ಇತ್ತೀಚಿನ ಸುದ್ದಿ
ಉಡುಪಿ: 3.70 ಮೌಲ್ಯದ ಕಳ್ಳತನ ಪ್ರಕರಣ ಭೇದಿಸಿದ ಉಡುಪಿ ಪೊಲೀಸರು; ಸೊತ್ತುಗಳು ವಶ, ಕಳ್ಳ ಅರೆಸ್ಟ್
23/11/2021, 18:12
ಉಡುಪಿ(reporterkarnataka.com):
ಬಾಬು ಆಚಾರ್ಯ ಅವರ ಮನೆಯಲ್ಲಿ ನ.17ರಂದು ನಡೆದ ಕಳ್ಳತನವನ್ನು ಉಡುಪಿ ಪೊಲೀಸರು ಭೇದಿಸಿದ್ದು, ಸುಕೇಶ್ ನಾಯ್ಕ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕಳ್ಳನ ಬೆರಳುಮುದ್ರೆ ಪರಿಶೀಲಿಸಿದಾಗ ಉಡುಪಿ ನಗರ ಠಾಣಾ ವ್ಯಾಪ್ತಿಯ ಸುಕೇಶ್ ನಾಯ್ಕ ಎಂಬವನ ಬೆರಳು ಮುದ್ರೆಗೆ ಹೊಂದಾಣಿಕೆ ಆಗಿರುವ ಬಗ್ಗೆ ಮಾಹಿತಿ ಲಭಿಸಿದ್ದು ಕಾರ್ಯಪ್ರವೃತ್ತರಾದ ಪೊಲೀಸ್ ಸಿಬ್ಬಂದಿಯವರು ಆರೋಪಿ ಸುಕೇಶ್ ನಾಯ್ಕ್ ನ್ನು ನ.21ರಂದು ಬೆಳ್ಳಂಪಳ್ಳಿ ಕ್ವಾಲಿಟಿ ವೈನ್ ಶಾಪ್ ಬಳಿ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ.
ಆರೋಪಿಯಿಂದ ಗುಂಡಿಬೈಲು ಪಂಚಧೂಮಾವತಿ ದೈವಸ್ದಾನದ ಬಳಿ ಶ್ರೀಕರ ಕಾಮತ್ ಎಂಬವರ ಪೊದರು ಜಾಗದಲ್ಲಿ ಮಣ್ಣಿನ ಅಡಿಯಲ್ಲಿ 3,60,000/- ಮೌಲ್ಯದ ಚಿನ್ನಾಭರಣಗಳನ್ನು ಹೂತಿಟಿದ್ದ ಎನ್ನಲಾಗಿದೆ. ಈತನ ವಿರುದ್ದ ಹಿರಿಯಡ್ಕ, ಮಣಿಪಾಲ ಉಡುಪಿ ನಗರ ಠಾಣೆ, ಬ್ರಹ್ಮಾವರ ಠಾಣೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು , ಜೈಲಿನಿಂದ ಒಂದು ತಿಂಗಳ ಹಿಂದೆ ಬಿಡುಗಡೆ ಗೊಂಡಿದ್ದ.
ಘಟನೆ ವಿವರ: ನ.17ರಂದು ಯಾರೋ ಕಳ್ಳರು ಹಳೆ ಮನೆಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ, ಕಪಾಟಿನಲ್ಲಿದ್ದ ಬೀಗದಿಂದ ಲಾಕರ್ ತೆಗೆದು ಅದರಲ್ಲಿದ್ದ ಒಟ್ಟು 90 ಗ್ರಾಂ ತೂಕದ ರೂ. 3,60,000/- ಮೌಲ್ಯದ ಚಿನ್ನಾಭರಣಗಳು ಹಾಗೂ ಬೆಳ್ಳಿ ಸಾಮಾಗ್ರಿಗಳು ಒಟ್ಟು ರೂ. 10,000/- ಮೌಲ್ಯದ ಹಾಗೂ ದೇವರ ಡಬ್ಬದಲ್ಲಿದ್ದ ಅಂದಾಜು ರೂ. 400/- ಒಟ್ಟು ಮೌಲ್ಯ ರೂ. 3,70,400/- ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದರ ಬಗ್ಗೆ ಬಾಬು ಆಚಾರ್ಯರವರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಎನ್. ವಿಷ್ಣುವರ್ಧನ್ ಆದೇಶದಂತೆ, ಕುಮಾರಚಂದ್ರ (ಹೆಚ್ಚುವರಿ ಪೊಲೀಸ್ ಅಧೀಕ್ಷಕರು),ಡಿವೈಎಫ್ ಎಸ್ ಪಿ ಸುಧಾಕರ ಸದಾನಂದ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ., ಪ್ರೋಬೆಷನರಿ ಪಿಎಸ್‌ಐ ರವರಾದ ಸುಹಾಸ್. ಆರ್, ಪ್ರಸಾದ್ ಕುಮಾರ್, , ಸಿಬ್ಬಂದಿಯವರಾದ, ರಾಜೇಶ್ ,ಸತೀಶ , ಜೀವನ್ ಕುಮಾರ್ , ಲೋಕೇಶ್, ಸಂತೋಷ ರಾಥೋಡ , ಕಾರ್ತಿಕ್ , ಬಾಲಕೃಷ್ಣ, ಶಿವಕುಮಾರ್ , ಚೇತನ್, ಹೇಮಂತ್, ರವರು ಪಾಲ್ಗೋಂಡಿರುತ್ತಾರೆ. ಆರೋಪಿ ಆರೋಪಿ ಸುಕೇಶ್ ನಾಯ್ಕ ಯನ್ನು
ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿಇರುತ್ತಾನೆ.