6:41 PM Saturday3 - October 2026
ಬ್ರೇಕಿಂಗ್ ನ್ಯೂಸ್
ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ…

ಇತ್ತೀಚಿನ ಸುದ್ದಿ

*ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ*

29/08/2026, 20:03

ಉಡುಪಿ(reporterkarnataka.com): ಐತಿಹಾಸಿಕ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇತ್ತೀಚೆಗೆ ಮಠದ ಆಡಳಿತ ಮತ್ತು ವ್ಯವಸ್ಥೆಯ ಸುಧಾರಣೆ ದೃಷ್ಟಿಯಿಂದ ನಡೆಸಲಾದ ‘ಅಷ್ಟಮಂಗಲ ಪ್ರಶ್ನೆ’ಯ ಚಿಂತನೆಯಲ್ಲಿ ಇಡೀ ದೇಶ ಹಾಗೂ ಪ್ರಪಂಚಕ್ಕೇ ಕಾಳಸರ್ಪ ಯೋಗದ ಭೀಕರ ಗಂಡಾಂತರ ಕಾದಿದೆ ಎಂಬ ಆಘಾತಕಾರಿ ದೈವಿಕ ಮುನ್ಸೂಚನೆ ಬೆಳಕಿಗೆ ಬಂದಿದೆ.
ಈ ಜಾಗತಿಕ ಸಂಕಷ್ಟ ನಿವಾರಣೆಗಾಗಿ ಉಡುಪಿ ಕೃಷ್ಣ ಮಠ ಸೇರಿದಂತೆ ದೇಶದ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಬೃಹತ್ ಪ್ರಮಾಣದ ಧಾರ್ಮಿಕ ಪರಿಹಾರ ಕಾರ್ಯಗಳನ್ನು ಹಾಗೂ ಜಪ ಯಜ್ಞಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.

*ಡಿಸೆಂಬರ್ ಒಳಗೆ ಜಗತ್ತಿಗೆ ಆಪತ್ತು? ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡಿದ್ದೇನು?*
ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ, ರಾಹು ಮತ್ತು ಕೇತುಗಳ ಮಧ್ಯೆ ಉಳಿದ ಎಲ್ಲಾ ಗ್ರಹಗಳು ಬಂದಾಗ ‘ಕಾಳಸರ್ಪ ಯೋಗ’ ಸೃಷ್ಟಿಯಾಗುತ್ತದೆ. ಇದರ ದುಷ್ಪರಿಣಾಮ ಕೇವಲ ವ್ಯಕ್ತಿಗಳಿಗಷ್ಟೇ ಅಲ್ಲದೆ ಇಡೀ ಭೂಮಂಡಲಕ್ಕೆ ತಟ್ಟಲಿದೆ ಎಂದು ಪ್ರಶ್ನಾಚಿಂತನೆಯಲ್ಲಿ ತಿಳಿದು ಬಂದಿದೆ.

*ಪ್ರಾಕೃತಿಕ ವಿಕೋಪಗಳು:*
ಸುನಾಮಿ, ಭೂಕಂಪ, ಅತಿವೃಷ್ಟಿ ಅಥವಾ ಭೀಕರ ಬರಗಾಲದಂತಹ ನೈಸರ್ಗಿಕ ದುರಂತಗಳ ಸಾಧ್ಯತೆ.

*ಮಹಾಮಾರಿಗಳ ಭೀತಿ:* ಕರೋನಾದಂತಹ ಹೊಸ ಮಾದರಿಯ ಸಾಂಕ್ರಾಮಿಕ ರೋಗರುಜಿನಗಳು ಹರಡುವ ಆತಂಕ.
ರಾಜಕೀಯ & ಯುದ್ಧದ ಕಾರ್ಮೋಡ: ಆಡಳಿತ ವ್ಯವಸ್ಥೆಗಳಲ್ಲಿ ಕ್ಷೋಭೆ, ದೇಶ-ವಿದೇಶಗಳಲ್ಲಿ ಆಂತರಿಕ ಗಲಭೆಗಳು ಹಾಗೂ ಉಕ್ರೇನ್ ಯುದ್ಧದಂತಹ ಪರಿಸ್ಥಿತಿಗಳು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ.

ಈ ಎಲ್ಲಾ ದುಷ್ಪರಿಣಾಮಗಳು ಮುಂದಿನ ಡಿಸೆಂಬರ್ ತಿಂಗಳ ಒಳಗಾಗಿಯೇ ಜಗತ್ತಿನ ಮೇಲೆ ಗೋಚರಿಸಲಿವೆ ಎಂದು ಎಚ್ಚರಿಸಲಾಗಿದೆ.

*ದೋಷ ನಿವಾರಣೆಗೆ 18 ಕೋಟಿ ರಾಮ ಮಂತ್ರ, 1 ಕೋಟಿ ಕೃಷ್ಣ ಮಂತ್ರ ಜಪ!*
ಲೋಕ ಕಲ್ಯಾಣಕ್ಕಾಗಿ ಹಾಗೂ ಸಂಭವನೀಯ ಗಂಡಾಂತರಗಳನ್ನು ತಡೆಯಲು ದೈವಜ್ಞರು ಸೂಚಿಸಿರುವ ಪರಿಹಾರಗಳನ್ನು ಉಡುಪಿ ಶ್ರೀಕೃಷ್ಣ ಮಠದ ದಿವಾಣರಾದ ಉದಯ ಸರಳತ್ತಾಯ ಅವರು ಹಂಚಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು