6:55 AM Wednesday19 - November 2025
ಬ್ರೇಕಿಂಗ್ ನ್ಯೂಸ್
Mandya | ಶಿವನಸಮುದ್ರ: 4 ದಿನಗಳಿಂದ ನಾಲೆಯಲ್ಲಿ ಸಿಲುಕಿದ್ದ ಮರಿಯಾನೆಯ ರಕ್ಷಣೆ Kodagu | ಪಿರಿಯಾಪಟ್ಟಣ: ಅತ್ತೆ ಮನೆಗೆ ಬಂದು ಈಜಲು ಹೋದ ಬಾಲಕ ನೀರಿನಲ್ಲಿ… Madikeri | ಕಾಡಾನೆ ದಾಳಿಗೆ ಸಿಲುಕಿದ್ದ ಟೀ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ:… ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ

ಇತ್ತೀಚಿನ ಸುದ್ದಿ

ಜೀ ಕನ್ನಡದ ‘ಮಹಾನಟಿ’ ಗ್ರಾಂಡ್ ಫಿನಾಲೆಗೆ ಮೂಡುಬಿದ್ರೆಯ ಆರಾಧನಾ ಭಟ್: ಶಿಕ್ಷಣ ಕಾಶಿಯ ಮುಡಿಗೆ ಮತ್ತೊಂದು ಗರಿ

07/07/2024, 19:17

ಲತಾ ಎ. ಕಲ್ಲಡ್ಕ ಮಂಗಳೂರು

info.reporterkarnataka@gmail.com

ಅತಿಯಾದ ಉತ್ಸಾಹ, ಯಥೇಚ್ಛ ಹುಮ್ಮಸ್ಸು. ನಟನಾ ಕೌಶಲ್ಯ ಜತೆಗೆ ಮಾತಲ್ಲೇ ಮೋಡಿ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ನಟಿ ಆರಾಧನಾ ಭಟ್ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ಶೋನಲ್ಲಿ ಸೆಮಿಫೈನಲ್ಸ್ ನಿಂದ ಗ್ರಾಂಡ್ ಫಿನಾಲೆಗೆ ಆಯ್ಕೆಯಾಗಿದ್ದಾರೆ.
ಮಜಾಭಾರತದ ಮೂಲಕ ಬಾಲನಟಿಯಾಗಿ ನಟನಾ ರಂಗಕ್ಕೆ ಕಾಲಿಟ್ಟ ಆರಾಧನಾ ಭಟ್ ಅವರು ಅನೇಕ ಚಲನಚಿತ್ರ, ಕಿರುಚಿತ್ರ, ಆಲ್ಬಂ ಸಾಂಗ್ ಗಳಲ್ಲಿ ನಟಿಸಿ ನಾಡಿನುದ್ದಗಲಕ್ಕೂ ಗುರುತಿಸಿಕೊಂಡಿದ್ದಾರೆ.
ಕಿರು ಹರೆಯದಲ್ಲೇ ಡಜನಿಗೂ ಅಧಿಕ ಸಿನಿಮಾ, ರಿಯಾಲಿಟಿ ಶೋ, ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳ ನಿರೂಪಕಿ, ಆರದಿರಲಿ ಬದುಕು ಆರಾಧನಾ ತಂಡದ ಒಡತಿಯಾಗಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಡಜನ್ ಗಟ್ಟಲೆ ಪುರಸ್ಕಾರ ಈ ಮರಿ ತಾರೆಯ ಹಿರಿಮೆ.
ಮೂಡುಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿರುವ ಆರಾಧನಾ ಇದೀಗ ಪದವಿ ತರಗತಿಯ ವಿದ್ಯಾರ್ಥಿನಿ. ನಿಡ್ಡೋಡಿಯ ಪದ್ಮಶ್ರೀ ಹಾಗೂ ಮೈಸೂರಿನ ರಾಜಗಿರಿ ದಂಪತಿಯ ಎರಡನೇ ಮುದ್ದಿನ ಮಗಳು.
ಚಿಕ್ಕ ವಯಸ್ಸಿನಲ್ಲೇ ಆರಾಧನಾಗೆ ನಟನೆಯ ಸೆಳೆತ.
ಇದರ ಹಿಂದೆ ತಾಯಿ ಪದ್ಮಶ್ರೀಯವರ ಛಲ. ಇವೆಲ್ಲದರ ಫಲವಾಗಿ 8ನೇ ತರಗತಿಯಲ್ಲಿ ಓದುತ್ತಿದ್ದಾಗ ಮಜಾಭಾರತ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದಾರೆ. ನಂತರ ನಟನೆಯಲ್ಲಿ ಆರಾಧನಾ ಹಿಂತಿರುಗಿ ನೋಡಿಯೇ ಇಲ್ಲ. ಮಜಾಭಾರತದಲ್ಲಿ ಅದ್ಭುತ ನಟನೆಯ ಮೂಲಕ ಇಡೀ ರಾಜ್ಯದ ಜನತೆಯ ಹೃದಯದಲ್ಲಿ ಅಚ್ಚೊತ್ತಿದ್ದಾರೆ.
ಆರಾಧನಾ ಭಟ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ‘ಜೀವನ ವಿಲೀನ’ ಸಿನಿಮಾದಲ್ಲಿ ಅದ್ಭುತ ನಟನೆ ನೀಡಿದ್ದಾರೆ. ಈ ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ. ನಂತರ ‘ಪುಟಾಣಿ ಪವರ್’ ಮಕ್ಕಳ ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಕರ್ಣೆ’ ತುಳು ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗೆ ಅದಿತಿ ಪ್ರಭುದೇವ್ ಅವರ ಜತೆ ಕೂಡ ನಟಿಸಿದ್ದಾರೆ.


ಅರಗಿಣಿ ಖ್ಯಾತಿಯ ಆರಾಧನಾ ನಟನೆ, ಗಾಯನ, ನೃತ್ಯ, ನಿರೂಪಣೆ ಜತೆಗೆ ಸಣ್ಣ ವಯಸ್ಸಿನಲ್ಲೇ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಅಸಹಾಯಕರಿಗೆ, ನಿರಾಶ್ರಿತರಿಗೆ ಹಾಗೂ ದುರ್ಬಲರಿಗೆ ತನ್ನ ‘ಆರದಿರಲಿ ಬದುಕು ಆರಾಧನಾ’ ತಂಡದ ಮೂಲಕ ಆರ್ಥಿಕ ನೆರವು ನೀಡುತ್ತಿದ್ದಾರೆ.
ಆರಾಧನಾಳಿಗೆ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದಿವೆ. ಕರ್ನಾಟಕ ಪ್ರತಿಭಾ ರತ್ನ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಮಾಜಿಕ ಕಳಕಳಿ ಪುರಸ್ಕಾರ, ಸಾಧನಾಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಪುಟ್ಟ ಮುಡಿಯನ್ನೇರಿದೆ. ಎಲ್ಲಕ್ಕಿಂತ ಮಿಗಿಲಾಗಿ ಈಕೆ ರಿಪೋರ್ಟರ್ ಕರ್ನಾಟಕದ ಬ್ರಾಂಡ್ ಅಂಬಾಸಿಡರ್ ಕೂಡ ಹೌದು. ರಿಪೋರ್ಟರ್ ಕರ್ನಾಟಕ ವತಿಯಿಂದ ಆರಾಧನಾಗೆ ಅಲ್ ದಿ ಬೆಸ್ಟ್.

ಇತ್ತೀಚಿನ ಸುದ್ದಿ

ಜಾಹೀರಾತು