ಇತ್ತೀಚಿನ ಸುದ್ದಿ
ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ನಟನ ಆರೋಗ್ಯ ವಿಚಾರಿಸಿದ ಮಹಾರಾಷ್ಟ್ರದ ಡಿಸಿಎಂ ಏಕನಾಥ ಶಿಂಧೆ
19/10/2026, 18:56
ಮುಂಬೈ(reporterkarnataka.com): ಬಾಲಿವುಡ್ ನಟ ಟೈಗರ್ ಶ್ರಾಫ್ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಜುಹು ಪ್ರದೇಶದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಅದೃಷ್ಟವಶಾತ್ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಈ ನಡುವೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಟೈಗರ್ ಶ್ರಾಫ್ ನ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದು ಅಪಾಯದ ಪರಿಸ್ಥಿತಿ ನಡುವೆಯೂ ಟೈಗರ್ ಶ್ರಾಫ್ ಅವರು ಗಾಯಗೊಂಡ ತನ್ನ ಕಾರು ಚಾಲಕನನ್ನು ಸ್ವತಃ ತಾನೇ ಚಾಲನೆ ಮಾಡಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗುಂಡಿನ ದಾಳಿಯಿಂದ ನಟ ಟೈಗರ್ ಕೈಗೆ ಗಾಯಗಳಾಗಿವೆ.












