣುವಿನ ದರ್ಶನ ಪಡೆಯುವ ಸಲುವಾಗಿ ಆ ದ್ವಾರದ ಮೂಲಕ ತೆರಳುತ್ತಾರೆ. ಆದ್ದರಿಂದ ದೇವಾಲಯಗಳ ಉತ್ತರ ದಿಕ್ಕಿನ ದ್ವಾರಗಳನ್ನು ತೆರೆಯಲಾಗುತ್ತದೆ. ಆ ಮೂಲಕ ದರ್ಶನ ಪಡೆಯಲಾಗುತ್ತದೆ.