ಇತ್ತೀಚಿನ ಸುದ್ದಿ
ವಿರಾಜಪೇಟೆ ಕೊಡಗು ಗೌಡ ಸಮಾಜಕ್ಕೆ ಸುಳ್ಯದ ಕುರುಂಜಿ ವೆಂಕರಮಣ ಗೌಡ ಕುಟುಂಬದಿಂದ 3.5 ಕೋಟಿ ಮೌಲ್ಯದ ಜಾಗ ದಾನ
05/09/2025, 12:23

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗು ಗೌಡ ಸಮಾಜಗಳ ಒಕ್ಕೂಟ ಮತ್ತು ಕೊಡಗಿನ ಗೌಡ ಜನಾಂಗಕ್ಕೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ವಿರಾಜಪೇಟೆ ಯಲ್ಲಿ ಸುಸಜ್ಜಿತ ಸಮಾಜದ ಕಟ್ಟಡ ಕಟ್ಟುವ ಅವಶ್ಯಕತೆಯಿದೆ ಎಂದು ದಿವಂಗತ ಕುರುಂಜಿ ವೆಂಕಟರಮಣ ಗೌಡರವರು 2004 ನೇ ಇಸವಿಯಲ್ಲಿ 77 ಸೆಂಟ್ ಜಾಗವನ್ನು 22 ಲಕ್ಷ ಹಣ ನೀಡಿ ಅವರ ಮಕ್ಕಳಾದ ಡಾ. ಕೆ ವಿ. ಚಿದಾನಂದ ಮತ್ತು ಡಾ ಕೆ ವಿ ರೇಣುಕಾ ಪ್ರಸಾದ್ ರವರ ಹೆಸರಿನಲ್ಲಿ ಖರೀದಿಸಿದ್ದ ಜಾಗ ಹಲವು ಕಾರಣಗಳಿಂದ 21 ವರ್ಷ ಗಳಿಂದ ವರ್ಗಾವಣೆ ಆಗದೇ ಇದ್ದ ಜಾಗವನ್ನು ಬಳಿಕ ತದ ನಂತರದಲ್ಲಿ ಅವರು ಆ ಜಾಗವನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಏಪ್ರಿಲ್ 18 ರ ಪ್ರಥಮ ಸಭೆಯಲ್ಲಿಯೇ ಈ ಕೆಲಸ ಕೈಗೆತ್ತಿಕೊಳ್ಳುವ ದೃಢ ತೀರ್ಮಾನ ಮಾಡಿಕೊಳ್ಳಲಾಯಿತು.
ಸತತ 4 ತಿಂಗಳು ದಾನಿಗಳ ಸಂಪರ್ಕದಲ್ಲಿದ್ದು ಹಲವಾರು ಸುತ್ತಿನ ಮಾತುಕತೆಗಳ ನಂತರ ಡಾ. ಕೆ ವಿ. ಚಿದಾನಂದ ಅವರ ಮನವೊಲಿಸಿ 5-6 ಬಾರಿಯ ಕರಡು ತಿದ್ದುಪಡಿಯ ನಂತರ ಡಾ ಕೆ. ವಿ. ಚಿದಾನಂದ ರವರ ಪರವಾಗಿ ಅವರ ಮಗ ಕೆ. ಸಿ. ಅಕ್ಷಯ್ ಹಾಗೇ ಡಾ ಕೆ. ವಿ. ರೇಣುಕಾ ಪ್ರಸಾದ್ ರವರ ಪರವಾಗಿ ಅವರ ಮಗ ಕೆ.ಆರ್. ಮೌರ್ಯರವರು ಮಡಿಕೇರಿ ಉಪ ನೋಂದಾವಣೆ ಕಚೇರಿಗೆ ಹಾಜರಾಗಿ ಇಂದಿಗೆ ಅಂದಾಜು 3.5 ಕೋಟಿ ಬೆಲೆಬಾಳುವ ಜಾಗವನ್ನು ವಿರಾಜಪೇಟೆ ಸಮಾಜಕ್ಕೆ ಅದರ ಅದ್ಯಕ್ಷರಾದ ಮುಕ್ಕಾಟಿ ವಾಸು ಗಣಪತಿ ಅವರ ಹೆಸರಿಗೆ ಜಾಗದ ದಾನಪತ್ರ ಬರೆಸಿ ಹಸ್ತಾಂತರ ಮಾಡಲಾಗಿದೆ.