10:49 AM Wednesday28 - January 2026
ಬ್ರೇಕಿಂಗ್ ನ್ಯೂಸ್
ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ… ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ

ಇತ್ತೀಚಿನ ಸುದ್ದಿ

ಲಕುಮಿ ಸಿನಿ ಕ್ರಿಯೇಶನ್ಸ್ ನ ‘ಅಕ್ಷಮ್ಯ’ ಕನ್ನಡ ಚಿತ್ರದ ಟೀಸರ್ ಬಿಡುಗಡೆ: ಮಂಗಳೂರು ಪೊಲೀಸ್ ಕಮಿಷನರ್ ಚಾಲನೆ

08/09/2021, 19:09

ಮಂಗಳೂರು(reporterkarnataka.com) : ಲಕುಮಿ ಸಿನಿ ಕ್ರಿಯೇಶನ್ಸ್ ಅರ್ಪಿಸುವ, ಶ್ರೀನಿವಾಸ್ ವಿ. ಶಿವಮೊಗ್ಗ ನಿರ್ದೇಶನ ಹಾಗೂ ಲ. ಕಿಶೋರ್ ಡಿ ಶೆಟ್ಟಿ ನಿರ್ಮಾಣದಲ್ಲಿ ಮೂಡಿ ಬಂದ “ಅಕ್ಷಮ್ಯ” ಕನ್ನಡ ಚಲನಚಿತ್ರದ ಟೀಸರ್ (ಆಫಿಷಿಯಲ್ ಟ್ರೈಲರ್) ಬಿಡುಗಡೆ ಕಾರ್ಯಕ್ರಮ ನಗರದ ಮಾಲೆಮಾರ್ ಸಮೀಪದ ಎಸ್‌ಡಿಎಂ ಫಿಲ್ಮ್  ಸ್ಟುಡಿಯೋದಲ್ಲಿ ಬುಧವಾರ ನೆರವೇರಿತು.

ಮಂಗಳೂರು ನಗರ ಪೊಲೀಸ್ ಅಯುಕ್ತ ಎನ್. ಶಶಿಕುಮಾರ್ ಅವರು ಟೀಸರ್ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭಕೋರಿದರು. ಪೊಲೀಸ್ ಇಲಾಖೆ ಸಂಪರ್ಕಾಧಿಕಾರಿ ಗೋಪಾಲಕೃಷ್ಣ ಕೆ., ಚಿತ್ರದ ನಿರ್ದೇಶಕ ಶ್ರೀನಿವಾಸ್ ಶಿವಮೊಗ್ಗ, ನಿರ್ಮಾಪಕ ಕಿಶೋರ್ ಡಿ ಶೆಟ್ಟಿ, ಸಹ ನಿರ್ಮಾಪಕರಾದ ಮೋಹನ್ ಕೊಪ್ಪಲ ಕದ್ರಿ, ಪ್ರಭು ಉಡುಪಿ, ಲೋಹಿತ್ ಶೆಟ್ಟಿ, ಸಂಗೀತ ನಿರ್ದೇಶಕ ರೂಬಿ ಜೋಸ್, ಸಂಕಲನಕಾರ ರಾಹುಲ್‌ ವಸಿಷ್ಠ, ಎಸ್ ಡಿಎಂ ಸ್ಟೂಡಿಯೋ ನಿರ್ದೇಶಕ ವಿಜಯ್ ಕುಮಾರ್, ಜೆಸ್ಸಿ ಸೆಬೇಸ್ಟಿನ್  ಹಾಗೂ ನಾಯಕ‌ ನಟ‌ ಪ್ರಕಾಶ್ ಶೆಟ್ಟಿ, ಕಲಾವಿದರಾದ ಅರುಣ್ ಬಿ.ಸಿ.ರೋಡ್, ಹರೀಶ್ ಬಂಗೇರ, ವಿನಾಯಕ್ ಜಪ್ಪು, ವಿಶ್ವಾಸ್ ಗುರುಪುರ, ಸುನೀಲ್ ಅಶೋಕ್ ನಗರ, ಲತೀಫ್ ಸಾಣೂರ್, ಗಣೇಶ್ ರೈ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.   

ಕೀರ್ತಿ ಕಾರ್ಯಕ್ರಮ ನಿರೂಪಿಸಿದರು.
ಯುವಪ್ರತಿಭೆಗಳಿಗೆ ಅವಕಾಶ ನೀಡುವ “ಲಕುಮಿ” ತಂಡ : ಸದಾ ಯುವಪ್ರತಿಭೆಗಳಿಗೆ ಅವಕಾಶ ನೀಡುವ ಲಕುಮಿ ಬ್ಯಾನರ್ ಈ ಬಾರಿಯು ಯುವ ನಿರ್ದೇಶಕನಿಗೆ ಅವಕಾಶವನ್ನು ಕಲ್ಪಿಸಿದೆ. ನಮ್ಮ ಕುಡ್ಲ ಚಿತ್ರದ ಮೂಲಕ ತುಳುಚಿತ್ರರಂಗಕ್ಕೆ ಪರಿಚಯಗೊಂಡ ಯುವ ನಾಯಕನಟ ಪ್ರಕಾಶ ಶೆಟ್ಟಿ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ.

ಯುವ ಛಾಯಾಗ್ರಹಕ ಅವಿನಾಶ್ ಕಾವೂರು ಕ್ಯಾಮರಾದಲ್ಲಿ ಕೈಚಳಕ ತೋರಿಸಿದ್ದಾರೆ. ಇನ್ನು ಚಿತ್ರದಲ್ಲಿ ತುಳುರಂಗಭೂಮಿಯ ಹೆಸರಾಂತ ಕಲಾವಿದ ಅರುಣ್ ಚಂದ್ರ ಬಿ.ಸಿ. ರೋಡ್, ಹರೀಶ್ ಬಂಗೇರ ಆರ್ಲಪದವು ಹಾಗೂ ಕಿರುತೆರೆ ನಟಿ ಸ್ವಾತಿ ಪ್ರಮುಖ ಪಾತ್ರದಲ್ಲಿ  ಅಭಿನಯಿಸಿದ್ದಾರೆ. ಲತೀಪ್ ಸಾಣೂರ್, ಸುರೇಶ್ ಮಂಜೇಶ್ವರ್, ರಾಜೇಶ್ ಸ್ಕೈಲಾರ್ಕ್, ವಿಶ್ವಾಸ್ ಗುರುಪುರ, ಪ್ರಿಯಾಂಕಾ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿರುವ ಇತರ ಕಲಾವಿದರು.

ಚಿತ್ರಕ್ಕೆ ರೂಬಿ ಜೋಸ್  ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದು, ಯುವ ಸಂಕಲನಕಾರ ರಾಹುಲ್ ವಸಿಷ್ಠ ಸಂಕಲನಕಾರನಾಗಿ ತಮ್ಮ ಕೈಚಲಕ ತೋರಿಸಿದ್ದಾರೆ. ತುಳಸಿದಾಸ್ ಮಂಜೇಶ್ವರ, ಮನೋಜ್ ಉಜಿರೆ, ಗಣೇಶ್ ರೈ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು