10:16 PM Thursday12 - February 2026
ಬ್ರೇಕಿಂಗ್ ನ್ಯೂಸ್
ಮಾಜಿ ಪ್ರಧಾನಿ ಎಚ್ಡಿಡಿ ಮಧ್ಯಪ್ರವೇಶ: ಕಾಫಿ ತೋಟಗಳ ಆನ್-ಲೈನ್ ಹರಾಜು ತಕ್ಷಣವೇ ಸ್ಥತಿತಗೊಳಿಸುವಂತೆ… ಕಾಲವೇ ಉತ್ತರ ಕೊಡುತ್ತೆ: ಸೋನಿಯಾ, ರಾಹುಲ್, ಪ್ರಿಯಾಂಕ ಭೇಟಿ ಬಳಿಕ ಡಿಸಿಎಂ ಡಿಕೆಶಿ… ಶಿವಣ್ಣನ ಶಿವಭಕ್ತಿ: ಶಿವರಾತ್ರಿಯ ಅಂಗವಾಗಿ 37 ವರ್ಷಗಳಿಂದ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ! ದಕ್ಷಿಣ ಕೊಡಗಿನಲ್ಲಿ ಆತಂಕದ ಸೃಷ್ಟಿಸಿದ್ದ ವ್ಯಾಘ್ರ ಕೊನೆಗೂ ಸೆರೆ: ಬಲೆಗೆ ಬಿದ್ದ ಗಂಡು… ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ…

ಇತ್ತೀಚಿನ ಸುದ್ದಿ

ಪುತ್ತೂರು ನಿವಾಸಿಗೆ 2.37 ಲಕ್ಷ ರೂ. ಆನ್ ಲೈನ್ ವಂಚನೆ: ಕೃಷ್ಣರಾಜ ಪೇಟೆಯ ಆರೋಪಿ ಬಂಧನ

12/02/2026, 21:26

ಪುತ್ತೂರು(reporterkarnataka.com): ಆನ್ ಲೈನ್ ವಂಚನೆ ಪ್ರಕರಣ ಸಂಬಂಧಿಸಿದಂತೆ ಮಂಡ್ಯ ಕೃಷ್ಣರಾಜ ಪೇಟೆಯ ನಿವಾಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ನಿವಾಸಿ ಯಶೋಧರ ಎಂಬವರಿಗೆ ಅಪರಿಚಿತ ವ್ಯಕ್ತಿಯೋರ್ವ ವಿವಿಧ ಮೊಬೈಲ್‌ ನಂಬರ್ ಗಳಿಂದ ದೂರವಾಣಿ ಕರೆ ಮಾಡಿ, ತಾನು Insurance ಕಂಪೆನಿಯೊಂದರಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, Insurance ಮಾಡಿಸಿಕೊಡುವುದಾಗಿ ಹಾಗೂ ಆ ಬಗ್ಗೆ ಹಣ ಪಾವತಿಸುವಂತೆ ತಿಳಿಸಿರುತ್ತಾನೆ. ಈ ಬಗ್ಗೆ
ಪಿರ್ಯಾದಿದಾರರು ಯಶೋಧರ ನಿರಾಕರಿಸಿರುತ್ತಾರೆ. ಆ ಬಳಿಕ ಆರೊಪಿಯು ಇನ್ಸುರೆನ್ಸ್‌ ಕ್ಯಾನ್ಸಲ್‌ ಮಾಡುವುದಾಗಿ ತಿಳಿಸಿ, ಯಶೋಧರ ಅವರ Credit Card ನಂಬರ್‌ ಹಾಗೂ OTP ಪಡೆದು,ಯಶೋಧರರ Credit Card ನಿಂದ 2,37,036/- ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿರುತ್ತಾನೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ: 52/2025, U/S: 66(D) IT ACT & 318(4), 319(2) BNS ರಂತೆ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಮಹಾರಾಷ್ಟ ಮೂಲದ ಹಾಗೂ ಪ್ರಸ್ತುತ ಮಂಡ್ಯ ಕೃಷ್ಣರಾಜ ಪೇಟೆಯಲ್ಲಿ ವಾಸಿಸುತ್ತಿರುವ ಆರೋಪಿ ಅವಿನಾಶ್‌ ರಮೇಶ್‌ ಗೌಡ (24) ಎಂಬಾತನನ್ನು ಫೆ. 11ರಂದು ದಸ್ತಗಿರಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನ ವಿಧಿಸಿರುವುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು