8:18 PM Sunday5 - July 2026
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ…

ಇತ್ತೀಚಿನ ಸುದ್ದಿ

ಪೆರುವಾಯಿ: 4 ದನಗಳ ಕಳವು ಪ್ರಕರಣ: ಆರೋಪಿಯ ಬಂಧನ

09/01/2026, 21:36

ಬಂಟ್ವಾಳ(reporterkarnataka.com): ಪೆರುವಾಯಿ ಗ್ರಾಮದ ಸೊಸೈಟಿ ಆವರಣದಿಂದ ಹುಲ್ಲು ಮೇಯಲು ಹೋಗಿದ್ದ 4 ದನಗಳ ಕಳ್ಳತನ ನಡೆಸಿದ ಪ್ರಕರಣ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಡಿಸೆಂಬರ್ 18ರಂದು ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಸೊಸೈಟಿ ಆವರಣದಿಂದ ಹುಲ್ಲು ಮೇಯಲು ಹೋಗಿದ್ದ ಗಣೇಶ ರೈ ಹಾಗೂ ನಾರಾಯಣ ನಾಯ್ಕ ಎಂಬುವವರ ಒಟ್ಟು 4 ದನಗಳು ಕಳ್ಳತನವಾಗಿದ್ದರ ಬಗ್ಗೆ ಗಣೇಶ ರೈ ಎಂಬುವವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 169/2025 ರಂತೆ ದೂರು ದಾಖಲಾಗಿತ್ತು. ಜನವರಿ 8ರಂದು ಪ್ರಕರಣದ ಆರೋಪಿಯಾದ ಉಳ್ಳಾಲ ಗ್ರಾಮ ಕೋಡಿಯ
ಝುಲ್ಫಾನ್ ಮಾಲಿಕ್ ಉಳ್ಳಾಲ್ (30) ಎಂಬಾತನನ್ನು ಪೊಲೀದರು ದಸ್ತಗಿರಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು