ಇತ್ತೀಚಿನ ಸುದ್ದಿ
ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿ ಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ: 1.25 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ
29/01/2026, 21:43
ಬಂಟ್ವಾಳ(reporterkarnataka.com): ಇಲ್ಲಿನ ಬಡಗಬೆಳ್ಳೂರು ಗ್ರಾಮದಲ್ಲಿ ನೆಲೆಸಿರುವ ಸಾವಿರಾರು ಭಕ್ತರ ಅಶಯಧಾಮವಾದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿದೆ. ಫೆ. 18ರಿಂದ 22 ರವರೆಗೆ ನಾನಾ ವೈದಿಕ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರುಗಲಿದೆ.

ದಿ.ಸದಾಶಿವ ಎಂ. ಕರ್ಕೇರ ಅವರಿಗೆ ವಿಶೇಷವಾಗಿ ಒಲಿದು ತ್ರಿಕಾಲ ಪೂಜೆ ಸ್ವೀಕರಿಸುತ್ತಿದ್ದ ಈ ಪುಣ್ಯಕ್ಷೇತ್ರವು, ಹಲವು ವರ್ಷಗಳಿಂದ ಗ್ರಾಮೀಣ ಬಡಜನರ ಇಷ್ಟಾರ್ಥ ಸಿದ್ಧಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಸಾಕ್ಷಿಯಾಗಿರುವ ಮಹಿಮೆ ಹೊಂದಿದೆ. ಇಷ್ಟಾರ್ಥ ಸಿದ್ಧಿಸಿದ ಪರಿವಾರ ದೈವಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ವರ್ಷಂಪ್ರತಿ ಜಾತ್ರಾದಿ ಉತ್ಸವಗಳು ಶ್ರದ್ಧಾಭಕ್ತಿಯಿಂದ ನಡೆಯುತ್ತಿವೆ. ಅಯ್ಯಪ್ಪ ಸ್ವಾಮಿಯ ಭಕ್ತರ ವಾರ್ಷಿಕ ವಿಶೇಷ ಪೂಜೆ ಸಂದರ್ಭದಲ್ಲೂ ಅನೇಕ ಪವಾಡ ಘಟನೆಗಳು ನಡೆದಿರುವುದಾಗಿ ಭಕ್ತರು ಹೇಳುತ್ತಾರೆ. ಮಾತು ಬಾರದವರಿಗೆ ಮಾತು ಬಂದ ಪ್ರಸಂಗ, ವರ ಸಿಗದವರಿಗೆ ವರ ಭಾಗ್ಯ, ಸಂತಾನ ಭಾಗ್ಯ ಲಭಿಸಿದ ಅನೇಕ ಉದಾಹರಣೆಗಳು ಈ ಕ್ಷೇತ್ರದ ಮಹಿಮೆಯನ್ನು ಸಾರುತ್ತವೆ. ಬ್ರಹ್ಮಕಲಶೋತ್ಸವದ ಪ್ರಯುಕ್ತ ಗ್ರಾಮಸ್ಥರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸಮಾಲೋಚನೆಯೊಂದಿಗೆ ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗಿದ್ದು, ಕಾಮಗಾರಿ ಕೊನೆಯ ಹಂತದಲ್ಲಿದೆ.
ಫೆ. 18ರಿಂದ 22 ರವರೆಗೆ ದೇವಸ್ಥಾನದ ತಂತ್ರಿ ವಿಷ್ಣುಮೂರ್ತಿ ತಂತ್ರಿ ಎಡಪದವು ಅವರ ನೇತೃತ್ವದಲ್ಲಿ, ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಹಾಗೂ ಪ್ರಶ್ನಾ ಚಿಂತನೆ ನಡೆಸಿದ ಮಿತ್ತೂರು ಕೇಶವ ಭಟ್ ಅವರ ಮಾರ್ಗದರ್ಶನದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ದೇಗುಲದಲ್ಲಿ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಅಮ್ಮನವರ ಹಾಗೂ `ಭರ್ಮದೆ`ವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವೈಭವದಿಂದ ಜರುಗಲಿದೆ.
ಫೆ.15ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ.
ಮಧ್ಯಾಹ್ನ 2ಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ ವೈಭವದ ಹೊರೆಕಾಣಿಕೆ ಮೆರವಣಿಗೆ ಮಂಗಾಜೆ-`Àನುಪೂಜೆ ಮಾರ್ಗವಾಗಿ ಹೊರಟು ಕಲ್ಪನೆಯಲ್ಲಿ ಸೇರಲಿದೆ. ಬಳಿಕ 4ಕ್ಕೆ ಚೆಂಡೆ, ವಾಲಗ, ಕುಣಿತ, `ಭಜನೆಯೊಂದಿಗೆ ಕಾಲ್ನಡಿಗೆ ಮೂಲಕ ಕಾವೇಶ್ವರ ಮಾರ್ಗವಾಗಿ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ಸಾಗಲಿದೆ












