ಇತ್ತೀಚಿನ ಸುದ್ದಿ
28 ವರ್ಷಗಳ ಶೈಕ್ಷಣಿಕ ಸೇವೆ: ಆ.10ರಂದು ತ್ರಿಶಾ ದಿನಾಚರಣೆ; ವಿವಿಧ ಕ್ಷೇತ್ರಗಳ ಗಣ್ಯರಿಗೆ ಸನ್ಮಾನ
09/08/2026, 19:18
ಮಂಗಳೂರು:(reporterkarnataka.com):ಉನ್ನತ ಶಿಕ್ಷಣ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತ್ರಿಶಾ ಶಿಕ್ಷಣ ಸಂಸ್ಥೆಗಳು ಸಲ್ಲಿಸಿರುವ 28 ವರ್ಷಗಳ ಸಮರ್ಪಿತ ಸೇವೆಯನ್ನು ಸ್ಮರಿಸುವ ಸಲುವಾಗಿ ಆಗಸ್ಟ್ 10ರಂದು ‘ತ್ರಿಶಾ ದಿನ’ ಆಚರಣೆ ನಡೆಯಲಿದೆ.
ಬಲ್ಮಠದ ಡಾನ್ ಬೋಸ್ಕೋ ಹಾಲ್‌ನಲ್ಲಿ ಸೋಮವಾರ ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಶಿಕ್ಷಣ, ವೈದ್ಯಕೀಯ, ಯಕ್ಷಗಾನ, ನೃತ್ಯ, ನಾಟಕ, ಕ್ರೀಡೆ, ವಾಣಿಜ್ಯ, ಉದ್ಯಮ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ತ್ರಿಶಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಸಿಎ ಗೋಪಾಲ ಕೃಷ್ಣ ಭಟ್ ಅವರು ಗಣ್ಯ ಅತಿಥಿಗಳು, ಬೋಧಕವರ್ಗ, ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಉಪಸ್ಥಿತಿಯಲ್ಲಿ ಸನ್ಮಾನ ನೆರವೇರಿಸಲಿದ್ದಾರೆ.
ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ತ್ರಿಶಾ ಗ್ರೂಪ್ ಇನ್‌ಸ್ಟಿಟ್ಯೂಷನ್ಸ್‌ನ ಅಕಾಡೆಮಿಕ್ ಅಡ್ವೈಸರ್ ಡಾ. ನಾರಾಯಣ ಕಾಯರ್ ಕಟ್ಟೆ, ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ಪ್ರೊ. ಮಂಜುನಾಥ ಕಾಮತ್ ಎಂ., ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸುಪ್ರಭಾ ಎಂ. ಹಾಗೂ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಗ್ರಂಥಪಾಲಕ ಮತ್ತು ಮಾಧ್ಯಮ ಉಸ್ತುವಾರಿ ಪ್ರಭಾಕರ್ ಕೊಠಾರಿ ಉಪಸ್ಥಿತರಿದ್ದರು.
ಸನ್ಮಾನಿತರು:
1. ಡಾ. ದೇವರಾಜ್ ಕೆ. – ಮಾಜಿ ನಿರ್ದೇಶಕರು, ಎಸ್‌ಡಿಎಂ ಕಾಲೇಜು, ಎಂಬಿಎ, ಮಂಗಳೂರು
2. ಮೈತ್ರೇಯ ಎ. – ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೆಸಿಸಿಐ
3. ಯಕ್ಷಗುರು ರಾಕೇಶ್ ರೈ ಅಡ್ಕ – ಯಕ್ಷಗಾನ ಕಲಾವಿದರು
4. ಡಾ. ಮಧುಸೂದನ್ ಇ. – ಎಂಬಿಬಿಎಸ್, ಎಂಡಿ, ಆರ್‌ಎಂಒ
5. ಶ್ರೀಮಾ ಪ್ರಿಯದರ್ಶಿನಿ – ಅಂತರರಾಷ್ಟ್ರೀಯ ಕ್ರೀಡಾಪಟು
6. ರೂಪಾ ವರ್ಕಾಡಿ – ಭಾರತೀಯ ಚಲನಚಿತ್ರ ನಟಿ ಹಾಗೂ ರಂಗಭೂಮಿ ಕಲಾವಿದೆ
7. ಅನಿಲ್ ಚರಣ್ – ಅಧ್ಯಕ್ಷರು, ಮಾರುತಿ ಜನಸೇವಾ ಸಂಘ (ರಿ.), ಉಳ್ಳಾಲ, ಮಂಗಳೂರು
8. ಸಿಎ ಶಾಂತರಾಮ ಶೆಟ್ಟಿ – ಚಾರ್ಟರ್ಡ್ ಅಕೌಂಟೆಂಟ್
9. ವಿಕ್ರಮದತ್ತ – ಮಾಜಿ ಮುಖ್ಯ ತಾಂತ್ರಿಕ ಅಧಿಕಾರಿ, ಭಾರತೀಯ ನೌಕಾಪಡೆ
10. ಕದ್ರಿ ನವನೀತ್ ಶೆಟ್ಟಿ – ಪತ್ರಿಕೋದ್ಯಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನಮ್ಮ ಕುಡ್ಲ
28 ವರ್ಷಗಳ ಶೈಕ್ಷಣಿಕ ಪಯಣದ ಸಂಭ್ರಮದೊಂದಿಗೆ, ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸುವ ಮೂಲಕ ತ್ರಿಶಾ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಲಿದೆ.












