ಇತ್ತೀಚಿನ ಸುದ್ದಿ
Panemangalore | ಶ್ರೀ ಕ್ಷೇತ್ರ ಪಾಣೇರು ಬಸದಿ: ಏಕಶಿಲಾ ಮಾನಸ್ತಂಭದ ಸ್ಥಾಪನಾ ಸಮಾರಂಭ
26/02/2026, 11:14
ಬಂಟ್ವಾಳ(reporterkarnataka.com): ಶ್ರೀ ಕ್ಷೇತ್ರ ಪಾಣೇರು ಭ.1008 ಶ್ರೀ ಅನಂತನಾಥ ತೀರ್ಥಂಕರರ ಜಿನ ಚೈತ್ಯಾಲಯದಲ್ಲಿ ಭವ್ಯ ಏಕಶಿಲಾ ಮಾನಸ್ತಂಭದ ಸ್ಥಾಪನಾ ಕಾರ್ಯಕ್ರಮ ಇತ್ತೀಚಿಗೆ ವಿದ್ಯುಕ್ತವಾಗಿ ನಡೆಯಿತು.
ಪರಮ ಪೂಜ್ಯ ಮುನಿ ಶ್ರೀ 108 ಚಂದ್ರಸಾಗರ ಮಹಾರಾಜರ ಪುಣ್ಯ ಸ್ಮರಣೆ ಯೊಂದಿಗೆ, ಪರಮ ಪೂಜ್ಯ ಮುನಿ ಶ್ರೀ 108 ಪರಮ ಸಾಗರ ಮಹಾರಾಜರು, ಪರಮ ಪೂಜ್ಯ ಮುನಿ ಶ್ರೀ 108 ಶ್ರೀ ವೀರ ಸಾಗರ ಮಹಾರಾಜರ ಶುಭಾಶೀರ್ವಾದಗಳೊಂದಿಗೆ, ಸೀಮೆಯ ಗುರುಗಳಾದ ಮೂಡುಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಆಶೀರ್ವಾದದೊಂದಿಗೆ, ಬೆಂಗಳೂರಿನ ಶಶಿಕಲಾ ಮತ್ತು ಸಂಪತ್ ಕುಮಾರ್ ಮತ್ತು ಮಕ್ಕಳು ಸಹಕಾರದಿಂದ ಏಕಶಿಲಾ ಮಾನಸ್ತಂಭದ ಸ್ಥಾಪನಾ ಕಾರ್ಯಕ್ರಮವು ಪಾಣೆಮಂಗಳೂರು ಬಸದಿಯ ಸಮಸ್ತ ಶ್ರಾವಕ ಬಂಧುಗಳ ಉಪಸ್ಥಿತಿಯಲ್ಲಿ ಬೃಹತ್ ಕ್ರೇನ್ ಸಹಾಯದಿಂದ ಧಾರ್ಮಿಕ ವಿಧಿ ವಿಧಾನ ಪೂರ್ವಕವಾಗಿ ಸ್ಥಾಪಿಸಲಾಯಿತು.


ಶ್ರೀ ಕ್ಷೇತ್ರ ಪಾಣೇರು ಬಸದಿಯ ಸಮಿತಿಯ ಅಧ್ಯಕ್ಷ ಸಂಪತ್ ಕುಮಾರ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮೋಹನ್ ರಾಜ್ ಚೌಟ, ಕಾರ್ಯದರ್ಶಿಗಳಾದ ಭುವನೇಂದ್ರ ಇಂದ್ರ, ಪ್ರಶಾಂತ್ ಜೈನ್, ಕಾರ್ಯನಿರ್ವಾಹಕರಾದ ಧರಣೇಂದ್ರ ಇಂದ್ರರು ಮತ್ತು ಸಮಿತಿಯ ಸರ್ವ ಸದಸ್ಯರು, ಗಣ್ಯ ಬಂಧುಗಳು, ಶ್ರಾವಕರು ಉಪಸ್ಥಿತರಿದ್ದರು.












