11:20 PM Saturday17 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಶೇ. 12ಕ್ಕಿಂತ ಹೆಚ್ಚು ಆಲ್ಕೋಹಾಲ್ ಹೊಂದಿರುವ ಔಷಧಿಗಳಿಗೆ ವೈದ್ಯರ `ಪ್ರಿಸ್ಕ್ರಿಪ್ಷನ್’ ಕಡ್ಡಾಯ: ಕೇಂದ್ರ ಸರಜಾರದ ಮಹತ್ವದ ಆದೇಶ

10/07/2026, 22:20

ನವದೆಹಲಿ(reporterkarnataka.com): ನೀವು ಕೆಮ್ಮಿನ ಸಿರಪ್ ಅಥವಾ ಯಾವುದೇ ಟಾನಿಕ್‌ಗಳನ್ನು ಮೆಡಿಕಲ್ ಶಾಪ್‌ಗೆ ಹೋಗಿ ಸುಮ್ಮನೆ ಕೇಳಿ ಖರೀದಿಸುವ ದಿನಗಳು ಇನ್ಮುಂದೆ ಮುಗಿಯಲಿವೆ. ಔಷಧಗಳ ದುರ್ಬಳಕೆ ಮತ್ತು ನಶೆಗಾಗಿ ಬಳಸುವುದನ್ನು ತಡೆಯಲು ಭಾರತ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.
ಇನ್ಮುಂದೆ ಶೇ. 12ಕ್ಕಿಂತ ಹೆಚ್ಚು ಆಲ್ಕೋಹಾಲ್ ಅಂಶ ಹೊಂದಿರುವ ಎಲ್ಲಾ ಓರಲ್ (ಬಾಯಿಯ ಮೂಲಕ ಸೇವಿಸುವ) ಔಷಧಗಳನ್ನು ‘ಶೆಡ್ಯೂಲ್ ಹೆಚ್1’ ವರ್ಗಕ್ಕೆ ಸೇರಿಸಲಾಗಿದೆ. ಇದರರ್ಥ, ವೈದ್ಯರ ಲಿಖಿತ ಚೀಟಿ ಇಲ್ಲದೆ ಈ ಔಷಧಗಳನ್ನು ಇನ್ಮುಂದೆ ಯಾರಿಗೂ ಮಾರಾಟ ಮಾಡುವಂತಿಲ್ಲ.

*ಮೆಡಿಕಲ್ ಶಾಪ್‌ಗಳಿಗೂ ಕಠಿಣ ನಿಯಮ:*
ಸರ್ಕಾರದ ಈ ಹೊಸ ನಿಯಮದಿಂದಾಗಿ ಕಫ ಸಿರಪ್ ಹಾಗೂ ಆಲ್ಕೋಹಾಲ್ ಅಂಶವಿರುವ ಟಾನಿಕ್‌ಗಳ ಮುಕ್ತ ಮಾರಾಟಕ್ಕೆ ಬ್ರೇಕ್ ಬೀಳಲಿದೆ. ಕೇವಲ ಗ್ರಾಹಕರಿಗೆ ಮಾತ್ರವಲ್ಲದೆ, ಈ ಔಷಧಗಳನ್ನು ಮಾರಾಟ ಮಾಡುವ ಫಾರ್ಮಸಿ ಮಾಲೀಕರಿಗೂ ಕಠಿಣ ನಿಯಮಗಳನ್ನು ವಿಧಿಸಲಾಗಿದೆ. ಅವರು ಈ ಕೆಳಗಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

*ವೈದ್ಯರ ಅಧಿಕೃತ ಚೀಟಿ ಇದ್ದರೆ ಮಾತ್ರ ಔಷಧ ನೀಡಬೇಕು*
ಯಾವ ಗ್ರಾಹಕರಿಗೆ, ಎಷ್ಟು ಪ್ರಮಾಣದಲ್ಲಿ ಔಷಧ ಮಾರಾಟ ಮಾಡಲಾಗಿದೆ ಎಂಬ ಸಂಪೂರ್ಣ ದಾಖಲೆಯನ್ನು ಕಾಯ್ದಿರಿಸಬೇಕು.ವೈದ್ಯರ ಪ್ರಿಸ್ಕ್ರಿಪ್ಷನ್ ಪ್ರತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.

*ಯಾವ ಔಷಧಗಳಿಗೆ ಇದು ಅನ್ವಯ?:*
ಹೊಸ ಬದಲಾವಣೆಯ ಪ್ರಕಾರ, ಶೇ. 12ಕ್ಕಿಂತ ಹೆಚ್ಚು ಆಲ್ಕೋಹಾಲ್ ಹೊಂದಿರುವ ಹಾಗೂ 30 ಮಿಲಿಲೀಟರ್‌ಗಿಂತ ಹೆಚ್ಚಿನ ಪ್ರಮಾಣದ ಪ್ಯಾಕ್ ಅಥವಾ ಬಾಟಲಿಗಳಲ್ಲಿ ಬರುವ ಎಲ್ಲಾ ಓರಲ್ ಔಷಧಗಳು ಈ ನಿಯಮದ ವ್ಯಾಪ್ತಿಗೆ ಬರಲಿವೆ.

*ನಿಯಮ ಬದಲಾವಣೆಗೆ ಕಾರಣವೇನು?:*
ದೇಶದಲ್ಲಿ ಆಲ್ಕೋಹಾಲ್ ಮತ್ತು ಕೋಡಿನ್ (Codeine) ಅಂಶವಿರುವ ಕೆಮ್ಮಿನ ಸಿರಪ್‌ಗಳನ್ನು ನಶೆಗಾಗಿ (ಮಾದಕ ವಸ್ತುವಿನಂತೆ) ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ವಿವಿಧ ರಾಜ್ಯಗಳಲ್ಲಿ ಇಂತಹ ಸಿರಪ್‌ಗಳ ದೊಡ್ಡ ಮಟ್ಟದ ಕಳ್ಳಸಾಗಣೆಯ ಜಾಲವೂ ಪತ್ತೆಯಾಗಿತ್ತು. ಜೊತೆಗೆ, ಕಳೆದ ವರ್ಷ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಫ ಸಿರಪ್ ಸೇವನೆಯಿಂದಾಗಿ ಹಲವು ಮಕ್ಕಳು ಸಾವನ್ನಪ್ಪಿದ ಘಟನೆಯೂ ನಡೆದಿತ್ತು. ಈ ಗಂಭೀರ ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ‘ಡ್ರಗ್ಸ್ ರೂಲ್ಸ್ 1945’ ಕ್ಕೆ ತಿದ್ದುಪಡಿ ತಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು