ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ
15/10/2026, 12:37
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯ ಚೆನ್ನಾಪುರ ರಸ್ತೆಯಲ್ಲಿ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ 2 ಎಲೆಕ್ಟ್ರಿಕ್ ಸ್ಕೂಟರ್ ಗಳು ಬೆಳಗಾಗುವುದರಲ್ಲಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.




2 ಸ್ಕೂಟರ್ ಗಳು ಹೊತ್ತಿ ಉರಿದ ಪರಿಣಾಮ ಮನೆಯ ಗೋಡೆ, ಕಾಂಪೌಂಡ್ ಗೂ ಹಾನಿಯುಂಟಾಗಿದೆ.
ಚಂದ್ರಶೇಖರ್ ಎಂಬುವರು 6 ತಿಂಗಳ ಹಿಂದೆ ಖರೀದಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ.
ನಿಲ್ಲಿಸಿದ್ದ ಗಾಡಿ, ಇದ್ದಕ್ಕಿದ್ದಂತೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿದೆ. ತಡರಾತ್ರಿ ಭಾರೀ ಶಬ್ದದೊಂದಿಗೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದೆ.












