ಇತ್ತೀಚಿನ ಸುದ್ದಿ
ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಮೇಳಕ್ಕೆ ಸಿದ್ಧತೆ: ಪಾಲ್ದನೆ ಚರ್ಚ್ ತಂಡದಿಂದ ಸಂಗೀತ ಅಭ್ಯಾಸ; 6 ಸಾವಿರ ಗಾಯಕರಿಂದ 5 ಸಾವಿರ ಹಾಡು
19/10/2026, 15:48
ಮಂಗಳೂರು(reporterkarnataka.com):ಕೊಂಕಣಿ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ವತಿಯಿಂದ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಮೇಳದ ಅಂಗವಾಗಿ ನವೆಂಬರ್ 3 ರಿಂದ 15ರ ವರೆಗೆ 12 ದಿನಗಳ, 12 ಗಂಟೆ ಹಾಗೂ 12 ನಿಮಿಷಗಳ ನಿರಂತರ ಸಂಗೀತ ಗಾಯನ ಕಾರ್ಯಕ್ರಮವನ್ನು ನಗರದ ಪುರಭವನದಲ್ಲಿ ಪ್ರಸ್ತುತ ಪಡಿಸಿ ಗಿನ್ನಿಸ್ ದಾಖಲೆಯನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.
ಈ ಸಂಗೀತ ಕಾರ್ಯಕ್ರಮದಲ್ಲಿ 6000 ಹಾಡುಗಾರರು ಸುಮಾರು 5000 ಹಾಡುಗಳನ್ನು ಹಾಡಿ ಹೊಸ ದಾಖಲೆಯನ್ನು ಬರೆಯಲಿದ್ದಾರೆ.
ಭಾಗವಹಿಸಲಿರುವ ತಂಡಗಳು ನಿರಂತರ ಒಂದೊಂದು ಗಂಟೆ ಕಾಲ ಹಾಡುವ ಬಗ್ಗೆ ಈಗ ಅಭ್ಯಾಸ ಮಾಡುತ್ತಿದ್ದಾರೆ. ಅದರಂತೆ ಪಾಲ್ದನೆ ಚರ್ಚ್ ನ ತಂಡದ ಅಭ್ಯಾಸದ ವೇಳೆ ಮಾಂಡ್ ಸೊಭಾಣ್ ತಂಡದ ಪದಾಧಿಕಾರಿಗಳು ಭೇಟಿ ನೀಡಿ ಸಲಹೆ ಸೂಚನೆಗಳನ್ನು ಹಾಗೂ ಕಾರ್ಯಕ್ರಮ ಪ್ರಸ್ತುತ ಪಡಿಸುವ ಸಂದರ್ಭ ಅನುಸರಿಸ ಬೇಕಾದ ನಿಯಮಗಳ ಬಗ್ಗೆ ಮಾಹಿತಿ ಮಾಡಿದರು.
ಮಾಂಡ್ ಸೊಭಾಣ್ ಉಪಾಧ್ಯಕ್ಷ ನವೀನ್ ಲೋಬೊ, ಖಜಾಂಚಿ ಎಲ್ ರೊಯ್ ರೊಡ್ರಿಗಸ್ ಅವರು ಸಲಹೆ ಸೂಚನೆ ನೀಡಿ ತಂಡವನ್ನು ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ತಂಡದ ಸಂಚಾಲಕಿ ಲಿಝಿ ಫೆರ್ನಾಂಡಿಸ್ , ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.












