5:14 PM Tuesday22 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಖ್ಯಾತ ಕ್ರಿಕೆಟರ್ ಕೆ. ಎಲ್ ರಾಹುಲ್ – ಆತಿಯಾ ಶೆಟ್ಟಿ ಜೋಡಿ ಮಗುವಿನ ಜತೆ ಕುಕ್ಕೆಗೆ ಭೇಟಿ; ಕಡಲ ತೀರದಲ್ಲಿ ವಿಹಾರ

04/03/2026, 20:31

ಮಂಗಳೂರು(reporterkarnataka.com): ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಹಾಗೂ ಪತಿ ಕ್ರಿಕೆಟರ್ ಕೆ.ಎಲ್. ರಾಹುಲ್ ಮುದ್ದು ಮಗುವಿನ ಜೊತೆಗೆ ಮಂಗಳೂರಿಗೆ ಭೇಟಿ ನೀಡಿದ್ದು, ಕುಕ್ಕೆ ಸುಬ್ರಹ್ಮಣ್ಯ ದರ್ಶನ ಪಡೆದು, ಕಡಲ ತೀರದಲ್ಲಿ ಸಮಯ ಕಳೆಯುವ ಮೂಲಕ ಊರಿನ ನಂಟನ್ನು ಮತ್ತಷ್ಟು ಗಟ್ಟಿ ಮಾಡಿದ್ದಾರೆ. ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ಪುತ್ರಿ ಹಾಗೂ ಕ್ರಿಕೆಟರ್ ಕೆ.ಎಲ್ ರಾಹುಲ್ ಪತ್ನಿ ನಟಿ ಆತಿಯಾ ಶೆಟ್ಟಿ ಮುಂಬೈನಲ್ಲಿದ್ದರೂ ಊರಿನ ನಂಟು ಮರೆತಿಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಪತಿ ಜೊತೆ ಊರಿಗೆ ಬಂದಿದ್ದು, ದೇಗುಲ ದರ್ಶನ ಮಾಡಿದ್ದಾರೆ.
ಆತಿಯಾ ಶೆಟ್ಟಿ ಪತಿ ರಾಹುಲ್ ಹಾಗೂ ಮಗುವಿನೊಂದಿಗೆ ಮಂಗಳೂರಿಗೆ ಬಂದಿದ್ದು, ಊರಿನಲ್ಲಿರುವ ತಮ್ಮ ಮನೆಯಲ್ಲಿ, ಸಮುದ್ರ ತೀರದಲ್ಲಿ ಸಮಯ ಕಳೆದಿದ್ದಾರೆ. ಅಷ್ಟೇ ಅಲ್ಲ ಕುಕ್ಕೆ ಸುಬ್ರಹ್ಮಣ್ಯಕ್ಕೂ ಭೇಟಿ ನೀಡಿದ್ದಾರೆ.
ಆತಿಯಾ ಶೆಟ್ಟಿ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಲವಾರು ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಫೋಟೊ ಹಾಗೂ ಅನ್ನ ಪ್ರಸಾದದ ಫೋಟೊವನ್ನು ಸಹ ಹಂಚಿಕೊಂಡಿದ್ದಾರೆ. ಹುಟ್ಟೂರು ಬಿಟ್ಟು ದೂರದ ಮುಂಬೈನಲ್ಲಿ ನೆಲೆಸಿದ್ದರೂ ನಟಿ ಈ ಮಣ್ಣಿನ ನಂಟನ್ನು ಮಾತ್ರ ಮರೆತಿಲ್ಲ.
ಮಂಗಳೂರಿನಲ್ಲಿ ಮಗುವಿನ ಜೊತೆಗೆ ಕಡಲ ತೀರಕ್ಕೆ ತೆರಳಿ ಅಲ್ಲಿ, ಸಮಯ ಕಳೆದಿದ್ದಾರೆ. ಜೊತೆಗೆ ಆತಿಯಾ, ಮರದಿಂದ ಮಾವಿನಕಾಯಿ ತೆಗೆಯುವ, ದೊಡ್ಡದಾದ ಅಂಗಳ, ತುಳಸಿಕಟ್ಟೆ, ಓಡಾಡುವ ಕೋಳಿಗಳ ಫೋಟೊಗಳನ್ನು ಪೋಸ್ಟ್ ಮಾಡುವ ಮೂಲಕ, ಊರು ಅಂದ್ರೆ ಹೀಗೆನೆ ನೆಮ್ಮದಿಯನ್ನು ಕೊಡುತ್ತೆ ಎನ್ನುವಂತೆ Forever connected to this soil ಎಂದು ಬರೆದುಕೊಂಡಿದ್ದಾರೆ.

ಅಂದ ಹಾಗೇ ರಾಹುಲ್ ಮತ್ತು ಆತಿಯಾ ಶೆಟ್ಟಿ ಕಳೆದ ವರ್ಷ ಮಾರ್ಚ್ ತಿಂಗಳ 24ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಜೊತೆಗೆ ಮಗುವಿಗೆ ಇವಾರ ಎಂದು ಹೆಸರು ಕೂಡ ಇಟ್ಟಿದ್ದರು. ಇದೀಗ ಮಗುವಿಗೆ ವರ್ಷ ತುಂಬುವ ಮುನ್ನ ಮಂಗಳೂರಿನಲ್ಲಿ ಟೆಂಪಲ್ ರನ್ ಮಾಡುತ್ತಿದ್ದಾರೆ.
ಆತಿಯಾ ಶೆಟ್ಟಿ 2015ರಲ್ಲಿ ಹೀರೋ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಸುಮಾರು 5 ಸಿನಿಮಾದಲ್ಲಿ ನಟಿಸಿದ್ದ ಆತಿಯಾ 2019ರಲ್ಲಿ ಕೊನೆಯದಾಗಿ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದರು. 2023ರಲ್ಲಿ ತಮ್ಮ ಬಹುಕಾಲದ ಗೆಳೆಯ ರಾಹುಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು