8:18 PM Saturday30 - May 2026
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಇದ್ದೊಬ್ಬ ಒಬಿಸಿ ಸಿಎಂ ಕೆಳಗಿಳಿಸಿ ಅಪಮಾನ: ಮಂಗಳೂರಿನಲ್ಲಿ ಕೇಂದ್ರ… Kodagu | ಕುಶಾಲನಗರ: 15 ದಿನದೊಳಗೆ ದುಷ್ಕರ್ಮಿಗಳ ಗುಂಡೇಟಿಗೆ 2 ಕಾಡು ಕೋಣಗಳು… ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: ಭಾರತಕ್ಕೆ ಸಿಹಿಸುದ್ದಿ ಕೊಟ್ಟ ಇರಾನ್; 10 ಇಂಡಿಯನ್ ನಾವಿಕರ… Kerala | ಮಾಜಿ ಸಿಎಂ ಪಿಣರಾಯಿ ಮನೆ ಎದುರು ಇ.ಡಿ ವಾಹನಗಳ ಮೇಲೆ… Bangalore | ಐಪಿಎಲ್ ಬೆಟ್ಟಿಂಗ್ ವಿರುದ್ಧ ಸಿಸಿಬಿ ಭರ್ಜರಿ ಕಾರ್ಯಾಚರಣೆ: 23 ಜನ… ಕಾಂಗ್ರೆಸ್‌ ಹೈಡ್ರಾಮಾಕ್ಕೆ ವಿಜಯೇಂದ್ರ ವ್ಯಂಗ್ಯ: ಸಿದ್ದರಾಮಯ್ಯ ಬಿಟ್ಟು ಯಾರೇ ಸಿಎಂ ಆದ್ರೂ ಅದು… ಬೆಂಗಳೂರಿಗೆ ಮಹಾಮಾರಿ ಎಬೋಲಾ ಎಂಟ್ರಿ?: ಉಗಾಂಡದ ಮಹಿಳೆ ಐಸೋಲೇಷನ್‌ನಲ್ಲಿ..! ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ 30ರಂದು ಮಂಗಳೂರಿಗೆ: ಧರ್ಮಸ್ಥಳದಲ್ಲಿ ವಾಸ್ತವ್ಯ ಗಂಡನ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದ ಗರ್ಭಿಣಿ ಪತ್ನಿ! ಕಿಡ್ನಿ, ಹಾರ್ಟ್ ಮತ್ತು… ಕಾಫಿ ತೋಟದಲ್ಲಿ ಕಾಡಾನೆಗಳ ‘ರೌದ್ರ ನರ್ತನ: ಅರಣ್ಯ ಸಿಬ್ಬಂದಿಯನ್ನೇ ಬೆನ್ನಟ್ಟಿದ ಗಜಪಡೆ

ಇತ್ತೀಚಿನ ಸುದ್ದಿ

ಸೆಲ್ಫಿ ಕ್ರೇಜ್‌ಗೆ 3 ಬಾಲಕಿಯರು ಬಲಿ: ಜಲಪಾತದಲ್ಲಿ ಫೋಟೋ ತೆಗೆಯುವಾಗ ದುರಂತ

10/04/2026, 22:13

ಹೈದರಾಬಾದ್ (reporterkarnataka.com):ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯಲ್ಲಿ ನೀರಿನಲ್ಲಿ ಈಜಾಡುತ್ತಿದ್ದಾಗಲೇ ಮೂವರು ಹದಿಹರೆಯದ ಬಾಲಕಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆಘಾತಕಾರಿ ವಿಚಾರವೆಂದರೆ ಇವರ ಕೊನೆಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ನೀರಿನಲ್ಲಿ ಫೋಟೋ ತೆಗೆಯುವ ವೇಳೆಯೇ ಈ ದುರಂತ ಸಂಭವಿಸಿದೆ.

