ಇತ್ತೀಚಿನ ಸುದ್ದಿ
ದಾಖಲೆ ಇಲ್ಲದ ಜಮೀನಿಗೆ ಇ-ಸ್ವತ್ತು ವಿತರಣೆ: ಸಚಿವ ಈಶ್ವರ ಖಂಡ್ರೆ
01/11/2026, 20:26
ಬೆಂಗಳೂರು(reporterkarnataka.com): ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ರಹಿತ ಆಸ್ತಿ ಹೊಂದಿರುವವರಿಗೆ ಇ-ಸ್ವತ್ತು ನೀಡುವ ಮಹತ್ವದ ಯೋಜನೆಯನ್ನು ಕರ್ನಾಟಕ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಘೋಷಿಸಿದ್ದು, ನವೆಂಬರ್ 2 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ರಾಜ್ಯದ ಸುಮಾರು 25 ರಿಂದ 30 ಲಕ್ಷ ಆಸ್ತಿ ಮಾಲೀಕರಿಗೆ ಇದು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಅ.2ರಿಂದ ಇ-ಸ್ವತ್ತು ಅರ್ಜಿ ಜಾರಿ ಮಾಡುತ್ತೇನೆಂದು ಹೇಳಿದ್ದೆ, ನೀತಿ ಸಂಹಿತೆ ಇದ್ದ ಕಾರಣ ಆಗಲಿಲ್ಲ. ಬಿ-ಖಾತಾ ಪಡೆಯುವ ಪ್ರಕ್ರಿಯೆ ಸಡಿಲೀಕರಣ ಮಾಡುತ್ತೇವೆ. ಕೆಇಬಿ ಬಿಲ್, ವಾಸ ದೃಢೀಕರಣ ಪತ್ರ ಪಡೆದು ಇ-ಸ್ವತ್ತು ನೀಡುತ್ತೇವೆ’ ಎಂದಿದ್ದಾರೆ.













