ಇತ್ತೀಚಿನ ಸುದ್ದಿ
ಸಂತ ರವಿದಾಸ್ ಅವರ 650ನೇ ಜನ್ಮ ಜಯಂತಿ ಅಂಗವಾಗಿ “ಭಾರತೀಯ ಸಂತ ಪರಂಪರೆ – ಉಪನ್ಯಾಸಮಾಲೆ”
07/08/2026, 11:21
ಮಂಗಳೂರು(reporterkarnataka.com):ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ (KRMSS), ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 6ರಂದು ಕಾಲೇಜಿನ ಸಭಾಂಗಣದಲ್ಲಿ ಸಂತ ರವಿದಾಸ್ ಅವರ 650ನೇ ಜನ್ಮ ಜಯಂತಿ ಅಂಗವಾಗಿ “ಭಾರತೀಯ ಸಂತ ಪರಂಪರೆ – ಉಪನ್ಯಾಸಮಾಲೆ” ಕಾರ್ಯಕ್ರಮವನ್ನು ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾಸ್ಕರ್ ರಾವ್ ಕುಕ್ಕುವಳ್ಳಿ ಅವರು ಉದ್ಘಾಟಿಸಿ, ಅವರು ಮಾತನಾಡಿ ಭಾರತೀಯ ಸಂತರ ಚಿಂತನೆಗಳು ಸಮಾಜದಲ್ಲಿ ಸಮಾನತೆ, ಸಹೋದರತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿವೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪ್ರೊ. ಸುಮಾ ಟಿ. ಆರ್. ಮಾತನಾಡಿ “ಭಾರತೀಯ ಸಂತ ಪರಂಪರೆ” ವಿಷಯದ ಕುರಿತು ಉಪನ್ಯಾಸ ನೀಡಿ, ಸಂತ ರವಿದಾಸ್ ಅವರ ಜೀವನ, ಭಕ್ತಿ ಚಳವಳಿ, ಸಾಮಾಜಿಕ ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶವನ್ನು ನೀಡಿದರು.
ಅಧ್ಯಕ್ಷೀಯ ಭಾಷಣದಲ್ಲಿ ಕಾಲೇಜಿನ ಪ್ರಾಂಶುಪಾಲರು ಭಾರತೀಯ ಸಂಸ್ಕೃತಿ ಮತ್ತು ಸಂತ ಪರಂಪರೆಯ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರೊ.ನಾಗರತ್ನ ರಾವ್ ಮಾತನಾಡಿ ಭಾರತೀಯ ಸಂತ ಪರಂಪರೆಯ ಮಹತ್ವ ಹಾಗೂ ಸಂತ ರವಿದಾಸ್ ಅವರ ಜೀವನ ಸಂದೇಶವನ್ನು ಪರಿಚಯಿಸಿದರು.
ಕಾರ್ಯಕ್ರಮವನ್ನು ಸನಾ ಸತೀಶ್ ನಿರೂಪಿಸಿದರು. ಸ್ಪೂರ್ತಿ ಶೆಟ್ಟಿ ಪ್ರಾರ್ಥಿಸಿ, ಡಾ. ಜ್ಯೋತಿ ಸ್ವಾಗತಿಸಿ, ಲಿನಿಷಾ ಅತಿಥಿಗಳ ಪರಿಚಯವನ್ನು ಮಾಡಿಕೊಟ್ಟರು.>ದೃಶ್ಯಾ ವಂದನಾರ್ಪಣೆ ಸಲ್ಲಿಸಿದರು.
