*ಬಾಲಕಿಯರ ಕೊನೆಕ್ಷಣ ಕ್ಯಾಮರಾದಲ್ಲಿ ಸೆರೆ*
ಇಲ್ಲಿನ ಹುಕುಂಪೇಟ ಮಂಡಲದ ಬುರ್ಜಾ ಪಂಚಾಯತ್‌ ಬಳಿಯ ಮುಲ್ಲುನ್ಗುಮ್ಮಿ ಎಂಬ ಜಲಪಾತದ ಬಳಿ ಈ ದುರಂತ ಸಂಭವಿಸಿದೆ. ರಜಾ ದಿನವಾಗಿದ್ದರಿಂದ ಜಂಬವಲಸಾ ಗ್ರಾಮದ ಐವರು ಹುಡುಗಿಯರು ಈ ಜಲಪಾತವನ್ನು ನೋಡುವುದಕ್ಕೆ ಆಗಮಿಸಿದ್ದರು. ಈ ಸಮಯದಲ್ಲಿ ನೀರಿನಲ್ಲಿ ಈಜಾಡುತ್ತಾ ಎಂಜಾಯ್ ಮಾಡುತ್ತಿದ್ದಾಗ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದು, ಇದೇ ವೇಳೆ ಈ ದುರಂತ ಸಂಭವಿಸಿದೆ.
ಪೊಲೀಸರ ಪ್ರಕಾರ, ಈ ಹುಡುಗಿಯರು ಸೇತುವೆಯ ಬಳಿಯೇ ಫೋಟೋ ಹಾಗೂ ಸೆಲ್ಫಿ ವೀಡಿಯೋ ಮಾಡಿದ್ದಾರೆ. ಬಳಿಕ ಐವರಲ್ಲಿ ಮೂವರು ಹುಡುಗಿಯರು ಜಲಪಾತದ ಮಧ್ಯೆ ಇರುವ ದೊಡ್ಡ ಬಂಡೆಯೊಂದನ್ನು ಏರಿದ್ದಾರೆ. ಇದೇ ವೇಳೆ ಅವರು ಅಲ್ಲಿಂದ ಆಯತಪ್ಪಿ ನೀರಿಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಹೋಗಿದ್ದಾರೆ.
ಅಲ್ಲಿದ್ದ ಸ್ಥಳೀಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ನೀರಿನ ಹರಿವಿನ ರಭಸಕ್ಕೆ ಸಿಲುಕಿ ಬಾಲಕಿಯರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅವರ ಮೃತದೇಹಗಳನ್ನು ನಂತರ ನೀರಿನಿಂದ ಮೇಲೆತ್ತಲಾಗಿದೆ. ಹೀಗೆ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟ ಹರೆಯದ ಬಾಲಕಿಯರನ್ನು 17 ವರ್ಷದ ತ್ರಿಶಾ 16 ವರ್ಷದ ರತ್ನಕುಮಾರಿ, ಹಾಗೂ 16 ವರ್ಷದ ಪವಿತ್ರಾ ಎಂದು ಗುರುತಿಸಲಾಗಿದೆ. ಉಳಿದಿಬ್ಬರು ಬಾಲಕಿಯರು ಸುರಕ್ಷಿತವಾಗಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಈ ಘಟನೆ ಈಗ ಸ್ಥಳೀಯರಲ್ಲಿ ತೀವ್ರ ಕಳವಳ ಮೂಡಿಸಿದೆ. ಘಟನೆ ನಡೆದ ಸ್ಥಳವು ಅಲ್ಲುರಿ ಜಿಲ್ಲೆಯಲ್ಲಿ ಬರುವ ಅತೀ ಸುಂದರವಾದ ಜಲಪಾತವಾಗಿದ್ದು, ಸುಂದರವಾದ ನೈಸರ್ಗಿಕ ದೃಶ್ಯಗಳಿಂದ ಗಮನ ಸೆಳೆಯುತ್ತಿದೆ. ಇಲ್ಲಿ ಈ ಹಿಂದೆಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದಂತಹ ಹಲವು ಘಟನೆಗಳು ನಡೆದಿದ್ದವು.

ಇತ್ತೀಚಿನ ಸುದ್ದಿ

ಜಾಹೀರಾತು