8:18 PM Tuesday17 - March 2026
ಬ್ರೇಕಿಂಗ್ ನ್ಯೂಸ್
Kodagu | ಅಕಾಲಿಕ ಮಳೆ: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿ ಸ್ಪೀಕರ್‌ ಸಭಾತ್ಯಾಗ ಪ್ರಕರಣ: ಖಾದರ್ ಸಿಟ್ಟಿಗೆ 8 ಹಿರಿಯ ಐಎಎಸ್‌ ಅಧಿಕಾರಿಗಳಿಗೆ ಶೋಕಾಸ್… Mangaluru | ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ ಗೆ 2025 ಕೇಂದ್ರ ಸಾಹಿತ್ಯ… ಉತ್ತರಿಸದ ಸಚಿವರು: ಇದೇ ಮೊದಲ ಬಾರಿಗೆ ಸ್ಪೀಕರ್ ಸಭಾತ್ಯಾಗ; ಮೂವರು ಅಧಿಕಾರಿಗಳಿಗೆ ತಲೆದಂಡ ರಾಜ್ಯ ಉಪ ಚುನಾವಣೆ: ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಏಪ್ರಿಲ್ 9ರಂದು ಮತದಾನ, ಮೇ… ಕಾರಿನ ಮೇಲೆ ಉರುಳಿದ ಕಟ್ಟಿಗೆ ತುಂಬಿದ ಲಾರಿ: ಮಗು ಸಹಿತ ದಂಪತಿ ಪವಾಡಸದೃಶ… ಕಲಬುರಗಿ; ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್… ವಿವಿಧ ಬೇಡಿಕೆ ಆಗ್ರಹಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಫ್ರೀಡಂ… ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ

ಇತ್ತೀಚಿನ ಸುದ್ದಿ

ಕಾಂಗ್ರೆಸ್ ಆಡಳಿತದಲ್ಲಿ ಗ್ಯಾಸ್ ಸಮಸ್ಯೆಯಾಗಿದ್ದರೆ ಬಿಜೆಪಿ ಭಾರತ್ ಬಂದ್ ಮಾಡುತ್ತಿದ್ದರು: ಮಾಜಿ ಸಚಿವ ಕಿಮ್ಮನೆ ರತ್ನಾಕರ್

