ಇತ್ತೀಚಿನ ಸುದ್ದಿ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಬೆಂದೂರುವೆಲ್ ಶಾಖೆಯ 14ನೇ ವಾರ್ಷಿಕೋತ್ಸವ; ಗ್ರಾಹಕರ ಸಭೆ
10/02/2026, 14:36
ಮಂಗಳೂರು(reporterkarnataka.com): ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಬೆಂದೂರುವೆಲ್ ಶಾಖೆಯ 14ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬೆಂದೂರುವೆಲ್ ಶಾಖೆಯ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಬೆಂದೂರುವೆಲ್ ಶಾಖೆಯಲ್ಲಿ ಜರುಗಿತು.
ಈ ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಶ್ರೀ ಕೃತೀಶ್ ಕುಮಾರ್, ಶ್ರೀಮತಿ ಪುಷ್ಪಲತಾ ಕೆ. ಶ್ರೀ ಮಾಧವ ಕೋಟ್ಯಾನ್, ಶ್ರೀ ಗೋಪಾಲ್ ಸುವರ್ಣ, ಶ್ರೀ ಕರುಣಾನಂದ ರಾವ್ ಹಾಗೂ ಶ್ರೀ ಅನಂತರಾಮ್ ಭಟ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಘದ ಸದಸ್ಯರಾದ ಶ್ರೀ ಕೃತೀಶ್ ಕುಮಾರ್ ಅವರು ಮಾತನಾಡಿ, “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ನೇತೃತ್ವದಲ್ಲಿ ಸಂಘದ ಸದಸ್ಯರಿಗೆ ಉತ್ತಮ ಸೇವೆ ನೀಡುತ್ತಿದೆ. ಬೆಂದೂರ್‌ವೆಲ್ ಶಾಖೆಯಲ್ಲಿ ಗ್ರಾಹಕರ ಸಂಖ್ಯೆ ಜಾಸ್ತಿ ಇದ್ದು ಇಲ್ಲಿ ಸ್ಥಳದ ಕೊರತೆ ಇರುವುದರಿಂದ ಶಾಖೆಯನ್ನು ವಿಸ್ತರಿಸಿದರೆ ಗ್ರಾಹಕರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ಸದಸ್ಯರಾದ ಶ್ರೀ ಮಾಧವ ಕೋಟ್ಯಾನ್ ಅವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅತೀ ಕಡಿಮೆ ಅವಧಿಯಲ್ಲಿ 33ನೇ ಶಾಖೆಯನ್ನು ತೆರೆದಿರುವುದು ಅಭಿನಂದನಾರ್ಹವಾಗಿದೆ. ಇದಕ್ಕಾಗಿ ಶ್ರಮಿಸಿದ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಯನ್ನು ತಿಳಿಸಿದರು.
ಸದಸ್ಯರಾದ ಶ್ರೀ ಶಂಕರ ಶೆಟ್ಟಿಯವರು ಮಾತನಾಡಿ, “ಬೆಂದೂರ್‌ವೆಲ್ ಶಾಖೆಯು ಆರಂಭದಿಂದಲು ಉತ್ತಮ ವ್ಯವಹಾರ ನಡೆಸುತ್ತಿದ್ದು , ಹಿರಿಯ ಸದಸ್ಯರಿಗೆ ಮನೆಗೆ ಬಂದು ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯ. ನಮ್ಮಂತ ಹಿರಿಯ ನಾಗರಿಕರಿಗೆ ಇದರಿಂದ ತುಂಬಾ ಪ್ರಯೋಜನವಾಗುತ್ತಿದೆ” ಎಂದು ತಿಳಿಸಿದರು.
ಶ್ರೀ ವಾಮನ್ ಮೈಂದಾನ್ ಹಾಗೂ ಶ್ರೀ ಲಿಯೋ ಆಂಬ್ರೋಝ್ ಅವರು ಸಂಘದ ಬೆಳವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ, “ಗ್ರಾಹಕರ ಪ್ರೋತ್ಸಾಹದಿಂದ ಸಂಘವು ಇಂದು ೩೩ ಶಾಖೆಯನ್ನು ಹೊಂದಲು ಕಾರಣೀಭೂತವಾಗಿದೆ. ಸಂಘದ ಪಾಲುಬಂಡವಾಳವು ೨೨.೫ ಲಕ್ಷದಿಂದ ಪ್ರಾರಂಭವಾಗಿ ಇಂದು ೩೦೦ ಕೋಟಿ ಠೇವಣಿಯಾಗಲು ಗ್ರಾಹಕರ ಸಹಕಾರದಿಂದ ಸಾದ್ಯವಾಗಿದೆ ಎಂದು ಪ್ರಶಂಸಿದರು. ಸಂಸ್ಥೆಯು ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ ಜೀವ ವಿಮೆ, ಆರೋಗ್ಯ ವಿಮೆ ಮತ್ತು ವಾಹನ ವಿಮಾ ಸೌಲಭ್ಯಗಳನ್ನು ಹೊಂದಿರುತ್ತದೆ. ಸಂಘದ ಗ್ರಾಹಕರ ಆರೋಗ್ಯದ ಕಾಳಜಿಯಿಂದ ಆರೋಗ್ಯ ಶಿಬಿರವನ್ನು ನಮ್ಮ ಸಂಘವು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ನಿರ್ದೇಶಕರಾದ ಶ್ರೀ ಆನಂದ ಎಸ್ ಕೊಂಡಾಣ, ಶ್ರೀ ಸೀತಾರಾಮ್ ಎನ್., ಶ್ರೀ ರಮನಾಥ್ ಸನಿಲ್ , ಶ್ರೀ ಮುದ್ದು ಮೂಡುಬೆಳ್ಳೆ , ಶ್ರೀ ಬಿ ಪಿ ದಿವಾಕರ , ಶ್ರೀ ಗೋಪಾಲ್ ಎಮ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಉಪಸ್ಥಿತರಿದ್ದರು.
ಸಂಘದ ಬೆಂದೂರುವೆಲ್ ಶಾಖೆಯ ಸಿಬ್ಬಂದಿಯಾದ ಕು. ನಿಶ್ಚಿತ ಸಾಲಿಯಾನ್ ರವರು ಸ್ವಾಗತಿಸಿ, ಶಾಖೆಯ ಸಿಬ್ಬಂದಿಯಾದ ಕು.ಪವಿತ್ರಾ ವಂದಿಸಿದರು. ಹಿರಿಯ ಶಾಖಾಧಿಕಾರಿಯಾದ ಶ್ರೀಮತಿ ಸೌಮ್ಯಲತಾ ಕಾರ್ಯಕ್ರಮ ನಿರೂಪಿಸಿದರು.













