ಇತ್ತೀಚಿನ ಸುದ್ದಿ
Kodagu | ಕುಶಾಲನಗರ ಬಳಿ ಕಲ್ಲಿನ ಕೋರೆಯಲ್ಲಿ ಲಾರಿ ಅಪಘಾತ: ಚಾಲಕ ದುರ್ಮರಣ
01/11/2026, 20:29
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಲ್ಲು ಗಣಿಗಾರಿಕೆಯ ಕೋರೆಯಲ್ಲಿ ಲಾರಿ ಅಪಘಾತಕ್ಕೀಡಾಗಿ ಚಾಲಕ ಮೃತ ಪಟ್ಟಿರುವ ಘಟನೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೊರೆನೂರಿನ ಅರೆಗಲ್ಲಿಯಲ್ಲಿ ನಡೆದಿದೆ. ಕುಶಾಲನಗರ ಟೌನ್ ಕಾಲೋನಿ ನಿವಾಸಿ ಆರ್ಮುಗಂ ಎಂಬುವವರ ಪುತ್ರ ವಿನ್ಸೆಂಟ್ ಮೃತ ದುರ್ದೈವಿ. ಲೋಡ್ ತುಂಬಿದ ಲಾರಿಯನ್ನು ಚಲಾಯಿಸುತ್ತಿದ್ದಾಗ ಲಾರಿ ನಿಯಂತ್ರಣ ಕಳೆದುಕೊಂಡಿದೆ. ಈ ಸಂದರ್ಭ ಲಾರಿಯಿಂದ ಕೆಳಗೆ ಹಾರಿದ ಚಾಲಕ ವಿನ್ಸೆಂಟ್ ರವರು ಅದರ ಅಡಿಗೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ.