17/03/2026, 19:53

ಮಾ. 20ಕ್ಕೆ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಗ್ಯಾಸ್ ಸಿಲಿಂಡರ್ ಸಮಸ್ಯೆ ಈ ರೀತಿ ಕಾಂಗ್ರೆಸ್ ಆಡಳಿತದಲ್ಲಿ ಆಗಿದ್ದರೆ ಬಿಜೆಪಿಗರು ಭಾರತ ಬಂದ್ ಗೆ ಕರೆ ನೀಡುತ್ತಿದ್ದರು. ಭಾರತವನ್ನು ಭಾರತಾಂಬೆ ಅಂತ ಕರೆಯುತ್ತೀವಿ. ಇಸ್ರೇಲ್ ನ ತಂದೆ ಎಂದು ಕರೆಯೋಕೆ ಆಗುತ್ತಾ? ಇಸ್ರೇಲ್ ದೇಶವನ್ನು ಫಾದರ್ ಆಫ್ ಲ್ಯಾಂಡ್ ಎಂದು ನಮ್ಮ ಪ್ರಧಾನಿ ಹೇಳುತ್ತಾರೆ, ಇವರಿಗೆ ಏನು ಹೇಳಬೇಕು ಗೊತ್ತಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಮಂಗಳವಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ದೇಶವನ್ನು ಆಡಳಿತ ಮಾಡುತ್ತಿರುವುದು ಮೋದಿಯೋ? ಅಥವಾ ಟ್ರಂಪ್? ಗೊತ್ತಾಗುತ್ತಿಲ್ಲ.. ಮೂರು ತಿಂಗಳಿಗೆ ಆಗುವಷ್ಟು ಸ್ಟಾಕ್ ನಮ್ಮ ಬಳಿ ಆಯಿಲ್ ಇದೆ ಎಂದು ಹೇಳಿದ್ದರು. ಈಗ ಅದಕ್ಕೆ ಹಣವನ್ನು ಜಾಸ್ತಿ ಮಾಡಿದ್ದಾರೆ. ಇವರು ಬಿಸಿನೆಸ್ ಮಾಡ್ತಾ ಇದ್ದಾರಾ? ಇರುವ ಸ್ಟಾಕ್ ಗೆ ಜನರ ಮೇಲೆ ಹೊರೆ ಹಾಕುತ್ತಿರುವುದು ಸರಿಯೇ? ಇನ್ನು ಎಂಟು ದಿನ ಯುದ್ಧ ನಡೆದರೆ ಹಲವರು ಮನೆ ಸೇರಬೇಕಾಗುತ್ತದೆ ಎಂದರು.
ಅರಗ ಜ್ಞಾನೇಂದ್ರ ಅವರು ಅಸೆಂಬ್ಲಿಯಲ್ಲಿ ಹೀರೊ, ಇಲ್ಲಿ ಮರಳು ಹೊಡೆಯುತ್ತಿದ್ದರು ಕೇಳುವುದಿಲ್ಲ. ಆದರೆ ಅಲ್ಲಿ ಜ್ಞಾನೇಂದ್ರ ಮಾತನಾಡುವುದು ನೋಡಿದರೆ ಇವರಷ್ಟು ಪ್ರಾಮಾಣಿಕರು ಯಾರು ಇಲ್ಲ ಎಂದು ತಿಳಿಯಬೇಕು. ಜ್ಞಾನೇಂದ್ರ ಅವರು ಒಳ್ಳೆಯ ವ್ಯಾಪಾರಸ್ಥ.. ಅಡಿಕೆ ವ್ಯಾಪಾರ, ಸೇರಿ ಹಲವು ವ್ಯಾಪಾರ ಮಾಡಿದ್ದಾರೆ. ನಾನು ಅಸೆಂಬ್ಲಿಯಲ್ಲಿ ಮೊದಲ ಬಾರಿ ಹೋದಾಗ ಇವರ ಕಾರು ನೋಡಿ ಒಳ್ಳೆ ಸಂಬಳ ಎಂದು ಕೊಂಡಿದ್ದೆ. ಆದರೆ ಅಲ್ಲಿ ಸಿಕ್ಕಿದ್ದು 21 ಸಾವಿರ ಇವರಿಗೆ ಅಷ್ಟೊಂದು ದುಡ್ಡು ಹೇಗೆ ಬಂತು ಅದನ್ನು ಹೇಳಬೇಕು ಎಂದರು.
ದ್ವೇಷ ಮಾಡಲು ಒಂದು ಮಿತಿ ಇರಬೇಕು.. ಧರ್ಮೇಶ್ ಅವರು ಚುನಾವಣೆ ನಿಲ್ತಾರೆ ಎನ್ನುವ ಸುದ್ದಿ ಬಂತು. ಆಗ ಅವರನ್ನು ಮಟ್ಟ ಹಾಕಬೇಕು ಎಂದು ಅಲ್ಲಿಗೆ ಹೋಗಿ ಪ್ರತಿಭಟನೆ ಮಾಡಿದರು. ಇವರ ಮನೆ ಹತ್ತಿರ ಕೊಲೆ ನಡೆದರು ಏನು ಮಾಡಿಲ್ಲ ಆಗ ಗೃಹಸಚಿವರಾಗಿದ್ದರು. ಇವರಿಗೆ ಚುನಾವಣೆ ಗೆಲ್ಲುವುದು, ಹಣ ಮಾಡುವುದು ಬಿಟ್ಟರೆ ಜನರಿಗಾಗಿ ಕೆಲಸ ಮಾಡಬೇಕು ಎಂಬುದು ಇಲ್ಲ. ಜನರ ದುಡ್ಡಿನಲ್ಲಿ ಬದುಕಿದ ವ್ಯಕ್ತಿ ಎಂದರೆ ಅದು ಜ್ಞಾನೇಂದ್ರ ಮಾತ್ರ. ಆದರೆ ಜನರಿಗೆ ಅವರು ಏನು ಮಾಡಿದ್ದಾರೆ? ತಿಳಿಸಲಿ ಎಂದರು.

ಜ್ಞಾನೇಂದ್ರ ಅವರು ಸುಳ್ಳು ಹೇಳುವುದು ಕಡಿಮೆ ಮಾಡಬೇಕು, ಅವರು ಇರುವ ಮೂರು ಅಡಿಯನ್ನು ಐವತ್ತಾರು ಅಡಿಯಷ್ಟು ಮಾಡಿಕೊಳ್ಳುವುದು ಸರಿಯಲ್ಲ..
ರಾಮೇಶ್ವರ ದೇವರ ರಥ ಮಾಡುವಾಗ ಜ್ಞಾನೇಂದ್ರ ಇರಲಿಲ್ವಾ? ನನಗೆ ಮಾತ್ರ ದೇವರಾ? ರಥ ಮಾಡದಿದ್ದರೆ ಕಾಂಗ್ರೆಸ್ ಮೇಲೆ ಹಾಕಬಹುದು ಎಂದು ಅಂದುಕೊಂಡಿದ್ದರು ಎನಿಸುತ್ತದೆ. ರಾಮೇಶ್ವರ ದೇವಸ್ಥಾನಕ್ಕೆ ಜ್ಞಾನೇಂದ್ರ ಮಾಡಿದ್ದೇನು? ಈಗಾಗಲೇ ಮಾರಿಕಾಂಬಾ ದೇವಸ್ಥಾನ ಬಿಜೆಪಿ ಕಚೇರಿ ಆಗಿದೆ. ಮ್ಯಾಮ್ಕೋಸ್ ಬಿಜೆಪಿ ಕಚೇರಿ ಆಗಿದೆ. ಇದಕ್ಕೆಲ್ಲಾ ಜ್ಞಾನೇಂದ್ರ ಅಧ್ಯಕ್ಷ.. ಈಗ ರಾಮೇಶ್ವರ ದೇವಸ್ಥಾನ ಕೂಡ ಬಿಜೆಪಿ ಕಚೇರಿ ಮಾಡಿಕೊಳ್ಳಬೇಕು ಎಂದು ಕೊಂಡಿದ್ದಾರೆ. ದೇಶಕ್ಕೆ ಮೋದಿ ಹೇಗೆ ಅಪಶಕುನನೋ ಹಾಗೆ ತೀರ್ಥಹಳ್ಳಿಗೆ ಜ್ಞಾನೇಂದ್ರ ಅಪಶಕುನ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರದ ಬಿಜೆಪಿ ಹಾಗೂ ತೀರ್ಥಹಳ್ಳಿ ಬಿಜೆಪಿಯ ಕೆಲವು ಸಮಸ್ಯೆಗಳ ವಿರುದ್ಧವಾಗಿ ಮಾ. 20ಕ್ಕೆ ತೀರ್ಥಹಳ್ಳಿಯಲ್ಲಿ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆಸ್ತೂರು ಮಂಜುನಾಥ್, ಕಂಡಿಲ್ ರಾಘವೇಂದ್ರ ಶೆಟ್ಟಿ,ಆದರ್ಶ ಹುಂಚದಕಟ್ಟೆ, ಅಮರನಾಥ್ ಶೆಟ್ಟಿ, ಪೂರ್ಣೇಶ್ ಕೆಳಕೆರೆ,ಅಶ್ವಲ್ ಗೌಡ,ಗೀತಾ ರಮೇಶ್, ಶಬನಮ್, ಸುಶೀಲ ಶೆಟ್ಟಿ, ಗೀತಾ ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು