ಇತ್ತೀಚಿನ ಸುದ್ದಿ
Bangalore | ಲಾರಿಗೆ ಕಾರು ಡಿಕ್ಕಿ: ಕುಣಿಗಲ್ ಬಳಿ ದಾರಿಯಲ್ಲೇ ನಾಲ್ವರು ದಾರುಣ ಸಾವು
09/05/2026, 22:21
ಬೆಂಗಳೂರು(reporterkarnataka.com): ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆಲ್ಟೋ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ನಡೆದಿದೆ.
ಗೊಬ್ಬರ ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಆಲ್ಟೋ ಕಾರು ಛಿದ್ರ ಛಿದ್ರವಾಗಿದ್ದು, ಕಾರು ಚಾಲಕ ಸೇರಿದಂತೆ ಮಂಡ್ಯ ಮೂಲದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಲಾರಿಗೆ ಕಾರು ಡಿಕ್ಕಿ
ಅಪಘಾತದ ರಭಸಕ್ಕೆ ಆಲ್ಟೋ ಕಾರಲಿದ್ದ ನಾಲ್ವರು ಸಾವು
ಮೃತರು ಮಂಡ್ಯದ ಸ್ವರ್ಣಸಂದ್ರ ನಿವಾಸಿಗಳೆಂಬ ಮಾಹಿತಿ ಲಭ್ಯವಾಗಿದೆ.
*ವಿವಾಹ ವಾರ್ಷಿಕೋತ್ಸವದ ದಿನದಂದೇ ದುರ್ಮರಣ:*
ಮೃತರನ್ನು ಮಂಡ್ಯದ ಸ್ವರ್ಣಸಂದ್ರ ನಿವಾಸಿಯಾದ ಕುಮಾರ ನರಸಿಂಹಸ್ವಾಮಿ, ಅವರ ಪತ್ನಿ ಗಾಯತ್ರಿ (60), ಸಹೋದರಿ ಗಾಯತ್ರಿ (55) ಹಾಗೂ ಮತ್ತೋರ್ವ ಪುರುಷ ಎಂದು ಗುರುತಿಸಲಾಗಿದೆ. ನಿನ್ನೆ ಪತ್ನಿ ಹಾಗೂ ತಂಗಿ ಜೊತೆ ತುಮಕೂರಿಗೆ ಬಂದಿದ್ದ ಕುಮಾರ ನರಸಿಂಹಸ್ವಾಮಿ ಇಂದು ಮದುವೆ ವಾರ್ಷಿಕೊತ್ಸವದ ಹಿನ್ನೆಲೆ ದೇವರಾಯನದುರ್ಗಕ್ಕೆ ತೆರಳಿ ದೇವರ ದರ್ಶನ ಪಡೆದು ವಾಪಸ್ ಊರಿಗೆ ಹಿಂದಿರುಗುವಾಗ ಅವಘಡ ನಡೆದಿದೆ.
*ಮತ್ತೋರ್ವನ ಗುರುತು ಪತ್ತೆ:*
ಕಾರಲ್ಲಿದ್ದ ನಾಲ್ವರ ಪೈಕಿ ಮತ್ತೊಬ್ಬ ಪುರುಷ ಯಾರೆಂಬ ಬಗ್ಗೆ ಆರಂಭದಲ್ಲಿ ನಿಖರ ಮಾಹಿತಿ ಸಿಕ್ಕಿರಲಿಲ್ಲ. ಹೀಗಾಗಿ ಆತನ ಬಗ್ಗೆ ಪೊಲೀಸರು ವಿಚಾರಣೆ ಮುಂದುವರಿಸಿದ್ದರು. ಆದರೆ ಮೃತ ಮತ್ತೋರ್ವರ ಅವರ ಕಾರು ಚಾಲಕ ಎಂಬ ವಿಚಾರವೀಗ ಗೊತ್ತಾಗಿದೆ. ಮೃತದೇಹಗಳನ್ನು ಕುಣಿಗಲ್ನ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನಾ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












