7:42 AM Sunday18 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಕೊಡಗಿನಲ್ಲಿ ಗಿರಿಜನರ ‘ಕುಂಡೆ ಹಬ್ಬ’ ಸಂಭ್ರಮ

29/05/2026, 19:44

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ದಕ್ಷಿಣ ಕೊಡಗಿನ ಬುಡಕಟ್ಟು ಜನರ ಸಂಭ್ರಮದ ಕುಂಡೆ ಹಬ್ಬ ಬುಧವಾರ ಆರಂಭಗೊಂಡಿದೆ . ಕಾಫಿತೋಟ ಹಾಗೂ ಕಾಡು ಮೇಡುಗಳನ್ನು ಬಿಟ್ಟು ಮೈಗೆ ಸಿಕ್ಕಿದ ಬಣ್ಣ ಹಚ್ಚಿಕೊಂಡು, ವಿಚಿತ್ರ ವೇಷಧರಿಸಿದ ಗಿರಿಜನರು ಕುಣಿದು ಕುಪ್ಪಳಿಸುತ್ತಾ ಹಬ್ಬದ ಆಚರಣೆಗೆ ಮುನ್ನುಡಿ ಬರೆಡಿದ್ದಾರೆ. ದಕ್ಷಿಣ ಕೊಡಗಿನ ಕುಟ್ಟ, ಶ್ರೀಮಂಗಲ, ಹುದಿಕೇರಿ, ನಾಲ್ಕೇರಿ, ಬಿರುನಾಣಿ, ಬಾಳೆಲೆ ಮೊದಲಾದ ಕಡೆಗಳಿಂದ ಗೋಣಿಕೊಪ್ಪಲು, ಪೊನ್ನಂಪೇಟೆ, ತಿತಿಮತಿ ಸೇರಿದಂತೆ ಮೈಸೂರು, ಚಾಮರಾಜನಗರ ಮೊದಲಾದ ಭಾಗಗಳಿಗೆ ಸೇರಿದ ಬುಡಕಟ್ಟು ವೇಷಧಾರಿ ಯುವಕರು ಕೈಗೆ ಸಿಕ್ಕಿದ ವಸ್ತುಗಳನ್ನೇ ತಾಳಮೇಳ ಮಾಡಿಕೊಂಡು ಕುಣಿಯತ್ತಾ ಸಂಭ್ರಮಿಸಿದರು.
ಎದುರಿಗೆ ಬಂದ ಮಹಿಳೆ ಅಥವಾ ಪುರುಷರಿಗೆ ‘ಏ ಕುಂಡೆ’ ಎಂದೇ ಬೈಯುತ್ತಾ ಅಡ್ಡಗಟ್ಟಿ ಹಣ ಬೇಡಿದರು. ಬುಡಕಟ್ಟು ಜನರ ಈ ಸಂಭ್ರಮವನ್ನು ನೋಡುತ್ತಾ ಅವರು ಬೈದರು ಕೂಡ ಬೇಸರ ಮಾಡಿಕೊಳ್ಳದೆ ತಮಗೆ ಇಷ್ಟಬಂದಷ್ಟು ಹಣವನ್ನು ಕೊಟ್ಟು ಮುಂದಕ್ಕೆ ತೆರಳುತ್ತಿದ್ದರು.
ಕುಂಡೆ ಹಬ್ಬದ ವೇಷಧಾರಿಗಳು ಹಣ ಕೊಡದವರನ್ನೂ ಬೈಯುತ್ತಿದ್ದರು. ಕೊಟ್ಟವರನ್ನೂ ಬೈಯುತ್ತಿದ್ದರು. ಇದು ಒಂದು ರೀತಿಯಲ್ಲಿ ನೋಡುಗರಿಗೆ ಮಜ ನೀಡುತ್ತಿತ್ತು. ಹೊಸಬರು ಇವರ ಬೈಗುಳ ಕೇಳಿ ಅಚ್ಚರಿಪಟ್ಟು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದರು.
ಕುಂಡೆ ಹಬ್ಬ ಆಚರಿಸುವ ಗಿರಿಜನ ವೇಷಧಾರಿಗಳು ಧರಿಸುವ ವೇಷಗಳನ್ನು ಇತರರು ಧರಿಸಿಕೊಂಡು ಅಶ್ಲೀಲವಾಗಿ ಬೈದರೆ ಅಂಥವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂಬ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ಹೆಚ್ಚು ಜನ ಈ ಬಾರಿ ಪಟ್ಟಣಗಳಲ್ಲಿ ಕಂಡು ಬರಲಿಲ್ಲ. ಗಿರಿಜನರು ತೀರ ಅಶ್ಲೀಲವಾಗಿ ಬೈಯ್ಯುವುದು ಕಂಡ ಬರಲಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು