8:24 AM Wednesday5 - August 2026
ಬ್ರೇಕಿಂಗ್ ನ್ಯೂಸ್
ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ ಕಾವೇರಿ ನೀರು ಹಂಚಿಕೆ ವಿವಾದ | ಕಾನೂನು ತಜ್ಞರು, ಪ್ರತಿಪಕ್ಷಗಳ ಸಲಹೆ ಬಳಿಕ…

ಇತ್ತೀಚಿನ ಸುದ್ದಿ

ಕೇರಳ ಶಾಸಕಿಯ ಬಲವಂತವಾಗಿ ಅಪ್ಪಿಕೊಳ್ಳಲು ಕಾಂಗ್ರೆಸ್‌ ಹಿರಿಯ ನಾಯಕ ಯತ್ನ: ದೂಡಿ ಮುಂದೆ ಹೋದ ನಾಯಕಿ; ವಿಡಿಯೋ ವೈರಲ್

07/05/2026, 21:41

ತಿರುವನಂತಪುರಂ(reporterkarnataka.com): ಕೇರಳ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಚೆರಿಯನ್ ಫಿಲಿಪ್ ಹಾಗೂ ಕೊಲ್ಲಂ ಶಾಸಕಿ ಬಿಂದು ಕೃಷ್ಣ ಅವರ ನಡುವಿನ ಶುಭಾಶಯ ವಿನಿಮಯ ಸಂದರ್ಭದ ವಿಡಿಯೋವೊಂದು ವೈರಲ್ ಆಗಿದ್ದು, ಆನ್‌ಲೈನ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ರಾಜಕೀಯ ಪಕ್ಷಗಳ ಸಭೆಗಳು ಎಂದರೇನೇ ಅಲ್ಲಿ ನಾಯಕರ ಧಾವಂತದ ಆಗಮನ, ಮುಗಿದ ಕೈಗಳು, ಕ್ಯಾಮೆರಾ ಫ್ಲ್ಯಾಷ್‌ಗಳು ಹಾಗೂ ಘೋಷಣೆಗಳು ಸಾಮಾನ್ಯ ಆದರೆ, ತಿರುವನಂತಪುರಂನ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಒಂದು ಕ್ಷಣದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಹಾಗೂ ವಿವಾದಕ್ಕೆ ಗ್ರಾಸವಾಗಿದೆ.

*ವಿಡಿಯೋದಲ್ಲಿ ಏನಿದೆ?:*
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳ ಪ್ರಕಾರ, ಶಾಸಕಾಂಗ ಪಕ್ಷದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಶಾಸಕಿ ಬಿಂದು ಕೃಷ್ಣ ಅವರು ಕೆಪಿಸಿಸಿ ಕಚೇರಿಗೆ ಆಗಮಿಸಿದ್ದರು. ಅವರು ಕೈ ಮುಗಿದು ನಾಯಕರಿಗೆ ನಮಸ್ಕರಿಸುತ್ತಾ ಒಳಬರುತ್ತಿದ್ದಂತೆ, ಅಲ್ಲೇ ಇದ್ದ ಹಿರಿಯ ನಾಯಕ ಚೆರಿಯನ್ ಫಿಲಿಪ್ ಅವರು ಶಾಸಕಿಯನ್ನು ಅಪ್ಪಿಕೊಂಡು ಶುಭಾಶಯ ತಿಳಿಸಿಲು ಮುಂದಾಗಿದ್ದಾರೆ. ಇದರಿಂದ ತಕ್ಷಣವೇ ವಿಚಲಿತರಾದ ಶಾಸಕಿ ಬಿಂದು ಕೃಷ್ಣ, ಅವರನ್ನು ಹಿಂದಕ್ಕೆ ದೂಡಿ, ಅಲ್ಲಿಂದ ಮುಂದಕ್ಕೆ ನಡೆಯಲು ಯತ್ನಿಸಿದ್ದಾರೆ.

ಅದಾದ ಬಳಿಕವೂ ಚೆರಿಯನ್ ಫಿಲಿಪ್ ಅವರು ಮತ್ತೆ ಶಾಸಕಿಯ ಬಳಿ ಬಂದು ನಿಂತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ, ಬಿಂದು ಕೃಷ್ಣ ಅವರು ಕೈ ಮುಗಿದುಕೊಂಡೇ ಅವರಿಂದ ಸ್ಪಷ್ಟವಾದ ಅಂತರ ಕಾಯ್ದುಕೊಂಡು ಮುಂದಕ್ಕೆ ಸಾಗಿದ್ದಾರೆ. ಪಕ್ಷದ ಇತರ ನಾಯಕರು, ಪತ್ರಕರ್ತರು ಮತ್ತು ಕ್ಯಾಮೆರಾಗಳ ಮುಂದೆಯೇ ಈ ಘಟನೆ ನಡೆದಿದ್ದು, ತೀವ್ರ ಮುಜುಗರಕ್ಕೆ ಕಾರಣವಾಗಿದೆ.

*ನೆಟ್ಟಿಗರ ಆಕ್ರೋಶ:*
ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡಲಾರಂಭಿಸಿದ ಬೆನ್ನಲ್ಲೇ, ನೆಟ್ಟಿಗರಿಂದ ಟೀಕೆಗಳ ಸುರಿಮಳೆಯೇ ಹರಿದುಬರುತ್ತಿದೆ. ಶಾಸಕಿಗೆ ಆ ನಡವಳಿಕೆಯಿಂದ ಮುಜುಗರವಾಗಿರುವುದು ಅವರ ಹಾವಭಾವದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು ಮತ್ತು ಅವರು ಅಂತಹ ಸ್ಪರ್ಶವನ್ನು ಬಯಸಿರಲಿಲ್ಲ ಎಂಬುದನ್ನು ನೆಟ್ಟಿಗರು ಬೊಟ್ಟು ಮಾಡಿದ್ದಾರೆ.



ಸಾರ್ವಜನಿಕ ಮತ್ತು ವೃತ್ತಿಪರ ಸ್ಥಳಗಳಲ್ಲಿ ಮಹಿಳೆಯರ ‘ವೈಯಕ್ತಿಕ ಎಲ್ಲೆಗಳನ್ನು’ ಗೌರವಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ಸಭೆಗಳಲ್ಲಿ ಪಾಲ್ಗೊಳ್ಳಲು ಬರುವ ಮಹಿಳಾ ನಾಯಕಿಯರನ್ನು ರಾಜಕೀಯ ಕಚೇರಿಗಳಲ್ಲಿ ಈ ರೀತಿ ಮುಜುಗರಕ್ಕೀಡು ಮಾಡುವುದು ಸರಿಯಲ್ಲ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿವಾದವು ರಾಜಕೀಯ ವಲಯಗಳಲ್ಲಿ ಸಾರ್ವಜನಿಕ ನಡವಳಿಕೆ ಮತ್ತು ಮೂಲಭೂತ ಶಿಷ್ಟಾಚಾರದ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆ ಹುಟ್ಟುಹಾಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು