12:25 AM Thursday27 - August 2026
ಬ್ರೇಕಿಂಗ್ ನ್ಯೂಸ್
ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ…

ಇತ್ತೀಚಿನ ಸುದ್ದಿ

ಕುಂದಾಪುರದಲ್ಲಿ ಮನೆಗೆ ನುಗ್ಗಿ 11 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಕಳವು: ಇಬ್ಬರು ಆರೋಪಿಗಳ ಬಂಧನ

06/06/2026, 14:42

ಕುಂದಾಪುರ(reporterkarnataka.com): ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಕುಂಜೆ ಗ್ರಾಮದ ನೇರಳಕಟ್ಟೆಯಲ್ಲಿರುವ ನಿರಂಜನ್ ಭಟ್ ಅವರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಸುಮಾರು ₹11 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೇ 23ರಂದು ಬೆಳಿಗ್ಗೆ 11.47ರಿಂದ ರಾತ್ರಿ 9.10 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳರು ಮನೆಯ ಬಾಗಿಲಿನ ಬೀಗ ಒಡೆದು ಒಳನುಗ್ಗಿ ಚಿನ್ನ, ಬೆಳ್ಳಿ ಹಾಗೂ ನಗದು ಕಳವು ಮಾಡಿದ್ದರು. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಂತ್ರಾಡಿ ಬಾಯರಬೆಟ್ಟು ನಿವಾಸಿ ವಿಜಯ ಶೆಟ್ಟಿ (32) ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ ಸುಮಾರು ₹9 ಲಕ್ಷ ಮೌಲ್ಯದ 66.22 ಗ್ರಾಂ ಚಿನ್ನ ಹಾಗೂ 175.4 ಗ್ರಾಂ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಇದೇ ಪ್ರಕರಣದಲ್ಲಿ ಕಾರ್ಕಳ ತಾಲೂಕಿನ ಇಂದಾರು ಗ್ರಾಮದ ಅರ್ಜುನ ಪೂಜಾರಿ (29) ಎಂಬಾತನನ್ನು ಬಂಧಿಸಿ, ಆತನಿಂದ ಸುಮಾರು ₹2 ಲಕ್ಷ ಮೌಲ್ಯದ 18.2 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಅಶ್ರಫ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು