ಇತ್ತೀಚಿನ ಸುದ್ದಿ
ಕರ್ನೂಲ್ನಲ್ಲಿ ಭೀಕರ ರಸ್ತೆ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ಸುಳ್ಯದ ಯುವತಿ ದಾರುಣ ಸಾವು
13/04/2026, 18:32
ಹೈದರಾಬಾದ್(reporterkarnataka.com):ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ಶಿವಾನಿ ಶಿರಗುಪ್ಪ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದ ಭೀಕರ ರಸ್ತೆ ಅಘಾತದಲ್ಲಿ ಸುಳ್ಯದ ನಿವಾಸಿ ಯುವತಿಯೊಬ್ಬರು ಮೃತಪಟ್ಟಿದ್ದಾರೆ.
ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಕಂದಡ್ಕ ನಿವಾಸಿ ನಿವಾಸಿ ಕ್ಷಿಪ್ರ ಮೃತಪಟ್ಟ ದುರ್ದೈವಿ.
ಶಶಿಕಲಾ ಅವರ ಏಕಮಾತ್ರ ಪುತ್ರಿಯಾದ ಕ್ಷಿಪ್ರ ಸುಳ್ಯದ ಕೆವಿಜಿ ಕಾಲೇಜಿನಲ್ಲಿ ಡಿಪ್ಲೊಮಾ, ನಿಟ್ಟೆಯಲ್ಲಿ ಎಂ.ಟೆಕ್ ಮುಗಿಸಿ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ತನ್ನ ತಾಯಿಯ ಜತೆಗೆ ನೆಲೆಸಿದ್ದರು.
ಸಹದ್ಯೋಗಿಗಳೊಂದಿಗೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಕಾರು ಅಪಘಾವಾಗಿ ಮೃತಪಟ್ಟಿದ್ದು, ಕಾರಿನಲ್ಲಿದ್ದ ಇತರರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.












