ಇತ್ತೀಚಿನ ಸುದ್ದಿ
ವೀಕೆಂಡ್ ಮೋಜು-ಮಸ್ತಿ | ಹಾಸನದಲ್ಲಿ ಘೋರ ದುರಂತ: ಸ್ನೇಹಿತರ ಕಣ್ಣೆದುರೇ ಮೂವರು ಗೆಳೆಯರು ನೀರುಪಾಲು
15/06/2026, 17:11
ಹಾಸನ(reporterkarnataka.com): ವೀಕೆಂಡ್ ರಜೆಯ ಮೋಜು-ಮಸ್ತಿಗಾಗಿ ಪ್ರವಾಸಕ್ಕೆಂದು ಬಂದಿದ್ದ ಯುವಕರ ತಂಡವೊಂದರಲ್ಲಿ ಭೀಕರ ದುರಂತ ಸಂಭವಿಸಿದೆ. ಈಜಲು ನದಿಗೆ ಇಳಿದಿದ್ದ ಮೂವರು ಯುವಕರು ನೀರಿನ ಆಳ ತಿಳಿಯದೆ ನದಿ ಪಾಲಾಗಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ಬಳಿಯ ಹೇಮಾವತಿ ನದಿ ಹಿನ್ನೀರಿನಲ್ಲಿ ನಡೆದಿದೆ.
ಮೃತ ಯುವಕರನ್ನು ಬೆಂಗಳೂರು ಮೂಲದ ಚರಣ್ (20), ಮಿಲನ್ (23) ಮತ್ತು ಮಣಿಕಂಠ (20) ಎಂದು ಗುರುತಿಸಲಾಗಿದೆ.
*ಪ್ರವಾಸಕ್ಕೆ ಬಂದಿದ್ದ 10 ಜನರ ತಂಡ:* ಎರಡು ದಿನಗಳ ವಾರಾಂತ್ಯದ ರಜೆ ಇದ್ದ ಕಾರಣ ಬೆಂಗಳೂರಿನಿಂದ 10 ಯುವಕರ ತಂಡವೊಂದು ಟ್ರಾವೆಲರ್ (ಟಿಟಿ) ವಾಹನದಲ್ಲಿ ಪ್ರವಾಸಕ್ಕೆಂದು ಹೊರಟಿತ್ತು. ಇವರೆಲ್ಲರೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದರು. ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬೆಂಗಳೂರಿಗೆ ಮರಳಿ ಪ್ರಯಾಣ ಬೆಳೆಸುವಾಗ ಈ ದುರ್ಘಟನೆ ಸಂಭವಿಸಿದೆ.
*ಪ್ರೇಕ್ಷಣೀಯ ಸ್ಥಳ ವೀಕ್ಷಣೆ ವೇಳೆ ದುರಂತ:* ಧರ್ಮಸ್ಥಳದಿಂದ ಮರಳುವಾಗ ಈ ಯುವಕರ ತಂಡ ನೇರವಾಗಿ ಬೆಂಗಳೂರಿಗೆ ಹೋಗದೆ, ಹಾಸನ ಮಾರ್ಗವಾಗಿ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ನಿರ್ಧರಿಸಿತ್ತು. ಅದರಂತೆ ಹೇಮಾವತಿ ಹಿನ್ನೀರಿನಲ್ಲಿರುವ ರಂಗನಾಥ ಸ್ವಾಮಿ ದೇವಾಲಯದ ದರ್ಶನ ಪಡೆದು, ಬಳಿಕ ಅಲ್ಲಿಗೆ ಸಮೀಪದಲ್ಲೇ ಇರುವ ಐತಿಹಾಸಿಕ ಶೆಟ್ಟಿಹಳ್ಳಿ ಮುಳುಗಡೆ ಚರ್ಚ್ ವೀಕ್ಷಿಸಲು ತೆರಳಿದ್ದರು. ಸಂಜೆಯ ವೇಳೆಗೆ ಪ್ರಕೃತಿ ಸೌಂದರ್ಯ ಸವಿಯುತ್ತಾ ಯುವಕರು ನದಿಯಲ್ಲಿ ಸ್ನಾನ ಮಾಡಲು ನೀರಿಗೆ ಇಳಿದಿದ್ದಾರೆ.














