2:33 PM Monday26 - October 2026
ಬ್ರೇಕಿಂಗ್ ನ್ಯೂಸ್
Chikkamagaluru | ಆಟೋ‌- ಬೈಕ್ ನಡುವೆ ಮುಖಾಮುಖಿ ‌ಡಿಕ್ಕಿ: ಬೈಕ್ ಸವಾರರ ಸ್ಥಳದಲ್ಲೇ… ಆಯುಧ ಪೂಜೆ–ವಿಜಯ ದಶಮಿ: ನಾಡಿನ ಒಳಿತಿಗಾಗಿ ರಾಜ್ಯಪಾಲ ಡಾ. ಸುಧಾ ಯಾದವ್ ಪ್ರಾರ್ಥನೆ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣ | ವಿಜಯದಶಮಿಯೊಳಗೆ ಆರೋಪಿಗಳ ಬಂಧಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ:… ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್…

ಇತ್ತೀಚಿನ ಸುದ್ದಿ

ಮುಸ್ಲಿಂ ನಾಯಕರಿಂದಲೇ ಆಪರೇಷನ್ ಪೈಲ್ವಾನ್ ಯಶಸ್ವಿ: ಯಾವುದೇ ಕಾರಣಕ್ಕೂ ಹಿಂದೆ ಸರಿಯೊಲ್ಲ ಎಂದಿದ್ದ ಸಾದಿಕ್, ಈಗ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ!

28/03/2026, 18:26

ದಾವಣಗೆರೆ(reporterkarnataka.com):;ರಾಜ್ಯ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಪ್ರಮುಖ ನಾಯಕರು ಅಸಹಾಯಕರಾಗಿ ಕೈ ಎತ್ತಿದಾಗ ವಿಧಾನ ಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್ ಹಾಗೂ ಶಾಸಕ ರಿಜ್ವಾನ್‌ ಅರ್ಷದ್ ಅಹರ್ನಿಶಿ ಕಸರತ್ತು ನಡೆಸಿ ದಾವಣಗೆರೆ ಕಾಂಗ್ರೆಸ್‌ನ ‘ಆಪರೇಷನ್‌ ಬಂಡಾಯ ಶಮನ’ ಯಶಸ್ವಿಯಾಗಿ ಮುಗಿಸಿದ್ದಾರೆ.
ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದು ಹಠ ಹಿಡಿದು ನಾಮಪತ್ರವನ್ನೂ ಸಲ್ಲಿಸಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಬಂಡಾಯ ಅಭ್ಯರ್ಥಿ ಸಾದಿಕ್‌ ಪೈಲ್ವಾನ್‌ ಅವರನ್ನು ಮನವೊಲಿಸಿದ ಇಡೀ ಪ್ರಕ್ರಿಯೆ ಇದೀಗ ತೀವ್ರ ಕುತೂಹಲ ಮೂಡಿದೆ.
ಅಲ್ಪಸಂಖ್ಯಾತ ಮತಗಳು 70,000ಕ್ಕೂ ಹೆಚ್ಚಿರುವ ಕ್ಷೇತ್ರದಲ್ಲಿ ಸಾದಿಕ್‌ ಪೈಲ್ವಾನ್‌ ಸ್ಪರ್ಧೆ ಮಾಡಿದರೆ ಮತ ವಿಭಜನೆ ಉಂಟಾಗುವ ಭೀತಿ ಕಾಂಗ್ರೆಸ್‌ಗೆ ಕಾಡುತ್ತಿತ್ತು. ಹೀಗಾಗಿ ಸಾದಿಕ್‌ ಮನವೊಲಿಸುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅಲ್ಪಸಂಖ್ಯಾತ ನಾಯಕರಿಗೆ ಸೂಚನೆ ನೀಡಿದ್ದರು.
ಆದರೆ, ಧಾರ್ಮಿಕ ಗುರುಗಳ ಆದೇಶ ಇದ್ದ ಕಾರಣ ಜಮೀರ್‌ ಅಹ್ಮದ್‌ ಖಾನ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌ ಅವರು ಬಂಡಾಯ ಶಮನಕ್ಕೆ ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಜಮೀರ್‌ ಅಹಮದ್ ಅವರು ಕೇರಳ ಚುನಾವಣಾ ಹೊಣೆಗಾರಿಕೆ ಕಾರಣ ನೀಡಿ ದಾವಣಗೆರೆಗೆ ತೆರಳಲಿಲ್ಲ. ಇನ್ನು ಗುರುವಾರ ದಾವಣಗೆರೆಯತ್ತ ಹೊರಟಿದ್ದ ಸಲೀಂ ಅಹಮದ್‌, ರಿಜ್ವಾನ್‌ ಅರ್ಷದ್ ಜತೆಗೆ ಹೆಲಿಪ್ಯಾಡ್‌ವರೆಗೂ ತೆರಳಿದ್ದ ನಸೀರ್‌ ಅಹಮದ್ ಅಂತಿಮವಾಗಿ ಹೆಲಿಕಾಪ್ಟರ್‌ ಹತ್ತಲಿಲ್ಲ ಎನ್ನಲಾಗಿದೆ.
ಕೊನೆಗೆ ಸಲೀಂ ಅಹಮದ್‌ ಹಾಗೂ ರಿಜ್ವಾನ್‌ ಅರ್ಷದ್‌ ಅವರು ಹೆಲಿಕಾಪ್ಟರ್‌ನಲ್ಲಿ ಚಿತ್ರದುರ್ಗದವರೆಗೆ ತೆರಳಿ ಅಲ್ಲಿಂದ ರಸ್ತೆ ಮೂಲಕ ಸಾದಿಕ್‌ ಪೈಲ್ವಾನ್‌ ಮನೆಗೆ ತೆರಳಿದ್ದಾರೆ. ಆ ವೇಳೆಗೆ ಪೈಲ್ವಾನ್‌ ನಾಮಪತ್ರ ಸಲ್ಲಿಕೆ ಮಾಡಿ ಮೊಬೈಲ್ ಸ್ವಿಚ್‌ ಆಫ್‌ ಮಾಡಿಕೊಂಡಿದ್ದರು.
ಆದರೂ ಪಟ್ಟು ಬಿಡದ ಇಬ್ಬರೂ ಅಲ್ಪಸಂಖ್ಯಾತ ನಾಯಕರು ರಾತ್ರಿಯಿಡೀ ಸಾದಿಕ್‌ ಅವರ ಕುಟುಂಬ ಸದಸ್ಯರ ಮನವೊಲಿಸಿದ್ದಾರೆ. ಬಳಿಕ ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ಸಾದಿಕ್‌ ಅವರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದರು.
ತಮ್ಮ ಬಳಿ ಬಂದ ಸಾದಿಕ್ ಪೈಲ್ವಾನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಣದಲ್ಲಿದ್ದರೂ ತಟಸ್ಥರಾಗಿ ಉಳಿಯುವಂತೆ ಸೂಚಿಸಿದರು. ಈ ಮಾತಿಗೆ ಸಾದಿಕ್ ಪೈಲ್ವಾನ್ ಒಪ್ಪಿಗೆ ಸೂಚಿಸಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಗೆ ಬೆಂಬಲ ಸೂಚಿಸಿದರು.
ಇನ್ನು ಆಪರೇಷನ್‌ನಿಂದ ಹೊರಗುಳಿದು ಜವಾಬ್ದಾರಿಯಿಂದ ನುಣುಚಿಕೊಂಡ ಜಮೀರ್ ಅಹಮದ್‌ ಖಾನ್‌ ಅವರ ಬಗ್ಗೆ ಸುರ್ಜೇವಾಲ ಅವರು ಗರಂ ಆಗಿರುವುದಾಗಿ ತಿಳಿದುಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು