7:18 AM Monday25 - May 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ… ಮಂಗಳೂರು ವಿಮಾನ ದುರಂತ | ಕಾಕ್‌ಪಿಟ್‌ನಲ್ಲಿ ಹಾರಾಟದ ವೇಳೆ 1 ಗಂಟೆ 40… ಭಾರತೀಯರ ರಕ್ತಕ್ಕೆ ಪಾಕ್​ನಲ್ಲಿ ಪ್ರತೀಕಾರ: ಪುಲ್ವಾಮಾ ದಾಳಿ ಮಾಸ್ಟರ್‌ ಮೈಂಡ್ ಹಮ್ಜಾ ಬುರ್ಹಾನ್… ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: 80,535 ವಿದ್ಯಾರ್ಥಿಗಳ ಪೈಕಿ 36,764 ಮಂದಿ… ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದೇ ದುಬಾರೆ ದುರ್ಘಟನೆ ಕಾರಣ? ನಂಜನಗೂಡು | ಯಡಿಯಾಲ ಸುತ್ತಮುತ್ತ ಹುಲಿ ಹೆಜ್ಜೆ ಪತ್ತೆ: ಗ್ರಾಮಸ್ಥರಲ್ಲಿ ಆತಂಕ ದುಬಾರೆ ಆನೆ ಶಿಬಿರದಲ್ಲಿ ಮಾರ್ಗಸೂಚಿ ಪಾಲಿಸಲು ಸೂಚನೆ: ಕೊಡಗು ಉಸ್ತುವಾರಿ ಸಚಿವ ಬೋಸರಾಜು ಒಂದು ದೇಶ – ಒಂದು ಚುನಾವಣೆ: ವಿವಿಧ ವರ್ಗಗಳ ಅಭಿಪ್ರಾಯ ಆಲಿಸಿದ ಜಂಟಿ… ದುಬಾರೆಯಲ್ಲಿ ಆನೆಗಳ ಸ್ನಾನ ನಾಳೆಯಿಂದ 100 ಅಡಿ ದೂರದಲ್ಲಿ ನಿಂತು ನೋಡಲಷ್ಟೇ ಅವಕಾಶ:… ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಜನವರಿ ತಿಂಗಳ ಟಾಪರ್ ಆಗಿ ಬ್ರಿಶಾ ಇರಾ ಹಾಗೂ ರಿಶಾನಿ ಆಯ್ಕೆ

15/02/2026, 21:57

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜನವರಿ ತಿಂಗಳ ಟಾಪರ್ ಆಗಿ ಬ್ರಿಶಾ ಬಿ. ಇರಾ ಹಾಗೂ ರಿಷಾನಿ ಆಯ್ಕೆಯಾಗಿದ್ದಾರೆ.
6 ವರ್ಷದ ಬ್ರಿಶಾ ಬಿ.ಇರಾ, ಭಾಸ್ಕರ್ ಎಂ. ಇರಾ ಮತ್ತು ಸಂಜನಾ ಬಿ. ಇರಾ ಅವರ ಪುತ್ರಿ. ವಿಜಯಪುರ
ವಿದ್ಯಾ ವಿಕಾಸ್ ಮಂದಿರ ಸ್ಕೂಲ್ ನಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಈಕೆ ತನ್ನ 4ನೇ ವಯಸ್ಸಿನಿಂದ ಭರತನಾಟ್ಯ ಮತ್ತು ಫೋಕ್ ಡ್ಯಾನ್ಸ್ ಅನ್ನು ಪೂರ್ವಿ ಎನ್. ತಲ್ವಾರ್ ಅವರಿಂದ ಅಭ್ಯಾಸಿಸುತ್ತಿದ್ದಾಳೆ. ಇವಳು ಮೈಸೂರು, ಬೆಂಗಳೂರು , ಮಂಗಳೂರು, ವಾಯ್ಸ್ ಆಫ್ ಆರಾಧನಾ ಸಹಯೋಗದಿಂದ ಕೊಲ್ಲೂರು ಮೂಕಾಂಬಿಕೆ ಕ್ಷೇತ್ರ, ಅಥಣಿ , ವಿಜಯಪುರ , ಮುಧೋಳ ಬೆಳಗಾವಿ , ಪುಣೆ , ಮಹಾರಾಷ್ಟ್ರಹೀಗೆ 70ಕ್ಕೂ ಹೆಚ್ಚು ವೇದಿಕೆಯಲ್ಲಿ ತನ್ನ ನೃತ್ಯ ವನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದಾಳೆ. ಇವರಿಗೆ ಒದಗಿ ಬಂದ ಪ್ರಶಸ್ತಿಗಳು ಮೈಸೂರಿನಲ್ಲಿ ಲಾಸ್ಯ ಸಂಗಮ ಅವಾರ್ಡ್, ವಿಶ್ವ ಕನ್ನಡ ಜಾನಪದ ಪರಿಷತ್ ಹಾಗೂ ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು ಇವರಿಂದ ಸುವರ್ಣ ಕರ್ನಾಟಕ ನಾಟ್ಯ ಮಯೂರಿ ಪ್ರತಿಭಾ ಪುರಸ್ಕಾರ, ಕರ್ನಾಟಕ ನೃತ್ಯ ಕಲಾಚೇತನ ಪ್ರಶಸ್ತಿ, ಕಲಾ ರತ್ನ ಪ್ರಶಸ್ತಿ , ಕುದ್ರೋಳಿ ಭಗವತಿ ಕ್ಷೇತ್ರದಿಂದ ವಿಶಿಷ್ಟ ಸಾಧನ ಪುರಸ್ಕಾರ ಪ್ರಶಸ್ತಿ , ಇರಾ ಮಲಯಾಳಿ ಬಿಲ್ಲವ ಸಂಘದ ವತಿಯಿಂದ ಎಳೆಯ ಪ್ರತಿಭೆ ಪುರಸ್ಕರ ನೀಡಿ ಸನ್ಮಾನಿಸಲಾಗಿತ್ತು. ಹೀಗೆ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿದ್ದಾರೆ ಅಲ್ಲದೆ ಪುಣೆಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟ ಥೈಲ್ಯಾಂಡ್ ಆಯ್ಕೆಯಾಗಿದ್ದಳು. ನೃತ್ಯ ಮಾತ್ರ ಅಲ್ಲದೆ 2025 ರಲ್ಲಿ ನಡೆದ ನಾರ್ತ್ ಕರ್ನಾಟಕ ಬ್ಯೂಟಿ ಮಾಡೆಲ್ ಶೋ ಇದರಲ್ಲಿ ಉತ್ತಮ ಪ್ರದರ್ಶನ ಮಾಡಿ ನಾರ್ಥ್ ಕರ್ನಾಟಕ ಕಿಡ್ಸ್ ಕೆಟಗರಿಯಲ್ಲಿ ಫಸ್ಟ್ ರನ್ನರ್ ಆಫ್ ಆಗಿ ಹೊರಹೊಮ್ಮಿದ್ದಾರೆ.


ಸತೀಶ್ ಮತ್ತು ಗೀತಾ ಅವರ ಮಗಳಾದ ರಿಷಾನಿ ಬಿಜಾಪುರ ಜಿಲ್ಲೆಯ ಘೇವರಚಂದ್ ನಗರದಲ್ಲಿ ವಾಸಿಸುತ್ತಿದಾಳೆ. ರಿಶಾನಿ ಬಿಜಾಪುರ ಜಿಲ್ಲೆಯ ಅಪ್ಪು ಪಟ್ಟಣ ಶೆಟ್ಟಿ ಶಾಲೆಯ ಯುಕೆಜಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇವಳು ಸುಮಾರು ಒಂದು ವರ್ಷದಿಂದ ಭರತನಾಟ್ಯವನ್ನು ಗುರುಗಳಾದ ಪೂರ್ವಿ ತಳವಾರ ಅವರಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ರಿಶಾನಿ ಬಿಜಾಪುರದ ಅನೇಕ ಕಡೆ ತನ್ನ ನೃತ್ಯ ಪ್ರದರ್ಶನವನ್ನು ನೀಡಿರುತ್ತಾಳೆ. ಹಾಗೆಯೇ ಥೈಲ್ಯಾಂಡ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಅಲ್ಲೂ ತೃತೀಯ( ಕಂಚಿನ ಪದಕ) ಬಹುಮಾನವನ್ನು ಪಡೆದಿರುತ್ತಾಳೆ. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವಸ್ತು ಪ್ರದರ್ಶನದ ವೇದಿಕೆಯಲ್ಲಿ ಕೂಡ ತನ್ನ ನೃತ್ಯ ಪ್ರದರ್ಶನವನ್ನು ನೀಡಿರುತ್ತಾಳೆ. ಇವಳು western dance ಅಭ್ಯಾಸ ಮಾಡುತ್ತಿದ್ದಾಳೆ. ಜೊತೆಗೆ ವಿದ್ಯಾಭ್ಯಾಸದಲ್ಲಿ ಕೂಡ ಮುಂದೆ ಇದ್ದಾಳೆ, ಹಾಗೇನೇ ಇತರ cultural ಆಕ್ಟಿವಿಟಿಯಲ್ಲಿ ಕೂಡ ಭಾಗವಹಿಸಿ ಅಲ್ಲೂ ಬಹುಮಾನವನ್ನು ಪಡೆದಿರುತ್ತಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು