ಇತ್ತೀಚಿನ ಸುದ್ದಿ
ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಪತ್ರ: 50 ಸಾವಿರ ಸಿಲಿಂಡರ್ ಬೇಡಿಕೆ ಬಗ್ಗೆ ಪ್ರಸ್ತಾಪ
20/03/2026, 23:05
ಬೆಂಗಳೂರು(reporterkarnataka.com): ದೇಶದಲ್ಲಿ ಸಿಲಿಂಡರ್ ಅಭಾವದ ಸರಣಿ ಸಮಸ್ಯೆ ಮುಂದುವರೆದಿದೆ. ಇತ್ತ ಕರ್ನಾಟಕದಲ್ಲೂ ಎಲ್ಪಿಜಿಗಾಗಿ ಹೋಟೆಲ್ ಮಾಲೀಕರು ನಿತ್ಯ ಪರದಾಡುತ್ತಿದ್ದಾರೆ. ಒಂದ್ಕಡೆ ಗೃಹಬಳಕೆ ಸಿಲಿಂಡರ್ ಪಡೆಯಲು ಜನರು ಮುಗಿಬಿದ್ದರೆ, ಮತ್ತೊಂದ್ಕಡೆ ವಾಣಿಜ್ಯ ಸಿಲಿಂಡರ್ ಇಲ್ಲದೆ ಹಲವು ಉದ್ಯಮಗಳು ಬಂದ್ ಆಗುತ್ತಿವೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.
*ಕೇಂದ್ರ ಸಚಿವ ಹರ್ದೀಪ್ ಸಿಂಗ್ಗೆ ಸಿಎಂ ಪತ್ರ*
ಸಿಎಂ ಸಿದ್ದರಾಮಯ್ಯ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನ ಬರೆದಿದ್ದರು. ಈಗ ಸಿಲಿಂಡರ್ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೊಂದು ಪತ್ರ ಬರೆದಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ಗೆ ಬರೆದ ಪತ್ರದಲ್ಲಿ ರಾಜ್ಯದ ಸಿಲಿಂಡರ್ಗಳ ಅಭಾವದ ಬಗ್ಗೆ ಉಲ್ಲೇಖಿಸಿದ್ದಾರೆ. 50 ಸಾವಿರ ಸಿಲಿಂಡರ್ಗಳು ಬೇಕು. ಭಾರತಕ್ಕೆ ಬಂದಿರುವ ತೈಲ ಹಡಗುಗಳ ತೈಲವನ್ನ ಸಮರ್ಪಕವಾಗಿ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದಾರೆ.












