11:12 AM Monday31 - August 2026
ಬ್ರೇಕಿಂಗ್ ನ್ಯೂಸ್
*ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ

ಇತ್ತೀಚಿನ ಸುದ್ದಿ

ಒಂದೇ ಶಾಲೆಯ 17 ವಿದ್ಯಾರ್ಥಿಗಳು ಅಗ್ನಿವೀರರಾಗಿ ಆಯ್ಕೆ: ಧಾರವಾಡದ ಯುವಕರ ಐತಿಹಾಸಿಕ ಸಾಧನೆ

10/06/2026, 11:01

ಧಾರವಾಡ(reporterkarnataka.com): ಅಚಲ ನಿರ್ಧಾರ, ಸೈನ್ಯಕ್ಕೆ ಸೇರ್ಪಡೆ ಆಗಲೇಬೇಕು ಎಂಬ ತವಕ, ನಿರಂತರ ಪರಿಶ್ರಮ ದೇಹ ದಂಡನೆ ಈ ಎಲ್ಲ ಪ್ರಯತ್ನಕ್ಕೂ ಆ ವಿದ್ಯಾರ್ಥಿಗಳಿಗೆ ಇದೀಗ ಪ್ರತಿಫಲ ಸಿಕ್ಕಿದೆ. ಒಂದೇ ಶಾಲೆಯಲ್ಲಿ ಕಲಿತ ಒಟ್ಟು 17 ಜನ ಯುವಕರು ಇದೀಗ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ.


ಇಷ್ಟಕ್ಕೂ ಈ ಯುವಕರು ಯಾವ ಗ್ರಾಮದವರು? ಯಾವ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ತಮ್ಮ ಶಿಕ್ಷಕರಿಂದ ಅಭಿನಂದನೆ ಪಡೆದುಕೊಳ್ಳುತ್ತಿರುವ ಈ ಯುವಕರು ಉಪ್ಪಿನ ಬೆಟಗೇರಿ ಕಲ್ಲೂರು ಹಾಗೂ ಹನುಮನಹಾಳ ಗ್ರಾಮದವರು ಈ ಎಲ್ಲ ಯುವಕರು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪೂರ್ಣಗೊಳಿಸಿದ್ದು, ಉಪ್ಪಿನ ಬೆಟಗೇರಿ ಗ್ರಾಮದ ಎಸ್‌ಜಿವಿ ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ಇದೇ ಶಾಲೆಯಲ್ಲಿ ಕಲಿತ ಈ ಯುವಕರಿಗೆ ಭಾರತೀಯ ಸೇನೆ ಸೇರಬೇಕು ಎಂಬ ಆಸೆ ಇತ್ತು. ಆ ಆಸೆ ಹೊತ್ತುಕೊಂಡೇ ತಮ್ಮ ಗುರಿ ಸಾಧಿಸಲು ಪ್ರಯತ್ನ ಆರಂಭಿಸಿದ್ದರು. ನಿರಂತರ ಪರಿಶ್ರಮದ ಫಲವಾಗಿ ಇದೀಗ 17 ಜನ ಯುವಕರು ಭಾರತೀಯ ಸೇನೆಗೆ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಓರ್ವ ಯುವಕ ವಾಯುಸೇನೆಯ ಅಗ್ನಿವೀರನಾಗಿ ಆಯ್ಕೆಯಾಗಿದ್ದಾನೆ.
ಉಪ್ಪಿನಬೆಟಗೇರಿಯ ಶಂಕರ ಕುರಗುಂದ, ಶಿವಾನಂದ ಮಸೂತಿ, ನಿರಂಜನ ಹುಟಗಿ, ಕಲೀಂ ಮುಜಾವರ, ಈರಣ್ಣ ಮಸೂತಿ, ಗಂಗಾಧರ ಅಂಬಣ್ಣವರ, ಶಬ್ಬೀರ್ ನದಾಫ್ ಸೇರಿದಂತೆ ಒಟ್ಟು 7 ಯುವಕರು ಹಾಗೂ ಕಲ್ಲೂರಿನ ಅಭಿಷೇಕ ಚಿಕ್ಕಮಠ, ಪ್ರದೀಪ ಮರೇದ, ಕುಮಾರ ಬುಡರಕಟ್ಟಿ, ಈರಣ್ಣ ಮರೇದ, ಪ್ರದೀಪ ಶಿವಳ್ಳಿ, ಅಮೀತಪೀರ್ ಸೈಯದನವರ ಸೇರಿದಂತೆ ಒಟ್ಟು 6 ಯುವಕರು ಮತ್ತು ಹನುಮನಾಳ ಗ್ರಾಮದ ಗೋಪಾಲ ಅಂಗಡಿ, ಸೋಮಲಿಂಗ ಅಂಗಡಿ, ಗೋಪಾಲ ಗಬ್ಬೂರ ಮೆಳೆಪ್ಪ ಅಂಗಡಿ ಸೇರಿದಂತೆ ಒಟ್ಟು 4 ಯುವಕರು ಹೀಗೆ ಉಪ್ಪಿನಬೆಟಗೇರಿಯ ಶ್ರೀ ಗುರು ವಿರೂಪಾಕ್ಷೇಶ್ವರ ಪ್ರೌಢಶಾಲೆಯಲ್ಲಿ ಕಲಿತ ಒಟ್ಟು 17 ಯುವಕರು ʻಅಗ್ನಿವೀರ’ರಾಗಿ ಆಯ್ಕೆಯಾಗಿದ್ದಾರೆ.
ಒಂದೇ ಶಾಲೆಯಲ್ಲಿ ಕಲಿತು ಒಟ್ಟಿಗೇ ಭಾರತೀಯ ಸೇನೆಗೆ ಸೇರಿದ ಈ ಯುವಕರು ಉಳಿದ ಮಕ್ಕಳಿಗೂ ಪ್ರೇರಣೆಯಾಗಲಿ ಎಂದು ಎಸ್‌ಜಿವಿ ಹೈಸ್ಕೂಲ್ ಮತ್ತು ಕಾಲೇಜು ಶಿಕ್ಷಕರು ಆ ಯುವಕರನ್ನು ಶಾಲೆಗೆ ಕರೆಯಿಸಿ ಅವರಿಂದ ಪ್ರೇರಣಾದಾಯಕ ಮಾತುಗಳನ್ನಾಡಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಶಾಲೆಯಲ್ಲೇ ಕಲಿತ ಮಕ್ಕಳು ಇದೀಗ ಭಾರತೀಯ ಸೇನೆಗೆ ಆಯ್ಕೆಯಾಗಿರುವುದಕ್ಕೆ ಶಿಕ್ಷಕರು ಕೂಡ ಹೆಮ್ಮೆಪಡುವುದರ ಜೊತೆಗೆ ಇದೇ ಶಾಲೆಯಿಂದ ಇನ್ನಷ್ಟು ಮಕ್ಕಳು ಭಾರತೀಯ ಸೇನೆಗೆ ಸೇರುವಂತಾಗಲಿ ಎಂದಿದ್ದಾರೆ ಒಟ್ಟಾರೆ ಒಂದೇ ಶಾಲೆಯಲ್ಲಿ ಕಲಿತು ಇದೀಗ ಒಂದೇ ಬಾರಿಗೆ ಭಾರತೀಯ ಸೇನೆಗೆ ಆಯ್ಕೆಯಾದ ಈ ವಿದ್ಯಾರ್ಥಿಗಳು, ಸೇನೆಗೆ ಆಯ್ಕೆಯಾಗಿದ್ದೇವೆ ಎಂದರೆ ಯುದ್ಧಕ್ಕೂ ಹೆದರುವ ಮಾತಿಲ್ಲ. ತಾಯಿ ಭಾರತಿಗೆ ನಾವು ಸೇನೆಯಲ್ಲಿ ಇರುವಷ್ಟು ದಿನ ಸೇವೆ ಸಲ್ಲಿಸಿ ಬರುತ್ತೇವೆ ಎಂದು ಅಭಿಮಾನದ ಮಾತುಗಳನ್ನಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು